ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಐಪಿಎಲ್ ನಿಷೇಧಿಸಿ, ಕ್ರಿಕೆಟ್ ಉಳಿಸಿ: ಬಾಳ್ ಠಾಕ್ರೆ ಫರ್ಮಾನು (Bal Thackeray | IPL controversy | Cricket | Shah Rukh Khan)
ಐಪಿಎಲ್ ನಿಷೇಧಿಸಿ, ಕ್ರಿಕೆಟ್ ಉಳಿಸಿ: ಬಾಳ್ ಠಾಕ್ರೆ ಫರ್ಮಾನು
ಮುಂಬೈ, ಬುಧವಾರ, 21 ಏಪ್ರಿಲ್ 2010( 13:57 IST )
ಕ್ರಿಕೆಟ್ ಉಳಿಸಲು ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಗಳನ್ನು ನಿಷೇಧಿಸಬೇಕು ಮತ್ತು ಅವರ ಹಣದ ಮೂಲಗಳನ್ನು ತನಿಖೆಗೊಳಪಡಿಸಬೇಕು ಎಂದು ಶಿವಸೇನೆ ಮುಖ್ಯಸ್ಥ ಬಾಳ್ ಠಾಕ್ರೆ ಆಗ್ರಹಿಸಿದ್ದಾರೆ.
ಪ್ರಸಕ್ತ ನಡೆಯುತ್ತಿರುವ ಲಲಿತ್ ಮೋದಿ ಮತ್ತು ಶಶಿ ತರೂರ್ ಪ್ರಕರಣದಲ್ಲಿ ಕ್ರಿಕೆಟ್‌ನ ಮಾನ ಹರಾಜುಗುತ್ತಿರುವುದು ಕಳವಳಕಾರಿ ವಿಚಾರ ಎಂದು ಪಕ್ಷದ ಮುಖವಾಣಿ ಸಾಮ್ನಾದಲ್ಲಿ ಅವರು ತಿಳಿಸಿದ್ದಾರೆ.
ಇವೆಲ್ಲಕ್ಕೂ ಹಣವೇ ಕಾರಣ ಎಂದಿರುವ ಠಾಕ್ರೆ, ವಿವಾದದಲ್ಲಿ ಭಾಗೀಯಾಗಿರುವ ಎಲ್ಲಾ ಕ್ರಿಕೆಟಿಗರ ವಿರುದ್ಧ ತನಿಖೆ ನಡೆಸಬೇಕೆಂದು ಎಂದವರು ಹೇಳಿದರು.
ಅದೇ ವೇಳೆ ಈ ಬಾರಿಯ ಐಪಿಎಲ್‌ನ 10ರಲ್ಲಿ ಎಂಟು ಸತತ ಗೆಲುವುಗಳನ್ನು ಸಾಧಿಸಿದ್ದ ಮುಂಬೈ ಕೊನೆಯ ಲೀಗ್ ಪಂದ್ಯದಲ್ಲಿ ಕೋಲ್ಕತ್ತಾ ವಿರುದ್ಧ ಸೋತಿರುವುದು ಬೇಸರ ತಂದಿದೆ ಎಂದಿದ್ದಾರೆ.
ತಂಡವು ಹೇಗೆ ಸೋಲುತ್ತದೆ? ಯಾತಕ್ಕಾಗಿ ಪ್ರಮುಖ ಆಟಗಾರರು ಅಲಭ್ಯರಾಗಿದ್ದರು ಎಂದವರು ಪ್ರಶ್ನಿಸಿದರು. ಪಂದ್ಯದಲ್ಲಿ ಸೋಲು ಗೆಲುವು ಸಾಮಾನ್ಯ. ಆದರೆ ಫಲಿತಾಂಶಗಳು ಬುಕ್ಕಿಗಳ ಕೋರಿಕೆಯಂತಿರಲಿಲ್ಲ ಎಂಬ ಕುರಿತು ಸಂಶಯಗಳು ಹುಟ್ಟಿಕೊಳ್ಳಲು ಕಾರಣವಾಗಿದೆ ಎಂದು ಠಾಕ್ರೆ ಅಭಿಪ್ರಾಯಪಟ್ಟರು.
ಉದ್ಯಮಿಗಳು ಹಾಗೂ ಶಾರೂಕ್ ಖಾನ್‌ರಂತವರು ತಂಡಗಳ ಖರೀದಿಗಾಗಿ ಹಣ ಎಲ್ಲಿಂದ ತಂದಿದ್ದರು ಎಂಬುದರ ಬಗ್ಗೆಯೂ ತನಿಖೆ ನಡೆಯಬೇಕು ಎಂದವರು ಹೇಳಿದರು.
ಅದೇ ವೇಳೆ ಸರಕಾರಕ್ಕೆ ಕಿಂಚಿತ್ತಾದರೂ ನಾಚಿಕೆಯಿದ್ದರೆ ಕ್ರಿಕೆಟ್ ರಕ್ಷಣೆಗಾಗಿ ಐಪಿಎಲ್‌ನ್ನು ನಿಷೇಧಿಸಬೇಕು ಎಂದವರು ಸೇರಿಸಿದರು.