ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅದ್ಧೂರಿ ಆರತಕ್ಷತೆ; ಸಾನಿಯಾಗೆ ಪಾಕ್‌ನಿಂದ ಚಿನ್ನದ ಕಿರೀಟ (Pakistan | Sania-Shoaib reception | Shoaib Malik | Sania Mirza)
Bookmark and Share Feedback Print
 
ಮದುವೆ, ಮೆಹೆಂದಿ, ಸಂಗೀತ್ ಮುಗಿಸಿಕೊಂಡಿರುವ ಸಾನಿಯಾ ಮಿರ್ಜಾ - ಶೋಯಿಬ್ ಮಲಿಕ್ ದಂಪತಿ ಇದೀಗ ಅದ್ದೂರಿ ಆರತಕ್ಷತೆಗೆ ಸಿದ್ಧರಾಗಿದ್ದಾರೆ. ಅತ್ತ ಶೋಯಿಬ್ ತವರಿನಿಂದ ಪಾಕಿಸ್ತಾನದ ಸಚಿವೆಯೊಬ್ಬರು ಚಿನ್ನದ ಕಿರೀಟವನ್ನು ತಂದಿದ್ದು, ಇಂದು ಅದನ್ನು ಸಾನಿಯಾ ಮುಡಿಗೇರಿಸಲಿದ್ದಾರೆ.

ಸಾನಿಯಾ ಅವರ ಗಂಡ ಶೋಯಿಬ್‌ರ ಹುಟ್ಟೂರು ಸಾಯಿಲ್‌ಕೋಟ್‌ನಲ್ಲಿನ ಜನತೆ ಉಡುಗೊರೆಯಾಗಿ ನೀಡಿರುವ ಈ ಚಿನ್ನದ ಕಿರೀಟವನ್ನು ಅಲ್ಲಿನ ಜನ ಕಲ್ಯಾಣ ಸಚಿವೆ ಫಿರ್ದಾಸ್ ಆಶಿಕ್ ಆವಾನ್ ಪಾಕಿಸ್ತಾನದಿಂದ ಭಾರತಕ್ಕೆ ತಂದಿದ್ದಾರೆ.
PTI


ಸಾನಿಯಾ-ಶೋಯಿಬ್ ಆರತಕ್ಷತೆಯಲ್ಲಿ ಅವರು ಪಾಕಿಸ್ತಾನ ಸರಕಾರವನ್ನು ಪ್ರತಿನಿಧಿಸುತ್ತಿದ್ದಾರೆ. ಈಗಾಗಲೇ ಅವರು ಹೈದರಾಬಾದ್‌ಗೆ ಆಗಮಿಸಿದ್ದು, ಇಂದು ಸಂಜೆ ನಡೆಯಲಿರುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಅಲ್ಲದೆ ಪಾಕಿಸ್ತಾನ ಅಧ್ಯಕ್ಷ ಆಸಿಫ್ ಜರ್ದಾರಿ ಮತ್ತು ಪ್ರಧಾನಿ ಯೂಸುಫ್ ರಾಜಾ ಗಿಲಾನಿಯವರು ನೀಡಿರುವ ಉಡುಗೊರೆಯನ್ನು ಕೂಡ ಸಚಿವೆ ಇದೇ ಸಂದರ್ಭದಲ್ಲಿ ಹಸ್ತಾಂತರಿಸಲಿದ್ದಾರೆ. ಅವರು ಯಾವ ಉಡುಗೊರೆಯನ್ನು ನೀಡಿದ್ದಾರೆಂದು ನನಗೆ ಗೊತ್ತಿಲ್ಲ, ಅದನ್ನು ಸಾನಿಯಾ ತೆರೆದ ನಂತರವಷ್ಟೇ ಅದು ತಿಳಿದು ಬರಲಿದೆ ಎಂದು ಆವಾನ್ ತಿಳಿಸಿದ್ದಾರೆ.

ತಾಜ್ ಕೃಷ್ಣಾದಲ್ಲಿ ಆರತಕ್ಷತೆ...
ಮೂಲಗಳ ಪ್ರಕಾರ ಈ ಆರತಕ್ಷತೆ ಕಾರ್ಯಕ್ರಮದಲ್ಲಿ ಕನಿಷ್ಠ ಒಂದು ಸಾವಿರ ಅತಿಥಿಗಳು ಪಾಲ್ಗೊಳ್ಳಲಿದ್ದಾರೆ. ಸಿನಿಮಾ, ರಾಜಕೀಯ, ಕ್ರೀಡೆ ಹೀಗೆ ಎಲ್ಲಾ ವಲಯಗಳಿಂದಲೂ ಆಪ್ತರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ ಎಂದು ಮೂಲಗಳು ಹೇಳಿವೆ.

ಹೈದರಾಬಾದ್‌ನ ತಾಜ್ ಕೃಷ್ಣಾ ಪಂಚತಾರಾ ಹೊಟೇಲಿನಲ್ಲಿ ನಡೆಯಲಿರುವ ಈ ಅದ್ದೂರಿ ಕಾರ್ಯಕ್ರಮಕ್ಕೆ ಪಾಕಿಸ್ತಾನದಿಂದಲೂ ಹಲವರು ಬಂದಿದ್ದಾರೆ. ಕ್ರಿಕೆಟ್ ಆಟಗಾರ ಸೊಹೈಲ್ ತನ್ವೀರ್ ಈಗಾಗಲೇ ಹೈದರಾಬಾದ್‌ಗೆ ಬಂದಿಳಿದಿದ್ದಾರೆ.

ನಟರಾದ ಸಲ್ಮಾನ್ ಖಾನ್, ಶಾಹಿದ್ ಕಪೂರ್, ಟೆನಿಸ್ ತಾರೆಗಳಾದ ಲಿಯಾಂಡರ್ ಪೇಸ್, ಮಹೇಶ್ ಭೂಪತಿ, ಖ್ಯಾತ ಶಟ್ಲ್ ಆಟಗಾರ ಪುಲ್ಲೇಲಾ ಗೋಪಿಚಂದ್ ಮುಂತಾದ ಗಣ್ಯರು ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ.

ಮಗಳ ಹೆಸರನ್ನೇ ಬದಲಾಯಿಸಿದರು...
ಮದುವೆ ವಿವಾದದಿಂದ ಭಾರೀ ವಿವಾದಕ್ಕೆ ಈಡಾದ ಹೆಸರು ನಮ್ಮ ಮಗಳಿಗೆ ಬೇಡವೆಂದ ದಂಪತಿ ಮಗುವಿನ ಹೆಸರನ್ನೇ ಬದಲಾಯಿಸಿದ್ದಾರೆ.

ಸಾನಿಯಾ ಮಿರ್ಜಾ ದೇಶದ ಕೀರ್ತಿ ಪತಾಕೆಯನ್ನು ಹಾರಿಸಿದ ಕಾರಣಕ್ಕಾಗಿ 2002ರಲ್ಲಿ ಗೀತಾ ಮತ್ತು ಮದನ್ ಲಾಲ್ ದಂಪತಿ ತಮ್ಮ ಮಗಳಿಗೆ ಸಾನಿಯಾ ಎಂದು ನಾಮಕರಣ ಮಾಡಿದ್ದರು. ಆದರೆ ಇದೀಗ ಸಂಗೀತಾ ಎಂದು ಹೆಸರು ಬದಲಾಯಿಸಿಕೊಂಡಿದ್ದಾರೆ.

ತಾವು ಹಿಂದೂಗಳಾಗಿದ್ದರೂ ಮುಸ್ಲಿಂ ಹೆಸರನ್ನು ತಮ್ಮ ಮಗಳಿಗೆ ಇಟ್ಟಿರುವುದಕ್ಕಾಗಿ ಯಾವುದೇ ಸಮಸ್ಯೆಗಳು ಎದುರಾಗಿರಲಿಲ್ಲ. ಸಾನಿಯಾ ಮಿರ್ಜಾ ದೇಶಕ್ಕಾಗಿ ಆಡಿ ಸಾಧನೆ ಮಾಡಿರುವುದರಿಂದ ನಮಗೆ ಹೆಮ್ಮೆಯಾಗಿತ್ತು. ಆದರೆ ಇದೀಗ ಆಕೆ ಪಾಕಿಸ್ತಾನಿ ಆಟಗಾರನನ್ನು ಮದುವೆಯಾಗಿರುವುದರಿಂದ ಈ ನಿರ್ಧಾರಕ್ಕೆ ಬಂದಿದ್ದೇವೆ. ಅವರು ಭಾರತೀಯ ವ್ಯಕ್ತಿಯನ್ನು ವರಿಸುತ್ತಿದ್ದರೆ ನಾವು ಮಗಳ ಹೆಸರನ್ನು ಬದಲಾವಣೆ ಮಾಡುತ್ತಿರಲಿಲ್ಲ ಎಂದು ಸಂಗೀತಾಳ ತಂದೆ ಹೇಳಿಕೊಂಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ