ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ರಾಜ್ಯಸಭೆ ಸೀಟಿಗೆ ಕಾಂಗ್ರೆಸ್ ಬೆಂಬಲ ಕೇಳ್ತೀವಿ: ದೇವೇಗೌಡ (Devegowda | Price Rise | BJP Govt | Karnataka | Rajyasabha Election)
Bookmark and Share Feedback Print
 
ಜೂನ್ ಮಾಸಾಂತ್ಯದಲ್ಲಿ ಕರ್ನಾಟಕದಿಂದ ಖಾಲಿ ಬೀಳಲಿರುವ ನಾಲ್ಕು ರಾಜ್ಯಸಭಾ ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ, ಜೆಡಿಎಸ್ ಅಭ್ಯರ್ಥಿಗೆ ಬೆಂಬಲ ನೀಡುವಂತೆ ಕಾಂಗ್ರೆಸ್ ಪಕ್ಷವನ್ನು ಕೋರುವುದಾಗಿ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದ್ದಾರೆ.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಈ ಹಿಂದೆ ಎರಡು ಬಾರಿ ಕಾಂಗ್ರೆಸಿಗೆ ಬೆಂಬಲ ಕೊಟ್ಟಿದ್ದೇವೆ. ಹೀಗಾಗಿ ಈ ಬಾರಿ ಅದರ ಬೆಂಬಲ ಯಾಚಿಸುತ್ತಿದ್ದು, ಪಕ್ಷದ ವತಿಯಿಂದ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಕನ್ವರ್ ಡ್ಯಾನಿಷ್ ಅಲಿ ಅವರನ್ನು ಕಣಕ್ಕಿಳಿಸುವುದಾಗಿ ತಿಳಿಸಿದ್ದಾರೆ.

ಬಿಜೆಪಿಯ ಎ.ವೆಂಕಯ್ಯ ನಾಯ್ಡು, ಕಾಂಗ್ರೆಸ್‌ನ ಆಸ್ಕರ್ ಫೆರ್ನಾಂಡಿಸ್ ಹಾಗೂ ಬಿ.ಕೆ.ಹರಿಪ್ರಸಾದ್ ಹಾಗೂ ಜೆಡಿಎಸ್‌ನ ಎಂ.ಎಂ.ಎಂ. ರಾಮಸ್ವಾಮಿ ಅವರ ರಾಜ್ಯಸಭಾ ಸದಸ್ಯತ್ವವು ಜೂನ್ ತಿಂಗಳಲ್ಲಿ ಕೊನೆಗೊಳ್ಳಲಿದೆ.

ವಿಧಾನಸಭೆಯಲ್ಲಿ ಸಾಕಷ್ಟು ಸೀಟುಗಳಿರುವುದರಿಂದ ಎರಡು ಸ್ಥಾನಗಳನ್ನು ಯಾವುದೇ ಸಮಸ್ಯೆಯಿಲ್ಲದೆ ಗೆದ್ದುಕೊಳ್ಳುವಲ್ಲಿ ಬಿಜೆಪಿ ಸಮರ್ಥವಾಗಿದ್ದರೆ, ಕಾಂಗ್ರೆಸ್ ಒಂದು ಸ್ಥಾನ ಗೆಲ್ಲಲು ಸಮರ್ಥವಾಗಿದೆ. ಹೀಗಾಗಿ ಉಳಿದ ಒಂದು ಸ್ಥಾನಕ್ಕೆ ಸ್ಪರ್ಧೆ ಏರ್ಪಡಲಿದೆ. ಇದು ತಮಗೆ ದೊರೆಯಬೇಕೆಂಬುದು ಜೆಡಿಎಸ್ ಪ್ರಯತ್ನ.

ಬೆಲೆ ಏರಿಕೆ ವಿರುದ್ಧ ರಾಷ್ಟ್ರಾದ್ಯಂತ ಪ್ರತಿಭಟನೆ:
ಜೆಡಿಎಸ್ ಇತರ 13 ಪಕ್ಷಗಳೊಂದಿಗೆ ಸೇರಿಕೊಂಡು ಬೆಲೆ ಏರಿಕೆ ವಿರುದ್ಧ ಏಪ್ರಿಲ್ 27ರಿಂದ ದೇಶಾದ್ಯಂತ ಹರತಾಳ ನಡೆಸಲಿದೆ ಎಂದೂ ದೇವೇಗೌಡರು ಇದೇ ಸಂದರ್ಭ ಘೋಷಿಸಿದರು. ಇದು ಕೇಂದ್ರದ ವಿರುದ್ಧ ಮಾತ್ರವಲ್ಲದೆ, ರಾಜ್ಯದ ಬಿಜೆಪಿ ಆಡಳಿತದ ವಿರುದ್ಧವೂ ಆಗಿರುತ್ತದೆ ಎಂದು ಅವರು ಹೇಳಿದರು.

ಕೇಂದ್ರದಷ್ಟೇ ರಾಜ್ಯ ಸರಕಾರವೂ ಜೀವನಾವಶ್ಯಕ ವಸ್ತುಗಳಾದ ಹಾಲು ಮತ್ತು ನೀರಿನ ಬೆಲೆ ಏರಿಸಿದೆ ಮಾತ್ರವಲ್ಲದೆ ಪ್ರತಿದಿನ ಐದರಿಂದ ಎಂಟು ಗಂಟೆಗಳ ಕಾಲ ವಿದ್ಯುತ್ ಕಡಿತ ಮಾಡುತ್ತಿದೆ ಎಂದವರು ಆರೋಪಿಸಿದರು.

ಮೇ 12ರಿಂದ 13 ಜಿಲ್ಲೆಗಳಲ್ಲಿ ಪ್ರವಾಸ ಮಾಡಿ, ಕರ್ನಾಟಕ ಸರಕಾರದ ವೈಫಲ್ಯಗಳ ಬಗ್ಗೆ ಜಾಗೃತಿ ಮೂಡಿಸುವುದಾಗಿಯೂ ಅವರು ಹೇಳಿದರು.
ಸಂಬಂಧಿತ ಮಾಹಿತಿ ಹುಡುಕಿ