ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬಾಬ್ರಿ ಮಸೀದಿ ಧ್ವಂಸ ಪೊಲೀಸರಿಗೆ ಗೊತ್ತಿತ್ತು: ಅಂಜು ಗುಪ್ತಾ (Anju Gupta | Babri Masjid | LK Advani | Ayodhya)
Bookmark and Share Feedback Print
 
1992ರ ಡಿಸೆಂಬರ್ ಆರರಂದು ಬಾಬ್ರಿ ಮಸೀದಿಗೆ ತೊಂದರೆ ಮಾಡುವ ಯತ್ನಗಳು ನಡೆಯುವ ಸಾಧ್ಯತೆಗಳಿವೆ ಎಂಬ ಗುಪ್ತಚರ ಮಾಹಿತಿಗಳು ಫೈಜಾಬಾದ್ ಪೊಲೀಸರಿಗೆ ಲಭಿಸಿದ್ದವು ಎಂದು ಬಿಜೆಪಿ ನಾಯಕ ಎಲ್.ಕೆ. ಅಡ್ವಾಣಿಯವರಿಗೆ ಈ ಸಂದರ್ಭದಲ್ಲಿ ಭದ್ರತಾ ಅಧಿಕಾರಿಯಾಗಿದ್ದ ಐಪಿಎಸ್ ಅಧಿಕಾರಿ ಅಂಜು ಗುಪ್ತಾ ವಿಶೇಷ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ 'ವೆಬ್‌ದುನಿಯಾ'ವನ್ನು ಫಾಲೋ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಮಸೀದಿ ಧ್ವಂಸವಾಗುವ ಒಂದು ದಿನಕ್ಕೆ ಮೊದಲು ಡಿಸೆಂಬರ್ ಐದರಂದು ಫೈಜಾಬಾದ್‌ನ ಪೊಲೀಸ್ ಮಹಾನಿರ್ದೇಶಕ ಎ.ಕೆ. ಸರನ್ ಕರೆದಿದ್ದ ಭದ್ರತಾ ಪರಿಶೀಲನಾ ಸಭೆಗೆ ನಾನೂ ಹೋಗಿದ್ದೆ ಎಂದು 1990ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿರುವ ಅಂಜು ಗುಪ್ತಾ ಇಲ್ಲಿನ ಮುಖ್ಯ ನ್ಯಾಯಿಕ ದಂಡಾಧಿಕಾರಿ ಗುಲಾಬ್ ಸಿಂಗ್ ಅವರೆದುರು ಪ್ರತಿವಾದಿ ಪರ ವಕೀಲರ ಪಾಟೀ ಸವಾಲಿಗೆ ಉತ್ತರಿಸಿದ್ದಾರೆ.
PTI

ಪ್ರತಿವಾದಿ ವಕೀಲರ ನಿರ್ದಿಷ್ಟ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದ ಗುಪ್ತಾ, ಐಜಿಪಿ ಸರನ್ ಅವರು ಕರೆದಿದ್ದ ಈ ಸಭೆ ಸುಮಾರು 40-45 ನಿಮಿಷಗಳ ಕಾಲ ನಡೆದಿತ್ತು; ಈ ಸಂದರ್ಭದಲ್ಲಿ ಎರಡು ರೀತಿಯ ಬೆದರಿಕೆಗಳು ಇರುವುದಾಗಿ ಗುಪ್ತಚರ ವರದಿಗಳು ಇರುವುದನ್ನು ಅವರು ತಿಳಿಸಿದ್ದರು ಎಂದರು.

ಒಂದು ವಿವಾದಿತ ಕಟ್ಟಡದ ಮೇಲೆ ಅಲ್ಲಿ ನೆರೆಯುವ ಜನರು ದಾಳಿ ಯತ್ನ ನಡೆಸಬಹುದು. ಮತ್ತೊಂದು ಪಾಕಿಸ್ತಾನದ ಐಎಸ್ಐ ಸಂಘಟನೆಯು ಅಯೋಧ್ಯೆಯಲ್ಲಿನ ಕಾನೂನು ಮತ್ತು ಸುವ್ಯವಸ್ಥೆಗಳಿಗೆ ಧಕ್ಕೆ ತರಬಹುದು ಎಂಬ ಎರಡು ಬೆದರಿಕೆಗಳು ಪೊಲೀಸ್ ಇಲಾಖೆಗೆ ಲಭಿಸಿತ್ತು ಎಂದು ಗುಪ್ತಾ ವಿವರಣೆ ನೀಡಿದ್ದಾರೆ.

ಸಂಘ ಪರಿವಾರದ ಕರಸೇವಕರಿಂದ ಮಸೀದಿ ಧ್ವಂಸವಾಗುವ ಮೊದಲು ಅಯೋಧ್ಯೆಯಲ್ಲಿ ಅಡ್ವಾಣಿಯವರು ಪ್ರಚೋದನಾಕಾರಿ ಭಾಷಣ ಮಾಡಿದ್ದರು ಎಂದು ಈ ಹಿಂದೆ ಮಾರ್ಚ್ 26ರಂದು ಸಾಕ್ಷ್ಯ ವಿಚಾರಣೆ ಸಂದರ್ಭದಲ್ಲಿ ಗುಪ್ತಾರವರು ನ್ಯಾಯಾಲಯಕ್ಕೆ ತಿಳಿಸಿದ್ದರು.

ಅಯೋಧ್ಯೆಯಲ್ಲಿನ ಬಾಬ್ರಿ ಮಸೀದಿ ಧ್ವಂಸ ಸಂದರ್ಭದಲ್ಲಿ ಅಡ್ವಾಣಿಯವರಿಗೆ ಭದ್ರತಾ ಅಧಿಕಾರಿಯಾಗಿದ್ದ ಗುಪ್ತಾ, ನಂತರ ಫೈಜಾಬಾದ್‌ನ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿಕಾರಿಯಾಗಿ ನೇಮಕಗೊಂಡಿದ್ದರು.
ಸಂಬಂಧಿತ ಮಾಹಿತಿ ಹುಡುಕಿ