ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನಕ್ಸಲ್ ದಮನ ರಾಜ್ಯಗಳ ಮೊದಲ ಹೊಣೆ: ಚಿದಂಬರಂ (Maoists | Dantewada | Naxals | BJP | Congress | P Chidambaram | Arun Jaitley)
Bookmark and Share Feedback Print
 
ನಕ್ಸಲ್ ಹಿಂಸಾಚಾರ ನಿರ್ವಹಣೆಯಲ್ಲಿ ವಿಫಲವಾಗಿರುವುದಕ್ಕಾಗಿ ಪ್ರತಿಪಕ್ಷಗಳ ತೀವ್ರ ವಾಗ್ದಾಳಿಗೆ ಗುರಿಯಾಗಿರುವ ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವು, ಮಾವೋವಾದಿಗಳ ಪಿಡುಗಿನ ವಿರುದ್ಧ ಹೋರಾಡುವುದು ರಾಜ್ಯ ಸರಕಾರಗಳ ಆದ್ಯ ಹೊಣೆಗಾರಿಕೆ ಮತ್ತು ಕೇಂದ್ರವು ಅವರಿಗೆ ಸಹಾಯ ನೀಡಲು ಸಿದ್ಧ ಎಂದು ತಿಳಿಸಿದೆ.

ರಾಜ್ಯಸಭೆಯಲ್ಲಿ ಗುರುವಾರ ಈ ಕುರಿತು ಹೇಳಿಕೆ ನೀಡಿದ ಗೃಹ ಸಚಿವ ಪಿ.ಚಿದಂಬರಂ, ನಕ್ಸಲರ ಪಿಡುಗಿಗೆ ಪ್ರತಿಯಾಗಿ, ನಮಗೊಂದು ಪ್ರಬಲವಾದ ಮುಖಂಡ, ಗಟ್ಟಿ ಹೃದಯ ಮತ್ತು ಅತ್ಯಧಿಕ ಇಚ್ಛಾಶಕ್ತಿಯ ಅಗತ್ಯವಿದೆ. ನನ್ನ ಪ್ರಕಾರ ಸರಕಾರಕ್ಕೆ ಈ ಮೂರು ಗುಣಗಳೂ ಇವೆ ಎಂದರು.

'ಒಡೆದ' ಸಂಯುಕ್ತ ಒಕ್ಕೂಟ: ಬಿಜೆಪಿ ಟೀಕೆ

ನಕ್ಸಲರ ವಿರುದ್ಧ ಹೋರಾಟದಲ್ಲಿ ಪ್ರತಿಪಕ್ಷ ಬಿಜೆಪಿಯು ಸರಕಾರಕ್ಕೆ ಪರಿಪೂರ್ಣ ಬೆಂಬಲದ ಭರವಸೆಯನ್ನು ನೀಡುತ್ತಿದ್ದರೆ, 'ಒಡೆದ' ಸಂಯುಕ್ತ ಪ್ರಗತಿಪರ ಒಕ್ಕೂಟ (ಯುಪಿಎ) ಮತ್ತು ಕಾಂಗ್ರೆಸ್ ಪಕ್ಷವೇ ಗೃಹ ಸಚಿವ ಪಿ.ಚಿದಂಬರಂ ಅವರ ಕಾಲೆಳೆಯುತ್ತಿವೆ ಎಂದು ಬಿಜೆಪಿ ಆಪಾದಿಸಿರುವುದು ಸಂಸತ್ ಕಲಾಪದಲ್ಲಿ ಮತ್ತಷ್ಟು ಗದ್ದಲಕ್ಕೆ ಕಾರಣವಾಯಿತು.

ಸಂಸತ್ತಿನಲ್ಲಿ ಭಾರೀ ಕೂಗಾಟ, ಗದ್ದಲ ಇಲ್ಲಿ ಕ್ಲಿಕ್ ಮಾಡಿ.

ದಾಂತೆವಾಡದಲ್ಲಿ 76 ಯೋಧರನ್ನು ಬಲಿತೆಗೆದುಕೊಂಡ ನಕ್ಸಲ್ ದಾಳಿ ಕುರಿತು ಚರ್ಚೆಯ ಸಂದರ್ಭ ರಾಜ್ಯಸಭೆಯಲ್ಲಿ ಪ್ರತಿಪಕ್ಷ ನಾಯಕ ಅರುಣ್ ಜೇಟ್ಲಿ ಅವರು ಸರಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಾ, ದಿಗ್ವಿಜಯ್ ಸಿಂಗ್‌ರಂತಹಾ ಕಾಂಗ್ರೆಸ್ ಮುಖಂಡರಿಂದ ಚಿದಂಬರಂ ಕೆಲಸ ಮತ್ತಷ್ಟು ಕಷ್ಟವಾಗುತ್ತಿದೆ. ನಮಗೆ ಒಡೆದ ಸರಕಾರ ಬೇಕಾಗಿಲ್ಲ. ತಮ್ಮದೇ ಗೃಹ ಸಚಿವರನ್ನು ಎಳೆದಾಡುತ್ತಿರುವ ಸರಕಾರ ನಮಗೆ ಬೇಕಾಗಿಲ್ಲ ಎಂದರು.
ಸಂಬಂಧಿತ ಮಾಹಿತಿ ಹುಡುಕಿ