ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಶೋಯಿಬ್ ಸೇರಿಸಲ್ಲ, ಹೆಸರು ಬದಲಾವಣೆಯಿಲ್ಲ: ಸಾನಿಯಾ (Sania Mirza | Shoaib Malik | Pakistan | Sania Malik)
Bookmark and Share Feedback Print
 
ಗಂಡನ ಹೆಸರನ್ನು ತನ್ನ ಹೆಸರಿನ ಜತೆ ಸೇರಿಸುವುದಿಲ್ಲ, ನನ್ನ ಹೆಸರಿನಲ್ಲಿ ಸದ್ಯಕ್ಕೆ ಯಾವುದೇ ಬದಲಾವಣೆ ಮಾಡುವುದಿಲ್ಲ. ಮುಂದೇನಾಗುತ್ತೋ ನೋಡೋಣ ಎಂದು ಇತ್ತೀಚೆಗಷ್ಟೇ ಪಾಕಿಸ್ತಾನ ಕ್ರಿಕೆಟ್ ಆಟಗಾರ ಶೋಯಿಬ್ ಮಲಿಕ್‌ರನ್ನು ವರಿಸಿದ್ದ ಟೆನಿಸ್ ತಾರೆ ಸಾನಿಯಾ ಮಿರ್ಜಾ ತಿಳಿಸಿದ್ದಾರೆ.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ 'ವೆಬ್‌ದುನಿಯಾ'ವನ್ನು ಫಾಲೋ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಹೀಗಾಗಿ ಸಾನಿಯಾ ಮಿರ್ಜಾ, ಸಾನಿಯಾ ಮಲಿಕ್ ಆಗಿ ಬದಲಾಗುವುದಿಲ್ಲ ಎಂಬುದನ್ನು ಬಹಿರಂಗಪಡಿಸಿದ್ದಾರೆ. ಮುಂದೆ ಏನಾಗುತ್ತದೋ ಗೊತ್ತಿಲ್ಲ, ಆದರೆ ನನ್ನ ಹೆಸರನ್ನು ಸಾನಿಯಾ ಮಿರ್ಜಾ ಆಗಿಯೇ ಉಳಿಸಿಕೊಳ್ಳಲು ನಾನು ಎಂದೆಂದೂ ಬಯಸುತ್ತೇನೆ ಎಂದಿದ್ದಾರೆ.
PTI

ಸಾಮಾನ್ಯವಾಗಿ ಮದುವೆಯಾದ ನಂತರ ಪತ್ನಿಯು, ತನ್ನ ಗಂಡ ಹೆಸರಿನ ಕೊನೆಯ ತುಂಡನ್ನು ಸೇರಿಸಿಕೊಳ್ಳುತ್ತಾರೆ. ಇದನ್ನೂ ಸಂಪೂರ್ಣವಾಗಿ ತಳ್ಳಿ ಹಾಕದ ಸಾನಿಯಾ, ಮುಂದೆ ಗಂಡನ ಹೆಸರನ್ನು ಸೇರಿಸಿದರೂ ಅಚ್ಚರಿಯಿಲ್ಲ ಎಂದಿದ್ದಾರೆ.

ಗಂಡನ ಮನೆ ಪಾಕಿಸ್ತಾನಕ್ಕೆ ತೆರಳುವ ಮೊದಲು 'ಪ್ಯೂಪಲ್' ನಿಯತಕಾಲಿಕಕ್ಕೆ ಶೋಯಿಬ್ ಜತೆ ನೀಡಿರುವ ಸಂದರ್ಶನದಲ್ಲಿ ಇದೇ ರೀತಿ ಹಲವು ವಿಚಾರಗಳನ್ನು ಅವರು ಬಹಿರಂಗಪಡಿಸಿದ್ದಾರೆ.

ಪ್ರೀತಿ ಹುಟ್ಟಿದ್ದು ಹೀಗೆ...
ಮೊದಲ ಕೆಲವು ಭೇಟಿಯ ನಂತರ ನಾವಿಬ್ಬರೂ ಎಸ್ಎಂಎಸ್ ಸಂದೇಶಗಳನ್ನು ಪರಸ್ಪರ ರವಾನಿಸಿಕೊಳ್ಳುತ್ತಿದ್ದೆವು. ನಂತರ ಗಂಟೆಗಟ್ಟಲೆ ಫೋನ್‌ನಲ್ಲಿ ಮಾತನಾಡಲಾರಂಭಿಸಿದೆವು. ಇಲ್ಲಿಂದಲೇ ನಮ್ಮ ನಡುವೆ ಏನೋ ಆರಂಭವಾಗಿತ್ತು.

ನೀನು ದೂರವಾಣಿ ಕರೆಗಳಿಗಾಗಿ ಸಾಕಷ್ಟು ಹಣವನ್ನು ವ್ಯಯಿಸುತ್ತಿದ್ದೀಯಾ ಎಂದು ತಾಯಿ ಆಗಾಗ ಹೇಳುತ್ತಿದ್ದರು. ಇದು ವೇಸ್ಟಾಗಲ್ಲಮ್ಮ ಎಂದು ಆಗ ನಾನು ಅವರಿಗೆ ಹೇಳುತ್ತಿದ್ದೆ ಎಂದು 23ರ ಹರೆಯದ ಟೆನಿಸ್ ಆಟಗಾರ್ತಿ ಹೇಳಿದ್ದಾರೆ.

ನಾವು ಜೀವನ ಪರ್ಯಂತ ಸಂಗಾತಿಗಳು...
ಇಬ್ಬರೂ ವೃತ್ತಿಪರ ಆಟಗಾರರಾಗಿರುವುದರಿಂದ ಸಹಜವಾಗಿಯೇ ಎಡೆಬಿಡದ ವೇಳಾಪಟ್ಟಿಯಿರುತ್ತದೆಯಲ್ಲವೇ ಎಂಬ ಪ್ರಶ್ನೆಗೆ ಶೋಯಿಬ್ ಉತ್ತರಿಸಿದರು.

ನಾವಿಬ್ಬರೂ ಜೀವನ ಪರ್ಯಂತ ಒಟ್ಟಿಗೆ ಜೀವನ ಮಾಡುತ್ತೇವೆ. ಹಾಗಾಗಿ ಕೇವಲ ಕೆಲವು ವಾರಗಳು ತಿಂಗಳುಗಳಷ್ಟು ಕಾಲ ದೂರ ಉಳಿದುಕೊಂಡರೆ ಅದೇನೂ ತುಂಬಾ ಕಷ್ಟವೆನಿಸದು ಎಂದಿದ್ದಾರೆ.

ಇದೇ ಸಂದರ್ಭದಲ್ಲಿ ಮಾತನಾಡಿದ ಸಾನಿಯಾ, ಇದೆಲ್ಲ ಏನಿದ್ದರೂ ತಾತ್ಕಾಲಿಕ. ನಾನು ಬಹುಶಃ ಇನ್ನು ಮೂರರಿಂದ ನಾಲ್ಕು ವರ್ಷಗಳ ಕಾಲ ದೇಶಕ್ಕಾಗಿ ಟೆನಿಸ್ ಆಡುತ್ತೇನೆ ಎಂದು ಸ್ಪಷ್ಟಪಡಿಸಿದರು.

ಶೋಯಿಬ್ ಸಿಕ್ಕಾಪಟ್ಟೆ ರೊಮ್ಯಾಂಟಿಕ್...
ಹೀಗೆಂದು ಹೇಳಿದ್ದು ಅವರ ಧರ್ಮಪತ್ನಿ ಸಾನಿಯಾ. ಅವರು ನನಗಿಂತಲೂ ಹೆಚ್ಚು ರೊಮ್ಯಾಂಟಿಕ್. ನಾನು ಮೆಹೆಂದಿ ಹಾಕಿಸಿಕೊಳ್ಳುತ್ತಿದ್ದಾಗ, ನನ್ನೊಂದಿಗೆ ನಾಲ್ಕು ಗಂಟೆಗಳ ಕಾಲ ಕುಳಿತಿದ್ದರು. ಯಾಕೆಂದರೆ ಅವರಿಗೂ ಮೆಹೆಂದಿ ಬೇಕಾಗಿತ್ತು ಎಂದಿದ್ದಾರೆ.

ಇದಕ್ಕೆ ಹೊಗಳಿಕೆಯ ಸುರಿಮಳೆ ಸುರಿಸಿದ ಶೋಯಿಬ್, ನನ್ನ ಪತ್ನಿ ಸಾನಿಯಾ ಹೊಂದಿಕೊಂಡು ಹೋಗುತ್ತಾಳೆ; ತುಂಬಾ ಸಮಯ ಪರಿಜ್ಞಾನ ಇರುವವಳು ಮತ್ತು ಮಧುರ ಭಾವನೆಯನ್ನು ಹೊಂದಿದವಳು. ಅದಕ್ಕಿಂತಲೂ ಮುಖ್ಯವಾದ ವಿಚಾರವೆಂದರೆ ಆಕೆಗೆ ಕೋಪ ಬರುವುದಿಲ್ಲ ಎಂದರು.
ಸಂಬಂಧಿತ ಮಾಹಿತಿ ಹುಡುಕಿ