ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕಸದ ತೊಟ್ಟಿಯಲ್ಲಿ 14 ಭ್ರೂಣಗಳು; ಹೆಣ್ಮಕ್ಕಳ ಹತ್ಯೆ ಶಂಕೆ (garbage bin | Ahmedabad | sex determination tests | female feticide)
Bookmark and Share Feedback Print
 
ಗುಜರಾತ್‌ನ ಬಾಪುನಗರ ಪ್ರದೇಶದ ತಿಪ್ಪೆಯಲ್ಲಿ ಎಸೆಯಲಾಗಿದ್ದ ಸ್ಥಿತಿಯಲ್ಲಿ 14 ಭ್ರೂಣಗಳು ಪತ್ತೆಯಾಗಿದ್ದು, ಲಿಂಗಪತ್ತೆಯ ಬಳಿಕ ಹತ್ಯೆಗೊಳಗಾದ ಹೆಣ್ಣು ಪಿಂಡಗಳು ಇದಾಗಿವೆ ಎಂದು ಶಂಕೆ ವ್ಯಕ್ತಪಡಿಸಲಾಗಿದೆ.

ಇಲ್ಲಿನ ಲಾಲ್‌ಬಹದ್ದೂರ್ ಶಾಸ್ತ್ರಿ ಕ್ರೀಡಾಂಗಣದ ಪಕ್ಕದಲ್ಲಿರುವ ಕಸದ ತೊಟ್ಟಿಯಲ್ಲಿ ಎಸೆಯಲಾದ ಸ್ಥಿತಿಯಲ್ಲಿ ಸೋಮವಾರ ಬೆಳಿಗ್ಗೆ ಈ ಭ್ರೂಣಗಳು ಪತ್ತೆಯಾಗಿವೆ. 14 ಭ್ರೂಣಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದ್ದು, ಮರಣೋತ್ತರ ಪರೀಕ್ಷೆಗಾಗಿ ಸರಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಇಲ್ಲಿನ ಪೊಲೀಸ್ ಇನ್ಸ್‌ಪೆಕ್ಟರ್ ಆರ್.ಡಿ. ಲಕ್ಷರಿ ತಿಳಿಸಿದ್ದಾರೆ.

ಈ ಪ್ರದೇಶದ ಸ್ಥಳೀಯರು ಮುಂಜಾನೆ ತಿಪ್ಪೆಯಲ್ಲಿ ಭ್ರೂಣಗಳ ಶವಗಳು ಬಿದ್ದಿರುವುದನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು.

ಸ್ಥಳೀಯರ ಪ್ರಕಾರ ಇಲ್ಲಿನ ಖಾಸಗಿ ಆಸ್ಪತ್ರೆಗಳು ಪ್ರಸವಪೂರ್ವ ಲಿಂಗಪತ್ತೆ ಪರೀಕ್ಷೆ ನಡೆಸಿದ ನಂತರ ಸಂಬಂಧಪಟ್ಟವರ ಇಚ್ಛೆಯಂತೆ ನಡೆದುಕೊಂಡು, ಭ್ರೂಣಗಳನ್ನು ತಿಪ್ಪೆಯಲ್ಲಿ ಎಸೆದಿವೆ. ಹಾಗಾಗಿ ಇದು ಹೆಣ್ಣು ಭ್ರೂಣಗಳೇ ಆಗಿರಬಹುದು ಎಂದು ಶಂಕೆ ವ್ಯಕ್ತಪಡಿಸಲಾಗಿದೆ.

ಆದರೆ ಪೊಲೀಸರು ಭ್ರೂಣಗಳ ಲಿಂಗ ಯಾವುದೆಂದು ಮರಣೋತ್ತರ ಪರೀಕ್ಷೆ ಬಳಿಕವಷ್ಟೇ ತಿಳಿದು ಬರಲಿದೆ ಎಂದು ಹೇಳಿದ್ದಾರೆ.

ಲಿಂಗಪತ್ತೆ ಮತ್ತು ಭ್ರೂಣ ಹತ್ಯೆಯನ್ನು ಭಾರತದಲ್ಲಿ ನಿಷೇಧಿಸಲಾಗಿದ್ದರೂ, ಈಗಲೂ ಹಲವು ನಗರಗಳ ಖಾಸಗಿ ಆಸ್ಪತ್ರೆಗಳು ರಹಸ್ಯವಾಗಿ ಇದನ್ನು ನಡೆಸುತ್ತಿವೆ ಎಂದು ವರದಿಗಳು ಹೇಳುತ್ತಿವೆ. ಈ ರೀತಿ ಹತ್ಯೆಗೊಳಗಾಗುವ ಭ್ರೂಣಗಳು ಬಹುತೇಕ ಹೆಣ್ಮಕ್ಕಳದ್ದೇ ಆಗಿರುತ್ತದೆ.

ಹೀಗೆ ಹೆಣ್ಮಕ್ಕಳ ಜನನವನ್ನು ವಾಮಮಾರ್ಗದ ಮೂಲಕ ತಡೆಯುವುದರಿಂದ ಗಂಡು ಮತ್ತು ಹೆಣ್ಣುವಿನ ನಡುವಿನ ಅನುಪಾತದಲ್ಲಿ ಭಾರೀ ವ್ಯತ್ಯಾಸ ಉಂಟಾಗುತ್ತದೆ.
ಸಂಬಂಧಿತ ಮಾಹಿತಿ ಹುಡುಕಿ