ಚೀನಾ ಅಣೆಕಟ್ಟಿನಿಂದ ಬ್ರಹ್ಮಪುತ್ರಕ್ಕೆ ತೊಂದರೆಯಿಲ್ಲ: ಕೃಷ್ಣ
ನವದೆಹಲಿ, ಗುರುವಾರ, 22 ಏಪ್ರಿಲ್ 2010( 17:53 IST )
ವಿದ್ಯುತ್ ಉತ್ಪಾದನೆಗಾಗಿ ಟಿಬೆಟಿನ ತ್ಸಾಂಗ್ ಪೊ ನದಿಗೆ ನಿರ್ಮಿಸಲಾಗುತ್ತಿರುವ ಅಣೆಕಟ್ಟಿನಿಂದಾಗಿ ಭಾರತದ ಬ್ರಹ್ಮಪುತ್ರ ನದಿಯ ಹರಿವಿನ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂಬ ಚೀನಾ ಭರವಸೆ ನೀಡಿದೆ ಎಂದು ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಗುರುವಾರ ತಿಳಿಸಿದ್ದಾರೆ.
ಇತ್ತೀಚಿನ ಬೀಜಿಂಗ್ ಪ್ರವಾಸದ ವೇಳೆ ನಡೆದ ಮಾತುಕತೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಲಾಗಿತ್ತು. ಆದರೆ ಅಣೆಕಟ್ಟಿನಲ್ಲಿ ಯಾವುದೇ ರೀತಿಯಲ್ಲಿ ನೀರು ಸಂಗ್ರಹಿಸುವುದಿಲ್ಲ ಎಂದು ಚೀನಾ ವಿದೇಶಾಂಗ ಸಚಿವರು ನನಗೆ ಭರವಸೆ ನೀಡಿದ್ದಾರೆ. ಅಲ್ಲದೆ ಇದರಿಂದಾಗಿ ಬ್ರಹ್ಮಪುತ್ರ ನದಿಯ ಕೆಳಭಾಗದಲ್ಲಿರುವ ಪ್ರದೇಶಗಳಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದೂ ಹೇಳಿದ್ದಾರೆ ಎಂದು ಅವರು ರಾಜ್ಯಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ವಿದೇಶಾಂಗ ಸಚಿವರು ತಿಳಿಸಿದರು.
ನೀರು ಹಂಚಿಕೆ ಸಂಬಂಧ ಭಾರತ ಹಾಗೂ ಚೀನಾ ದೇಶ ನಡುವೆ ಒಪ್ಪಂದ ಇಲ್ಲ. ಹಾಗಾಗಿ ಚೀನಾದ ಅಣೆಕಟ್ಟು ನಿರ್ಮಾಣದ ಪರಿಣಾಮಗಳ ಕುರಿತು ಬಿಜೆಪಿಯ ರವಿ ಶಂಕರ್ ಪ್ರಸಾದ್ ಕೇಳಿದ್ದ ಪ್ರಶ್ನೆಗೆ ವಿದೇಶಾಂಗ ಸಚಿವರು ರಾಜ್ಯಸಭೆಯಲ್ಲಿ ಉತ್ತರಿಸಿದರು.