ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕೇಂದ್ರದಲ್ಲಿ ಕಾಂಗ್ರೆಸ್; ಕಸ್ಟಡಿ ಸಾವಿನಲ್ಲಿ ಶೇ.42 ಹೆಚ್ಚಳ (Custodial deaths | UPA rule | ACHR | Torture in India 2010)
Bookmark and Share Feedback Print
 
ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ 2004ರಲ್ಲಿ ಅಧಿಕಾರಕ್ಕೆ ಬಂದ ನಂತರ ದೇಶದಲ್ಲಿ ಕಸ್ಟಡಿ ಸಾವುಗಳ ಸಂಖ್ಯೆ ಶೇ.41.66ರಷ್ಟು ಹೆಚ್ಚಾಗಿದೆ ಎಂದು ಸಮಾಜ ಸೇವಾ ಸಂಘಟನೆಯೊಂದು ತಿಳಿಸಿದೆ. ಅದರ ಪ್ರಕಾರ 1999-2009ರ ಅವಧಿಯಲ್ಲಿ ಕರ್ನಾಟಕವು 69 ಕಸ್ಟಡಿ ಸಾವು ಪ್ರಕರಣವನ್ನು ದಾಖಲಿಸಿದೆ.

ನವದೆಹಲಿಯಲ್ಲಿನ ಏಷಿಯನ್ ಸೆಂಟರ್ ಫಾರ್ ಹ್ಯೂಮನ್ ರೈಟ್ಸ್ ಸಂಘಟನೆಯು ಬಿಡುಗಡೆ ಮಾಡಿರುವ 'ಭಾರತದಲ್ಲಿ ಚಿತ್ರಹಿಂಸೆ 2010' ಎಂಬ ವರದಿಯಲ್ಲಿ ಈ ಎಲ್ಲಾ ವಿಚಾರಗಳನ್ನು ಬಹಿರಂಗಪಡಿಸಲಾಗಿದೆ.

ಅದರ ಪ್ರಕಾರ 2000-01ರ ಅವಧಿಯ ಅಂಕಿ-ಅಂಶಗಳನ್ನು ಆಧಾರವಾಗಿಟ್ಟುಕೊಂಡು ನೋಡಿದಾಗ 2004-05 ಮತ್ತು 2007-08ರ ಅವಧಿಯ ನಡುವೆ ಕಸ್ಟಡಿ ಸಾವುಗಳಲ್ಲಿ ಶೇ.41.66ರಷ್ಟು ಹೆಚ್ಚಳ ಕಂಡು ಬಂದಿದೆ ಎಂದು ವರದಿಯಲ್ಲಿ ವಿವರಣೆ ನೀಡಲಾಗಿದೆ.

ಈ ಸಂದರ್ಭದಲ್ಲಿ ಕಾರಾಗೃಹದಲ್ಲಿದ್ದ ಕೈದಿಗಳಲ್ಲಿ ಶೇ.70.72 ಹಾಗೂ ಪೊಲೀಸ್ ವಶದಲ್ಲಿದ್ದ ವ್ಯಕ್ತಿಗಳಲ್ಲಿ ಶೇ.12.60ರಷ್ಟು ಸಾವಿನ ಪ್ರಕರಣಗಳು ಹೆಚ್ಚಳವಾಗಿದೆ.

ಈ ರೀತಿ ಚಿತ್ರಹಿಂಸೆ ಮತ್ತು ಅಮಾನವೀಯತೆಗೊಳಗಾಗುತ್ತಿರುವವರು ಜನ ಸಾಮಾನ್ಯರು. ಆದರೆ ಇಂತಹ ಸಾಮಾನ್ಯ ಜನತೆಯ ಹಕ್ಕುಗಳ ಉಲ್ಲಂಘನೆಯಾಗುತ್ತಿರುವುದನ್ನು ತಡೆಯಲು ಯುಪಿಎ ಸರಕಾರಕ್ಕೆ ಸಾಧ್ಯವಾಗಿಲ್ಲ ಎಂದು ಎಸಿಎಚ್ಆರ್ ನಿರ್ದೇಶಕ ಸುಹಾಸ್ ಚಕ್ಮಾ ತಿಳಿಸಿದ್ದಾರೆ.

ಈ ವರದಿಯ ಪ್ರಕಾರ 1999-2009ರ ನಡುವೆ ಕಾಂಗ್ರೆಸ್ ಮತ್ತು ಎನ್‌ಸಿಪಿ ಮೈತ್ರಿ ಕೂಟ ಆಡಳಿತದಲ್ಲಿರುವ ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಅಂದರೆ 246 ಕಸ್ಟಡಿ ಸಾವುಗಳು ಸಂಭವಿಸಿವೆ.

ಉಳಿದಂತೆ ಉತ್ತರ ಪ್ರದೇಶದಲ್ಲಿ 165, ಗುಜರಾತಿನಲ್ಲಿ 139, ಪಶ್ಚಿಮ ಬಂಗಾಲದಲ್ಲಿ 112, ಆಂಧ್ರಪ್ರದೇಶ 99, ತಮಿಳುನಾಡಿನಲ್ಲಿ 93, ಅಸ್ಸಾಂ 91, ಪಂಜಾಬ್‌ನಲ್ಲಿ 71, ಕರ್ನಾಟಕದಲ್ಲಿ 69, ಮಧ್ಯಪ್ರದೇಶದಲ್ಲಿ 66, ಹರ್ಯಾಣದಲ್ಲಿ 45, ಬಿಹಾರದಲ್ಲಿ 43, ದೆಹಲಿಯಲ್ಲಿ 42, ಕೇರಳದಲ್ಲಿ 41, ರಾಜಸ್ಥಾನದಲ್ಲಿ 38, ಜಾರ್ಖಂಡ್‌ನಲ್ಲಿ 31, ಒರಿಸ್ಸಾದಲ್ಲಿ 27 ಮತ್ತು ಛತ್ತೀಸ್‌ಗಢದಲ್ಲಿ 23 ಕಸ್ಟಡಿ ಸಾವುಗಳು ಸಂಭವಿಸಿವೆ ಎಂದು ವರದಿ ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ