ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಆಗಸ್ಟ್‌ನಲ್ಲಿ ಬರಾಕ್ ಒಬಾಮಾ ಭಾರತಕ್ಕೆ: ಪ್ರಧಾನಿ ಸಿಂಗ್ (US President | Barack Obama | India | Manmohan Singh)
Bookmark and Share Feedback Print
 
ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮಾ ಇದೇ ವರ್ಷದ ಆಗಸ್ಟ್ ಅಥವಾ ಅಕ್ಟೋಬರ್ ತಿಂಗಳಿನಲ್ಲಿ ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂದು ಪ್ರಧಾನಿ ಮನಮೋಹನ್ ಸಿಂಗ್ ಶನಿವಾರ ತಿಳಿಸಿದ್ದಾರೆ.

ಅಮೆರಿಕಾ ಅಧ್ಯಕ್ಷರು ಭಾರತಕ್ಕೆ ಯಾವಾಗ ಬರುತ್ತಾರೆ ಎಂದು ಪತ್ರಕರ್ತರು ಪ್ರಶ್ನಿಸಿದಾಗ, 'ಒಬಾಮಾ ಅಕ್ಟೋಬರ್ ಅಥವಾ ಆಗಸ್ಟ್ ತಿಂಗಳಲ್ಲಿ ಭಾರತಕ್ಕೆ ಬರಲಿದ್ದಾರೆ. ಭೇಟಿಯ ದಿನಾಂಕವನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ' ಎಂದು ಸಿಂಗ್ ತಿಳಿಸಿದ್ದಾರೆ.

ಈ ಹಿಂದಿನ ಅಮೆರಿಕಾ ಅಧ್ಯಕ್ಷ ಜಾರ್ಜ್ ಡಬ್ಲ್ಯೂ ಬುಶ್ ಕೂಡ ಭಾರತಕ್ಕೆ ಭೇಟಿ ನೀಡಿದ್ದರು. 2006ರ ಮಾರ್ಚ್ ತಿಂಗಳ ಆರಂಭದಲ್ಲಿ ಭಾರತಕ್ಕೆ ಬಂದಿದ್ದ ಅವರು ಮೂರು ದಿನಗಳ ಕಾಲ ದೇಶದಲ್ಲಿ ತಂಗಿದ್ದರು. ಈ ಸಂದರ್ಭದಲ್ಲಿ ಹಲವು ರಾಜಕೀಯ ಮುಖಂಡರು ಹಾಗೂ ರೈತರನ್ನು ಬುಶ್ ಭೇಟಿ ಮಾಡಿದ್ದರು.

ಇದೀಗ ಒಬಾಮಾ ಕೂಡ ಭಾರತ ಭೇಟಿಗೆ ಆಸಕ್ತಿ ತೋರಿಸಿದ್ದಾರೆ. ಒಬಾಮಾ ಭಾರತಕ್ಕೆ ಭೇಟಿ ನೀಡಿದಲ್ಲಿ, ಈ ದೇಶಕ್ಕೆ ಬಂದ ಅಮೆರಿಕಾದ ಆರನೇ ಅಧ್ಯಕ್ಷ ಎಂಬ ಖ್ಯಾತಿಗೆ ಅವರು ಪಾತ್ರರಾಗಲಿದ್ದಾರೆ.

ಅಮೆರಿಕಾ ಮತ್ತು ಬ್ರೆಜಿಲ್‌ಗಳಿಗೆ ಎಂಟು ದಿನಗಳ ಪ್ರವಾಸ ಕೈಗೊಂಡಿದ್ದ ಪ್ರಧಾನಿಯವರು ಇಂದು ತವರಿಗೆ ಮರಳಿದ್ದು, ವಿಶೇಷ ವಿಮಾನದಲ್ಲಿ ಅವರು ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದರು.

ಪ್ರವಾಸದ ಸಂದರ್ಭದಲ್ಲಿ ನಾಗರಿಕ ಪರಮಾಣು ಸಮ್ಮೇಳನ ಸೇರಿದಂತೆ ಮೂರು ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ಸಿಂಗ್, ಆರಕ್ಕಿಂತಲೂ ಹೆಚ್ಚು ದೇಶಗಳ ನಾಯಕರುಗಳ ಜತೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದರು.
ಸಂಬಂಧಿತ ಮಾಹಿತಿ ಹುಡುಕಿ