ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಎನ್ಆರ್ಐಗಳಿಗೆ ಮತದಾನದ ಹಕ್ಕು ಕಷ್ಟ: ಚುನಾವಣಾ ಆಯೋಗ (NRI | Manmohan Singh | India | Navin Chawla)
Bookmark and Share Feedback Print
 
ಅನಿವಾಸಿ ಭಾರತೀಯರಿಗೆ ಮತದಾನದ ಹಕ್ಕನ್ನು ನೀಡಲು ಕಾಂಗ್ರೆಸ್ ನೇತೃತ್ವದ ಮನಮೋಹನ್ ಸಿಂಗ್ ಸರಕಾರ ಆಸಕ್ತಿ ತೋರಿಸುತ್ತಿದ್ದರೂ, ಇದು ಅಷ್ಟು ಸುಲಭವಲ್ಲ ಎಂದು ಚುನಾವಣಾ ಆಯುಕ್ತ ನವೀನ್ ಚಾವ್ಲಾ ತಿಳಿಸಿದ್ದಾರೆ.

ಎನ್‌ಆರ್ಐಗಳಿಗೆ ಮತದಾನದ ಹಕ್ಕುಗಳನ್ನು ನೀಡುವಲ್ಲಿ ಎದುರಾಗುವ ಸಮಸ್ಯೆಗಳ ಕುರಿತು ಚುನಾವಣಾ ಆಯೋಗವು ಕಳೆದ ತಿಂಗಳು ಸರಕಾರಕ್ಕೆ ಪತ್ರ ಬರೆದಿದೆ ಎಂದು ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಚಾವ್ಲಾ ತಿಳಿಸಿದ್ದಾರೆ.

ಅನಿವಾಸಿ ಭಾರತೀಯರು ಇಡೀ ವಿಶ್ವದಾದ್ಯಂತ ಇದ್ದಾರೆ. ಅವರು ವಿವಿಧ ರಾಜ್ಯಗಳ, ವಿವಿಧ ಕ್ಷೇತ್ರಗಳಿಗೆ ಸಂಬಂಧಪಟ್ಟವರು. ಬೃಹತ್ ದೇಶಗಳಲ್ಲಿ ತಮ್ಮ ಮತಗಳನ್ನು ಚಲಾಯಿಸಲು ಹಲವು ಸ್ಥಳಗಳನ್ನು ನಿಗದಿ ಮಾಡಬೇಕಾಗುತ್ತದೆ. ಅಂತಹ ಸ್ಥಳಗಳಿಗೆ ಚುನಾವಣಾ ಆಯೋಗವು ಮತಯಂತ್ರವನ್ನು ಕೊಂಡು ಹೋಗಿ ಸುರಕ್ಷಿತವಾಗಿ ವಾಪಸ್ ತರಬೇಕಾಗುತ್ತದೆ ಎಂದು ಚಾವ್ಲಾ ವಿವರಣೆ ನೀಡಿದ್ದಾರೆ.

ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಘೋಷಣೆಯಿಂದ ಚುನಾವಣಾ ದಿನಾಂಕದವರೆಗಿನ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಆಯೋಗವು ಸೀಮತ ಸಮಯವನ್ನಷ್ಟೇ ಹೊಂದಿದೆ. ಹಾಗಾಗಿ ಎನ್ಆರ್ಐಗಳಿಗೆ ಮತದಾನದ ವ್ಯವಸ್ಥೆ ಮಾಡುವುದು ಸುಲಭವಲ್ಲ ಎಂದು ತನ್ನ ಅಸಹಾಯಕತೆಯನ್ನು ಆಯುಕ್ತರು ತೋಡಿಕೊಂಡಿದ್ದಾರೆ.

ಮತದಾನಕ್ಕೆ ಅವಕಾಶ ಮಾಡಿಕೊಡುವ ಮೊದಲು ಮತದಾರ ತನ್ನ ಕ್ಷೇತ್ರದಲ್ಲಿ ವಾಸ್ತವ್ಯ ಹೂಡುವ ಕನಿಷ್ಠ ದಿನಗಳ ಕುರಿತ ಪ್ರಸಕ್ತ ನಿಯಮಾವಳಿಯನ್ನು ಕೂಡ ಬದಲಾವಣೆ ಮಾಡಬೇಕಾದ ಅಗತ್ಯವಿರುತ್ತದೆ. ಈಗ ದೇಶದ ಶೇ.82ರಷ್ಟು ಮಂದಿ ಭಾವಚಿತ್ರ ಹೊಂದಿರುವ ಚುನಾವಣಾ ಗುರುತು ಚೀಟಿಯನ್ನು ಹೊಂದಿದ್ದು, ಅವರ ಹೆಸರುಗಳು ಭಾವಚಿತ್ರವುಳ್ಳ ಮತದಾರರ ಪಟ್ಟಿಯಲ್ಲಿ ಕಾಣಿಸಿಕೊಳ್ಳುತ್ತದೆ ಎಂದರು.

ಇದೇ ವರ್ಷದ ಜನವರಿಯಲ್ಲಿ ನಡೆದಿದ್ದ ಅನಿವಾಸಿ ಭಾರತೀಯರ ಎಂಟನೇ ಪ್ರವಾಸಿ ಭಾರತೀಯ ದಿವಸ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರಧಾನಿ ಮನಮೋಹನ್ ಸಿಂಗ್, ಮುಂದಿನ ರಾಷ್ಟ್ರೀಯ ಮಹಾ ಚುನಾವಣೆಯಲ್ಲಿ ಅನಿವಾಸಿ ಭಾರತೀಯರು ಕೂಡ ತಮ್ಮ ಮತದಾನದ ಹಕ್ಕನ್ನು ಚಲಾಯಿಸು ಹಕ್ಕನ್ನು ಹೊಂದಲಿದ್ದಾರೆ; ಅನಿವಾಸಿ ಭಾರತೀಯರ ಬಯಕೆಯನ್ನು ಪೂರೈಸುವ ಕುರಿತು ನಾವು ಕಾರ್ಯಪ್ರವೃತ್ತರಾಗಿದ್ದೇವೆ. ಈ ಕುರಿತು ನಮ್ಮಲ್ಲಿ ಪ್ರಾಮಾಣಿಕ ಭರವಸೆಯಿದೆ ಎಂದು ಹೇಳಿದ್ದರು.
ಸಂಬಂಧಿತ ಮಾಹಿತಿ ಹುಡುಕಿ