ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪೋಸ್ಟ್-ಪೇಡ್ ಮೊಬೈಲ್‌ ಎಸ್‌ಎಂಎಸ್‌ಗೆ ಕೇಂದ್ರ ನಿಷೇಧ (Govt bans SMS | SMS | post-paid subscribers | Jammu and Kashmir)
Bookmark and Share Feedback Print
 
ಭದ್ರತಾ ಕಾರಣಗಳನ್ನು ನೀಡಿರುವ ಕೇಂದ್ರ ಸರಕಾರವು ಜಮ್ಮು-ಕಾಶ್ಮೀರದಲ್ಲಿ ಪೋಸ್ಟ್-ಪೇಡ್ ಮೊಬೈಲ್‌ಗಳ ಎಸ್‌ಎಂಎಸ್ ಮೇಲೆ ನಿಷೇಧ ಹೇರಿದ್ದು, ಪ್ರಿ-ಪೇಡ್ ಮೊಬೈಲ್ ಬಳಕೆದಾರರಿಗೆ ನಿರ್ಬಂಧಗಳನ್ನು ಹೇರಿದೆ.

ಶುಕ್ರವಾರ ಮಧ್ಯರಾತ್ರಿಯಿಂದಲೇ ಈ ಆದೇಶ ಜಾರಿಗೆ ಬರಲಿದ್ದು, ಕೇಂದ್ರ ದೂರವಾಣಿ ಸಚಿವಾಲಯವು ಸಾರ್ವಜನಿಕ ಸ್ವಾಮ್ಯದ ಬಿಎಸ್ಎನ್ಎಲ್ ಮತ್ತು ಇತರ ಖಾಸಗಿ ಸೇವಾದಾರರಾದ ಭಾರ್ತಿ ಏರ್‌ಟೆಲ್ ಮತ್ತು ವೊಡಾಫೋನ್ ಎಸ್ಸಾರ್ ಸೇರಿದಂತೆ 12 ಸೇವಾದಾರರಲ್ಲಿ ಕಿರು ಸಂದೇಶ ಸೇವೆಯನ್ನು ಜಮ್ಮು-ಕಾಶ್ಮೀರ ರಾಜ್ಯ ವ್ಯಾಪ್ತಿಯ ಪೋಸ್ಟ್-ಪೇಡ್ ಮೊಬೈಲ್ ಬಳಕೆದಾರರಿಗೆ ರದ್ದುಗೊಳಿಸುವಂತೆ ಸೂಚನೆ ನೀಡಿದೆ.

ಪ್ರಸಕ್ತ ಪೋಸ್ಟ್-ಪೇಡ್ ಸಂಪರ್ಕ ಹೊಂದಿರುವ ಬಳಕೆದಾರರಿಗೆ ಎಸ್‌ಎಂಎಸ್ ಸೇವೆಯನ್ನು ಒದಗಿಸುತ್ತಿದ್ದರೆ, ಅದನ್ನು ತಕ್ಷಣವೇ ಹಿಂದಕ್ಕೆ ಪಡೆದುಕೊಳ್ಳಬೇಕು ಎಂದು ದೂರ ಸಂಪರ್ಕ ಇಲಾಖೆಯು ತನ್ನ ಆದೇಶದಲ್ಲಿ ತಿಳಿಸಿದೆ.

ಅದೇ ಹೊತ್ತಿಗೆ ಪ್ರಿ-ಪೇಡ್ ಬಳಕೆದಾರರ ಎಸ್‌ಎಸ್ಎಂ ಮೇಲೆ ಸಂಪೂರ್ಣ ನಿಷೇಧವನ್ನು ಹೇರಲಾಗಿಲ್ಲ. ಪ್ರಿ-ಪೇಡ್ ಬಳಕೆದಾರರು ದಿನಕ್ಕೆ 10 ಕಿರು ಸಂದೇಶಗಳನ್ನು ರವಾನಿಸಬಹುದು ಎಂದು ಕೇಂದ್ರ ನಿರ್ಬಂಧಿತ ಅವಕಾಶವನ್ನು ನೀಡಿದೆ.

ಜಮ್ಮು-ಕಾಶ್ಮೀರವನ್ನು ಹೊರತುಪಡಿಸಿದ ಭಾರತದ ಇತರೆಡೆಗಳಿಂದ ಬರುವ ಮತ್ತು ಅಂತಾರಾಷ್ಟ್ರೀಯ ಸೇವಾದಾರರಿಂದ ಬರುವ ಎಸ್‌ಎಂಎಸ್ ಸಂದೇಶಗಳನ್ನು ಜಮ್ಮು-ಕಾಶ್ಮೀರ ಸೇವಾ ವ್ಯಾಪ್ತಿಯ ಮೊಬೈಲ್ ಗ್ರಾಹಕರಿಗೆ ಸೇವಾದಾರರು ವಿತರಣೆ ಮಾಡಬಾರದು ಎಂದು ಇಲಾಖೆ ತಿಳಿಸಿದೆ.

ಅಲ್ಲದೆ ಎಸ್ಎಂಎಸ್ ಸೇವೆಗಳನ್ನು ಒದಗಿಸುವ ಟ್ಯಾರಿಫ್ ಪ್ಯಾಕೇಜ್‌ಗಳನ್ನು ನೀಡುತ್ತಿರುವ ಸೇವಾದಾರರು ತಕ್ಷಣವೇ ಅದನ್ನು ಹಿಂದಕ್ಕೆ ಪಡೆದುಕೊಳ್ಳಬೇಕು ಎಂದೂ ಆದೇಶ ನೀಡಲಾಗಿದೆ.

ಭಯೋತ್ಪಾದಕರು ನಕಲಿ ಗುರುತು ಚೀಟಿಗಳ ಮೂಲಕ ಸಿಮ್‌ಗಳನ್ನು ಪಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದ ಕೇಂದ್ರ ಸರಕಾರವು ಕೆಲವು ತಿಂಗಳುಗಳ ಹಿಂದಷ್ಟೇ ಪ್ರಿ-ಪೇಡ್ ಮೊಬೈಲ್ ಸೇವೆಯನ್ನು ಜಮ್ಮು-ಕಾಶ್ಮೀರದಲ್ಲಿ ನಿಷೇಧಿಸಿತ್ತು. ಆದರೆ ಭಾರೀ ಪ್ರತಿಭಟನೆಗಳು ನಡೆದ ಹಿನ್ನೆಲೆಯಲ್ಲಿ ಮೊಬೈಲ್ ಸೇವೆಗಳನ್ನು ಕೇಂದ್ರ ಮರು ಸ್ಥಾಪಿಸಲು ಒಪ್ಪಿಗೆ ಸೂಚಿಸಿತ್ತು. ಇದೀಗ ಕಿರು ಸಂದೇಶದ ಮೇಲೆ ನಿರ್ಬಂಧ ಹೇರಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ