ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಶೋಯಿಬ್ ಕೈಗೆ ಪಾಸ್‌ಪೋರ್ಟ್; ಪತ್ನಿ ಜತೆ ಶೀಘ್ರದಲ್ಲೇ ತವರಿಗೆ (Shoaib Malik | passport | Sania Mirza | Ayesha Siddiqui)
Bookmark and Share Feedback Print
 
ಮೊದಲ ಪತ್ನಿ ಆಯೇಶಾ ಸಿದ್ಧಿಕಿ ಜತೆಗಿನ ವಿವಾದದ ಸಂಬಂಧ ಪೊಲೀಸರು ವಶಪಡಿಸಿಕೊಂಡಿದ್ದ ಪಾಸ್‌ಪೋರ್ಟನ್ನು ಪಾಕಿಸ್ತಾನಿ ಕ್ರಿಕೆಟ್ ಆಟಗಾರ ಶೋಯಿಬ್ ಮಲಿಕ್ ಅವರಿಗೆ ವಾಪಸ್ ಮಾಡುವಂತೆ ಆಂಧ್ರಪ್ರದೇಶ ಉಚ್ಚ ನ್ಯಾಯಾಲಯ ಆದೇಶ ನೀಡಿದ್ದು, ಶೀಘ್ರದಲ್ಲೇ ಶೋಯಿಬ್-ಸಾನಿಯಾ ಮಿರ್ಜಾ ದಂಪತಿ ಪಾಕಿಸ್ತಾನಕ್ಕೆ ತೆರಳಲಿದ್ದಾರೆ.

ಶೋಯಿಬ್ ವಿರುದ್ಧ ಆಯೇಶಾ ವಂಚನೆ ಪ್ರಕರಣ ದಾಖಲಿಸಿದ್ದ ಹಿನ್ನೆಲೆಯಲ್ಲಿ ವಿಚಾರಣೆಗೊಳಪಡಿಸಿದ್ದ ಪೊಲೀಸರು ವಶಕ್ಕೆ ಪಾಸ್‌ಪೋರ್ಟನ್ನು ತೆಗೆದುಕೊಂಡು, ದೇಶ ಬಿಟ್ಟು ಹೋಗದಂತೆ ನಿರ್ಬಂಧ ವಿಧಿಸಿತ್ತು. ಆದರೆ ನಂತರದ ದಿನಗಳಲ್ಲಿ ಶೋಯಿಬ್ ತನ್ನ ಪತ್ನಿಗೆ ವಿಚ್ಛೇದನ ನೀಡಿದ ಹಿನ್ನೆಲೆಯಲ್ಲಿ ಆಯೇಶಾ ಪ್ರಕರಣವನ್ನು ಹಿಂದಕ್ಕೆ ಪಡೆದಿದ್ದಳು. ಆದರೆ ಪೊಲೀಸರು ಪಾಸ್‌ಪೋರ್ಟ್ ವಾಪಸ್ ಮಾಡಲು ನಿರಾಕರಿಸಿದ್ದರು.

ಪಾಸ್‌ಪೋರ್ಟ್ ವಾಪಸ್ ಪಡೆಯಬೇಕಿದ್ದರೆ ಶೋಯಿಬ್ ಮತ್ತು ಸಾನಿಯಾ ಸ್ಥಳೀಯ ನ್ಯಾಯಾಲಯಕ್ಕೆ ಹಾಜರಾಗಿ ಮನವಿ ಸಲ್ಲಿಸಬೇಕು ಎಂದು ಪೊಲೀಸರು ಹೇಳಿದ್ದರು. ಇದನ್ನು ತಪ್ಪಿಸಲು ಶೋಯಿಬ್ ನೇರವಾಗಿ ಹೈಕೋರ್ಟ್ ಮೊರೆ ಹೋಗಿದ್ದರು.

ಶುಕ್ರವಾರ ಪ್ರಕರಣವನ್ನು ಕೈಗೆತ್ತಿಕೊಂಡು ವಿಚಾರಣೆ ನಡೆಸಿ ತೀರ್ಪನ್ನು ಇಂದಿಗೆ ಕಾಯ್ದಿರಿಸಿದ್ದ ನ್ಯಾಯಮೂರ್ತಿ ಸಿ.ವಿ. ನಾಗಾರ್ಜುನ ರೆಡ್ಡಿಯವರನ್ನೊಳಗೊಂಡ ಪೀಠವು ಪಾಸ್‌ಪೋರ್ಟನ್ನು ವಾಪಸ್ ಮಾಡುವಂತೆ ಪೊಲೀಸರಿಗೆ ಆದೇಶ ನೀಡಿದೆ.

ಇದೇ ವಾರ ಪಾಕಿಸ್ತಾನಕ್ಕೆ...
ಏಪ್ರಿಲ್ 22ರಂದು ಗುರುವಾರ ಲಾಹೋರ್‌ನ ಸಾಯಿಲ್‌ಕೋಟ್‌ನಲ್ಲಿ ನಡೆಯಬೇಕಿದ್ದ ಶೋಯಿಬ್-ಸಾನಿಯಾ ಆರತಕ್ಷತೆ ಕಾರ್ಯಕ್ರಮವನ್ನು ಭಾನುವಾರಕ್ಕೆ (ಏಪ್ರಿಲ್ 25) ಮುಂದೂಡಲಾಗಿತ್ತು. ಇದೀಗ ನ್ಯಾಯಾಲಯವು ಶೋಯಿಬ್ ಪಾಸ್‌ಪೋರ್ಟ್ ನೀಡಿರುವುದರಿಂದ ದಂಪತಿ ಇದೇ ವಾರ ಪಾಕಿಸ್ತಾನಕ್ಕೆ ತೆರಳಲಿದ್ದಾರೆ ಎಂದು ಮೂಲಗಳು ಹೇಳಿವೆ.

ಪ್ರಸಕ್ತ ಶೋಯಿಬ್ ಮತ್ತು ಸಾನಿಯಾ ಮುಂಬೈಯಲ್ಲಿದ್ದಾರೆ. ನಿಯತಕಾಲಿಕವೊಂದರ ಮುಖಪುಟ ಚಿತ್ರಕ್ಕಾಗಿ ಪೋಸ್ ಕೊಡಲು ಅವರು ಮುಂಬೈಯಲ್ಲಿದ್ದು, ಒಂದೆರಡು ದಿನಗಳೊಳಗೆ ಅವರು ಪಾಕಿಸ್ತಾನಕ್ಕೆ ಹೋಗುತ್ತಾರೆ ಎಂದು ಕುಟುಂಬ ತಿಳಿಸಿದೆ.

ಗಂಡನ ಮನೆಗೆ ಹೋಗುತ್ತಿರುವ ಸಾನಿಯಾರನ್ನು ಸ್ವಾಗತಿಸಲು ಪಾಕಿಸ್ತಾನದಲ್ಲಿ ಭಾರೀ ಸಿದ್ಧತೆಗಳು ನಡೆದಿವೆ ಎನ್ನಲಾಗಿದ್ದು, ಇಬ್ಬರ ಚಿತ್ರಗಳನ್ನೊಳಗೊಂಡ ಸಾಕಷ್ಟು ಟಿ-ಶರ್ಟ್‌ಗಳನ್ನು ಉಚಿತವಾಗಿ ಅಭಿಮಾನಿಗಳು ಹಂಚಿದ್ದಾರೆ ಎಂಬ ವರದಿಗಳು ಬಂದಿವೆ.
ಸಂಬಂಧಿತ ಮಾಹಿತಿ ಹುಡುಕಿ