ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮಾವೋವಾದಿಗಳಿಗೆ ಸರಕಾರ ಹೆದರುವುದಿಲ್ಲ:ಚಿದಂಬರಂ (Naxal | Response | Chidambaram)
Bookmark and Share Feedback Print
 
PTI
ನಕ್ಸಲ್ ಸಿದ್ಧಾಂತವನ್ನು ತಳ್ಳಿಹಾಕಿದ ಕೇಂದ್ರ ಗೃಹ ಖಾತೆ ಸಚಿವ ಪಿ.ಚಿದಂಬರಂ,ನಕ್ಸಲ್ ದಾಳಿಗಳಿಗೆ ಸರಕಾರ ಹೆದರುವುದಿಲ್ಲ. ದೇಶದ ಸಂಪೂರ್ಣ ಏಳಿಗೆಗೆ ಸರಕಾರ ಬದ್ಧವಾಗಿದೆ ಎಂದು ಘೋಷಿಸಿದರು.

ದಾಂತೆವಾಡದಲ್ಲಿ ಸಿಆರ್‌ಪಿಎಫ್‌ ಯೋಧರ ಮೇಲೆ ನಡೆದ ದಾಳಿಯ ಕುರಿತಂತೆ ನಡೆದ ಚರ್ಚೆಯಲ್ಲಿ ಬಾಗವಹಿಸಿದ ಸಚಿವ ಚಿದಂಬರಂ, ನಕ್ಸಲ್‌ ದಾಳಿಗಳಿಂದ ನಾನು ತಾಳ್ಮೆಯನ್ನು ಕಳೆದುಕೊಂಡಿಲ್ಲ. ನಕ್ಸಲ್‌ರ ದಾಳಿಗೆ ಮಾರುತ್ತರ ನೀಡುವುದಕ್ಕೆ ಸರಕಾರ ಬದ್ಧವಾಗಿದೆ..ಗುಪ್ಚಚರ ದಳಗಳ ವೈಫಲ್ಯದ ಹೊಣೆ ಹೊತ್ತು ನಾನು ನನ್ನ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಆದರೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಮತ್ತು ಪ್ರದಾನಿ ನನ್ನ ಮೇಲೆ ವಿಶ್ವಾಸವಿರಿಸಿ ಮುಂದುವರಿಸಿದ್ದಾರೆ ಎಂದು ತಿಳಿಸಿದ್ದಾರೆ.

ದಾಳಿಯಲ್ಲಿ ಮೃತರಾದ ಯೋಧರನ್ನು ಬೆಂಬಲಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ನಾವೆಲ್ಲರು ನೆಮ್ಮದಿ ಬಾಳುವಂತಾಗಲು ಯೋಧರು ಮಾವೋವಾದಿಗಳ ವಿರುದ್ಧ ಹೋರಾಡಿ ಮೃತರಾಗಿದ್ದಾರೆ ಎಂದು ಸಂತಾಪ ವ್ಯಕ್ತಪಡಿಸಿದರು.

ದಾಂತೆವಾಡಾದ ದಾಳಿಯ ಬಗ್ಗೆ ಮಾಹಿತಿ ನೀಡಿದ ಸಚಿವ ಚಿದಂಬರಂ, ಸಿಆರ್‌ಪಿಎಫ್‌ವ 62ನೇ ಬಟಾಲಿಯನ್‌ನ ಎ.ಸಿ.ಮತ್ತು ಜಿ ತುಕಡಿಗಳು ಕಾರ್ಯಾಚರಣೆಗಾಗಿ ತೆರಳುತ್ತಿರುವ ಸಂದರ್ಭದಲ್ಲಿ, ಉಗ್ರರು ದಾಳಿ ನಡೆಸಿ ಸಿಆರ್‌ಪಿಎಫ್ ಜವಾನರನ್ನು ಹತ್ಯೆ ಮಾಡಿದ್ದಾರೆ ಎಂದು ಸಂಸತ್ತಿಗೆ ಮಾಹಿತಿ ನೀಡಿದರು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ನಕ್ಸಲ್, ಸರಕಾರ ಚಿದಂಬರಂ