ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬಿಹಾರದಲ್ಲಿ ಜಪಾನ್ ಯುವತಿಯ ಸಾಮೂಹಿಕ ಅತ್ಯಾಚಾರ (Japanese tourist gangraped | Bihar | Bodh Gaya | auto-rickshaw)
Bookmark and Share Feedback Print
 
25ರ ಹರೆಯದ ಜಪಾನಿ ಯುವತಿಯೊಬ್ಬಳನ್ನು ಐವರು ಅಪರಿಚಿತರ ತಂಡವೊಂದು ಬಿಹಾರದ ಬೋಧ್ ಗಯಾದಲ್ಲಿ ಸಾಮೂಹಿಕ ಅತ್ಯಾಚಾರ ನಡೆಸಿದ ಭೀಭತ್ಸ ಘಟನೆ ಶನಿವಾರ ವರದಿಯಾಗಿದೆ.

ಗಯಾ ರೈಲ್ವೇ ನಿಲ್ದಾಣಕ್ಕೆ ರಿಕ್ಷಾವೊಂದರಲ್ಲಿ ತೆರಳುತ್ತಿದ್ದ ಯುವತಿಯನ್ನು ನಿರ್ಜನ ಪ್ರದೇಶವೊಂದರಲ್ಲಿ ರಿಕ್ಷಾ ಚಾಲಕನ ನೆರವಿನಿಂದ ಅತ್ಯಾಚಾರ ನಡೆಸಲಾಗಿದೆ. ಈ ಘಟನೆ ಶುಕ್ರವಾರ ರಾತ್ರಿ ನಡೆದಿದೆ ಎಂದು ಇಲ್ಲಿನ ಪೊಲೀಸ್ ವರಿಷ್ಠಾಧಿಕಾರಿ ಸುಶೀಲ್ ಖೋಪಡೆ ತಿಳಿಸಿದ್ದಾರೆ.

ಬಲಿಪಶು ಯುವತಿ ಇಂದು ಮುಂಜಾನೆ ಅಮಾವಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ. ಟೋಕಿಯೋದ ಇತಾಬೊಲುಟಾಚಿ ನಿವಾಸಿಯಾಗಿರುವ ಜಪಾನ್ ಯುವತಿ ಪ್ರಸಕ್ತ ಭಾರತದಲ್ಲಿನ ಹಲವು ಬೌದ್ಧ ಧರ್ಮಗಳ ಯಾತ್ರಾ ಸ್ಥಳಗಳಿಗೆ ಭೇಟಿ ನೀಡುವ ಕಾರ್ಯಕ್ರಮವನ್ನು ಹೊಂದಿದ್ದಳು.

ಈಗಾಗಲೇ ಪ್ರಕರಣದ ಸಂಬಂಧ ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ. ಜತೆಗೆ ಆರೋಪಿಗಳ ಬಂಧನಕ್ಕೆಂದು ಹಲವು ಕಡೆ ದಾಳಿಗಳನ್ನು ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಯುವತಿಯನ್ನು ಸಮೀಪದ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಗಿದೆ. ಆಕೆಗೆ ಸೂಕ್ತ ಭದ್ರತೆಯನ್ನು ನೀಡಲಾಗಿದೆ ಎಂದು ಖೋಪಡೆ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ