ಸಂಗ್ಮಾ ಪ್ರಮಾಣವಚನ
ಶಿಲ್ಲಾಂಗ್: ಮೇಘಾಲಯದ 21ನೇ ಮುಖ್ಯಮಂತ್ರಿಯಾಗಿ ಮುಕುಲ್ ಎಂ. ಸಂಗ್ಮಾ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಸಂದರ್ಭದಲ್ಲಿ ಮೂವರು ಸಚಿವರುಗಳು ಕೂಡ ಪ್ರತಿಜ್ಞಾವಿಧಿ ಸ್ವೀಕರಿಸಿದರು. ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮುಖ್ಯಮಂತ್ರಿ ಡಿಡಿ ಲಪಾಂಗ್ ಅವರ ಸರಕಾರದ ಶಾಸಕರು ಸಂಗ್ಮಾ ಅವರನ್ನು ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆರಿಸಿದ ಹಿನ್ನೆಲೆಯಲ್ಲಿ ಲಪಾಂಗ್ ರಾಜೀನಾಮೆ ನೀಡಿದ್ದರು.