ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಜೆಸ್ಸಿಕಾ ಮರ್ಡರ್: ಮನು ಶರ್ಮಾ ಜೀವಾವಧಿ ಎತ್ತಿಹಿಡಿದ ಸುಪ್ರೀಂ (Supreme Court | Jessica Lall murder case | Manu Sharma | Vikas Yadav)
Bookmark and Share Feedback Print
 
ರೂಪದರ್ಶಿ ಜೆಸ್ಸಿಕಾ ಲಾಲ್ ಹತ್ಯೆ ಪ್ರಕರಣದಲ್ಲಿ ಕಾಂಗ್ರೆಸ್ ಹಿರಿಯ ನೇತಾರ ಹಾಗೂ ಮಾಜಿ ಕೇಂದ್ರ ಸಚಿವ ವಿನೋದ್ ಶರ್ಮಾರ ಪುತ್ರ ಮನು ಶರ್ಮಾ ಮೇಲೆ ದೆಹಲಿ ಹೈಕೋರ್ಟ್ ಘೋಷಿಸಿದ್ದ ಜೀವಾವಧಿ ಶಿಕ್ಷೆಯನ್ನು ಸುಪ್ರೀಂ ಕೋರ್ಟ್ ಸೋಮವಾರ ಎತ್ತಿ ಹಿಡಿದಿದೆ.

1999ರಲ್ಲಿ ದಕ್ಷಿಣ ದೆಹಲಿಯ ರೆಸ್ಟೋರೆಂಟ್‌‍ವೊಂದರಲ್ಲಿ ಜೆಸ್ಸಿಕಾರನ್ನು ಹತ್ಯೆ ಮಾಡಲಾಗಿತ್ತು.

ಆರೋಪಿ ಮನು ಶರ್ಮಾ ಮೇಲಿನ ಆರೋಪ ಸಾಬೀತುಗೊಂಡಿದೆ ಎಂದು ನ್ಯಾಯಮೂರ್ತಿಗಳಾದ ಪಿ. ಸದಾಶಿವಂ ಮತ್ತು ಸ್ವಾತಂತರ್ ಕುಮಾರ್ ಅವರನ್ನೊಳಗೊಂಡ ವಿಭಾಗೀಯ ಪೀಠ ತಿಳಿಸಿದೆ.

ಅದೇ ವೇಳೆ ಸಾಕ್ಷ್ಮಧಾರಗಳನ್ನು ನಾಶಪಡಿಸಲು ಯತ್ನಿಸಿದ್ದ ವಿಕಾಸ್ ಯಾದವ್ ಮತ್ತು ಅಮರಜೀತ್ ಸಿಂಗ್ ಗಿಲ್ ಅವರ ಮೇಲೂ ವಿಧಿಸಲಾಗಿರುವ ನಾಲ್ಕು ವರ್ಷದ ಸಜೆಯನ್ನೂ ನ್ಯಾಯಾಲಯ ಎತ್ತಿ ಹಿಡಿದಿದೆ. ವಿಕಾಸ್ ಅವರು ಉತ್ತರ ಪ್ರದೇಶದ ವಿವಾದತ್ಮಾಕ ರಾಜಕಾರಣಿ ಡಿ. ಪಿ. ಯಾದವ್‌ರವರ ಪುತ್ರ.

ವಿಚಾರಣಾಧೀನ ನ್ಯಾಯಾಲಯವು ನೀಡಿರುವ ಖುಲಾಸೆಗೆ ವಿರುದ್ಧವಾಗಿ ದೆಹಲಿ ಹೈಕೋರ್ಟ್ ನೀಡಿದ್ದ ತೀರ್ಪಿಗೆ ಸಾಕಷ್ಟು ಸಮರ್ಥ ಕಾರಣಗಳಿವೆ ಎಂದಿರುವ ಸುಪ್ರೀಂ ಕೋರ್ಟ್, ಶರ್ಮಾ ತನ್ನ ಟಾಟಾ ಸಫಾರಿ ಕಾರನ್ನು ಸ್ಥಳದಲ್ಲೇ ಬಿಟ್ಟು ಹೋಗಿರುವುದು ಮತ್ತು ತನ್ನ ಕಾರು ನಾಪತ್ತೆಯಾಗಿದೆ ಎಂದು ಯಾವುದೇ ದೂರು ನೀಡದೇ ಇರುವುದು ಇದಕ್ಕೆ ಪುಷ್ಠಿ ನೀಡಿದೆ ಎಂದು ತನ್ನ 250 ಪುಟಗಳ ತೀರ್ಪಿನಲ್ಲಿ ತಿಳಿಸಿದೆ.

ಜೆಸ್ಸಿಕಾ ಸಹೋದರಿ ಸಬ್ರಿನಾ ಲಾಲ್ ಇದೀಗ ತೀರ್ಪು ಬಂದಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಈ ಪ್ರಕರಣಕ್ಕೆ ಕೊನೆಯ ಮೊಳೆ ಜಡಿಯಲಾಗಿದೆ. ಇದರಿಂದ ನನಗೆ ನಿರಾಳತೆ ಮತ್ತು ಸಂತೃಪ್ತಿ ಸಿಕ್ಕಿದೆ. ನಾನು ಸಂತೋಷಗೊಂಡಿದ್ದೇನೆ ಎಂದು ನ್ಯಾಯಾಲಯದ ಹೊರಗೆ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ