ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪವಾರ್, ಮೋದಿ, ಕಾರಟ್ ಟೆಲಿಫೋನ್ ಕದ್ದಾಲಿಸಿದ ಕೇಂದ್ರ! (Sharad Pawar | Nitish Kumar | Prakash Karat | Phone tapping)
Bookmark and Share Feedback Print
 
ಶರದ್ ಪವಾರ್, ಪ್ರಕಾಶ್ ಕಾರಟ್, ದಿಗ್ವಿಜಯ್ ಸಿಂಗ್, ನಿತೀಶ್ ಕುಮಾರ್ ಮುಂತಾದ ನಾಯಕರ ದೂರವಾಣಿ ಮಾತುಕತೆಗಳನ್ನು ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವು ಕದ್ದಾಲಿಕೆ ನಡೆಸಿದೆ ಎಂದು ಪತ್ರಿಕೆಯೊಂದು ವರದಿ ಮಾಡಿದ್ದು, ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ.

'ಔಟ್‌ಲುಕ್' ಆಂಗ್ಲ ನಿಯತಕಾಲಿಕ ಈ ವರದಿಯನ್ನು ಮಾಡಿದೆ. ಅದರ ಪ್ರಕಾರ ಇಂಡಿಯನ್ ಪ್ರೀಮಿಯರ್ ಲೀಗ್ ವಿವಾದ ತಾರಕಕ್ಕೇರಿದ ಮಧ್ಯಭಾಗದಲ್ಲಿ ಅಂದರೆ ಕಳೆದ ಪಕ್ಷದಲ್ಲಿ (2010 ಏಪ್ರಿಲ್ 10ರ ಹೊತ್ತಿಗೆ) ಕೇಂದ್ರ ಕೃಷಿ ಸಚಿವ ಹಾಗೂ ಎನ್‌ಸಿಪಿ ನಾಯಕ ಶರದ್ ಪವಾರ್ ಮತ್ತು ಐಪಿಎಲ್ ಆಯುಕ್ತ ಲಲಿತ್ ಮೋದಿ ನಡುವಿನ ದೂರವಾಣಿ ಸಂಭಾಷಣೆಯನ್ನು ಕೇಂದ್ರ ಸರಕಾರವು ಕದ್ದಾಲಿಕೆ ನಡೆಸಿದೆ.
Outlook front page
PR

ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಅವರ ದೂರವಾಣಿಯನ್ನು ಕಳ್ಳತನದ ಮಾರ್ಗದ ಮೂಲಕ ಆಲಿಸಿದ್ದು 2007ರ ಫೆಬ್ರವರಿಯಲ್ಲಿ. ಕಾಂಗ್ರೆಸ್ ಕಾರ್ಯನಿರತ ಸಮಿತಿಯ ಚುನಾವಣೆಗಳಿಗಾಗಿ ಅಭ್ಯರ್ಥಿಗಳ ಕುರಿತು ಪಂಜಾಬ್ ಕಾಂಗ್ರೆಸ್ ಮುಖಂಡರೊಂದಿಗೆ ಅವರು ಮಾತನಾಡುತ್ತಿದ್ದಾಗ ಈ ಕೃತ್ಯವನ್ನು ಎಸಗಲಾಗಿತ್ತು.

ಪ್ರಸಕ್ತ ಬಿಹಾರ ಮುಖ್ಯಮಂತ್ರಿಯಾಗಿರುವ ಜೆಡಿಯು ಮುಖಂಡ ನಿತೀಶ್ ಕುಮಾರ್ ಅವರ ದೂರವಾಣಿಯನ್ನು 2007ರ ಅಕ್ಟೋಬರ್ ತಿಂಗಳಲ್ಲಿ ಕದ್ದಾಲಿಸಲಾಗಿತ್ತು. ಅವರು ದೆಹಲಿಯಲ್ಲಿದ್ದಾಗ, ಕೇಂದ್ರದಿಂದ ಹೆಚ್ಚು ನಿಧಿಯನ್ನು ಹೇಗೆ ಪಡೆದುಕೊಳ್ಳಬಹುದು ಎಂದು ತನ್ನ ಸಹ ನಾಯಕನೊಂದಿಗೆ ಚರ್ಚಿಸುತ್ತಿದ್ದಾಗ ಟ್ಯಾಪ್ ಮಾಡಲಾಗಿದೆ.

ಭಾರತ - ಅಮೆರಿಕಾ ನಡುವಿನ ನಾಗರಿಕ ಪರಮಾಣು ಒಪ್ಪಂದವನ್ನು ತೀವ್ರವಾಗಿ ವಿರೋಧಿಸುತ್ತಿದ್ದ ಸಿಪಿಐಎಂ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್ ಅವರ ದೂರವಾಣಿಯನ್ನು 2008ರ ಜೂನ್‌ನಲ್ಲಿ ಕದ್ದಾಲಿಕೆ ಮಾಡಲಾಗಿತ್ತು. ಪರಮಾಣು ಒಪ್ಪಂದದ ಬಗ್ಗೆ ಸಿಪಿಐಎಂ ಯೋಜನೆಗಳನ್ನು ತಿಳಿದುಕೊಳ್ಳುವುದು ಕಾಂಗ್ರೆಸ್ ತಂತ್ರವಾಗಿತ್ತು ಎಂದು ಪತ್ರಿಕೆ ವರದಿ ಮಾಡಿದೆ.

ಯುಪಿಎ ಸರಕಾರವು ಮೊಬೈಲ್ ಫೋನ್‌ಗಳು, ಸ್ಥಿರ ದೂರವಾಣಿಗಳು ಮತ್ತು ಇಂಟರ್ನೆಟ್ ದೂರವಾಣಿಗಳ ಕರೆಗಳನ್ನು ಕದ್ದಾಲಿಸಲು ನೂತನ ತಂತ್ರಜ್ಞಾನಗಳನ್ನು ಬಳಸಿದೆ ಎಂದೂ ಈ ವರದಿ ಹೇಳಿದೆ.
ಸಂಬಂಧಿತ ಮಾಹಿತಿ ಹುಡುಕಿ