ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪ.ಬಂಗಾಲದಲ್ಲಿ ಅಮವಾಸ್ಯೆ ರಾತ್ರಿ ದುರ್ಗೆಗೆ ಮಾನವ ಬಲಿ! (Human sacrifice | West Bengal | Goddess Kali | Kajjala Kali Mandir)
Bookmark and Share Feedback Print
 
ಹೀಗೊಂದು ಭೀಭತ್ಸ ಘಟನೆ ನಡೆದಿರುವುದು ಪಶ್ಚಿಮ ಬಂಗಾಲದಲ್ಲಿ. ಜೀವಂತ ವ್ಯಕ್ತಿಯೊಬ್ಬನನ್ನು ಅಮವಾಸ್ಯೆಯಂದು ರಾತೋರಾತ್ರಿ ಕಾಳಿ ಮಾತೆಯ ಮಂದಿರದ ಬಲಿಪೀಠಕ್ಕಿಟ್ಟು ಬಲಿ ಕೊಡಲಾಗಿದೆ.

ಪಶ್ಚಿಮ ಬಂಗಾಲದ ಬೀರ್ಬಮ್ ಜಿಲ್ಲೆಯ ಬೋಲ್ಪುರ್ ಎಂಬಲ್ಲಿ ಇದು ನಡೆದಿದೆ. ಈ ಮಂದಿರದ ಅರ್ಚಕರು ಗುರುವಾರ ಮುಂಜಾನೆ ಐದು ಗಂಟೆ ಹೊತ್ತಿಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಬುಧವಾರ ರಾತ್ರಿ ಈ ಬಲಿ ಕೊಡಲಾಗಿದೆ ಎಂದು ನಂಬಲಾಗಿದೆ.

ಈ ಮಂದಿರವು ದೊನೈಪುರ್ ಎಂಬ ಗ್ರಾಮದಿಂದ ಎರಡು ಕಿಲೋ ಮೀಟರ್ ದೂರದಲ್ಲಿದೆ. ಇದು ಮಾನವ ಬಲಿ ಎಂಬುದನ್ನು ಬೋಲ್ಪುರ್ ಪೊಲೀಸ್ ಉಪ ವಿಭಾಗಾಧಿಕಾರಿ ಕಲ್ಯಾಣ್ ಮುಖರ್ಜಿ ಸ್ಪಷ್ಟಪಡಿಸಿದ್ದಾರೆ.

ಈ ಕಜ್ಜಲ ಕಾಳಿ ಮಂದಿರದ ಅರ್ಚಕ ಚಂದನ್ ಮುಖರ್ಜಿಯವರು ಬುಧವಾರ ರಾತ್ರಿ ಒಂಬತ್ತು ಗಂಟೆಯವರೆಗೆ ದೇವಳದಲ್ಲೇ ಇದ್ದರು. ಆ ದಿನ ಅಷ್ಟು ಹೊತ್ತಿನವರೆಗೆ ಅವರು ಪೂಜಾ ಕೈಂಕರ್ಯಗಳನ್ನು ನೆರವೇರಿಸಿ ಮನೆಗೆ ಹೋಗಿದ್ದರು. ಮರುದಿನ ಮುಂಜಾನೆ ದೇವಸ್ಥಾನಕ್ಕೆ ಬರುವ ಹೊತ್ತಿನಲ್ಲಿ ಎದುರುಗಡೆ ದೇಹವೊಂದು ಬಿದ್ದಿರುವುದನ್ನು ಅವರು ಗಮನಿಸಿ ಬೆಚ್ಚಿ ಬಿದ್ದಿದ್ದರು.

ಹತ್ತಿರ ಹೋಗಿ ನೋಡಿದಾಗ ವ್ಯಕ್ತಿಯ ತಲೆಯನ್ನು ದೇಹದಿಂದ ಬೇರ್ಪಡಿಸಲಾಗಿರುವುದು ಕಂಡು ಬಂತು. ಬೆಚ್ಚಿದ ಅರ್ಚಕರು ಪಕ್ಕದ ಗ್ರಾಮಕ್ಕೆ ಹೋಗಿ ಸಹಾಯ ಕೇಳಿದ್ದಾರೆ. ಬಳಿಕ ಬೆಳಿಗ್ಗೆ ಒಂಬತ್ತು ಗಂಟೆ ಹೊತ್ತಿಗೆ ಪೊಲೀಸರು ಕೂಡ ಸ್ಥಳಕ್ಕಾಗಮಿಸಿದ್ದಾರೆ.

ಈ ದೇವಿಯ ಮಂದಿರದಲ್ಲಿ ಸಾಮಾನ್ಯವಾಗಿ ಪ್ರಾಣಿಗಳನ್ನು ಬಲಿ ಕೊಡಲಾಗುತ್ತದೆ. ಆ ಬಲಿಪೀಠದಲ್ಲಿ ರಕ್ತದ ಕಲೆಗಳು ಇದೀಗ ಕಾಣಿಸಿಕೊಂಡಿದ್ದು, ದೇವಿಯ ಗುಡಿಯಲ್ಲೂ ರಕ್ತ ಚೆಲ್ಲಿರುವುದು ಕಂಡು ಬಂದಿದೆ. ಅಲ್ಲದೆ ಗುಡಿಯೊಳಗೆ ಧೂಪ ಕಡ್ಡಿಗಳನ್ನು ಚೆಲ್ಲಲಾಗಿದೆ. (ಚಿತ್ರಗಳನ್ನು ಗಮನಿಸಿ)

ಶಿರಚ್ಛೇದ ಮಾಡಲ್ಪಟ್ಟಿರುವ ವ್ಯಕ್ತಿ ಗ್ರಾಮಸ್ಥನಲ್ಲ. ಈತ ಅಪರಿಚಿತ ಎಂದು ಗ್ರಾಮಸ್ಥರು ಹೇಳುತ್ತಿದ್ದು, ಘಟನೆ ತೀವ್ರ ನಿಗೂಢತೆಯನ್ನು ಹುಟ್ಟಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ