ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸಂಸತ್‌ನಲ್ಲಿ ಕನ್ನಡ ಕಹಳೆ ಮೊಳಗಿಸಿದ ರಂಗಕರ್ಮಿ ಜಯಶ್ರೀ (B Jayashree | Rajya Sabha | Kannada | Karnataka)
Bookmark and Share Feedback Print
 
ರಾಜ್ಯಸಭೆಗೆ ನಾಮಕರಣಗೊಂಡಿದ್ದ ಖ್ಯಾತ ರಂಗಕರ್ಮಿ ಬಿ. ಜಯಶ್ರೀ ಸೋಮವಾರ ಕನ್ನಡದಲ್ಲೇ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಜಯಶ್ರೀಯವರು ವಿದೇಶ ಪ್ರವಾಸ ಕೈಗೊಂಡಿದ್ದರಿಂದ ಇತರ ನಾಮಕರಣ ಸದಸ್ಯರೊಂದಿಗೆ ಪ್ರಮಾಣವಚನ ಸ್ವೀಕರಿಸಲು ಅವರಿಗೆ ಸಾಧ್ಯವಾಗಿರಲಿಲ್ಲ.

'ಜಯಶ್ರೀ ಎಂಬ ಹೆಸರಿನವಳಾದ ನಾನು...' ಎಂದೇ ಆರಂಭಿಸಿ ಸಂಪೂರ್ಣವಾಗಿ ಕನ್ನಡದಲ್ಲೇ ಪ್ರಮಾಣ ವಚನ ಸ್ವೀಕರಿಸಿದರು. ಅವರಿಗೆ ಉಪರಾಷ್ಟ್ರಪತಿ ಹಾಗೂ ರಾಜ್ಯಸಭೆ ಸ್ಪೀಕರ್ ಹಮೀದ್ ಅನ್ಸಾರಿಯವರು ಪ್ರಮಾಣ ವಚನ ಬೋಧಿಸಿದರು.

ಗುಬ್ಬಿ ನಾಟಕ ಕಂಪನಿಯ ಸಂಸ್ಥಾಪಕ ಹಾಗೂ ಕನ್ನಡ ರಂಗಭೂಮಿಯ ಹರಿಕಾರ ಗುಬ್ಬಿ ವೀರಣ್ಣ ಅವರ ಮೊಮ್ಮಗಳಾಗಿರುವ ಜಯಶ್ರೀ ಕರ್ನಾಟಕದ ಶ್ರೇಷ್ಠ ರಂಗಕರ್ಮಿಗಳಲ್ಲಿ ಒಬ್ಬರೆಂದು ಗುರುತಿಸಲ್ಪಡುತ್ತಿದ್ದಾರೆ. ಗಾಯನ ಮತ್ತು ಸಿನಿಮಾ ಕ್ಷೇತ್ರಗಳಲ್ಲೂ ಇವರು ಗಮನಾರ್ಹ ಸೇವೆ ಸಲ್ಲಿಸುತ್ತಿದ್ದಾರೆ.

ಕಲಾ ಕ್ಷೇತ್ರದಲ್ಲಿ ಮಹಿಳೆ ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಭಾರತೀಯ ರಂಗಭೂಮಿಯ ಕುರಿತಾದ ವಿಚಾರಗಳನ್ನು ನಾನು ಸಂಸತ್‌ನಲ್ಲಿ ಪ್ರಸ್ತಾಪಿಸುವುದಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡುತ್ತಾ ಜಯಶ್ರೀ ತಿಳಿಸಿದ್ದಾರೆ.

ನನಗೆ ಮೊದಲ ದಿನವೇ ನಿರಾಸೆ ಎದುರಾಗಿದೆ. ಇಡೀ ದಿನ ಕಲಾಪ ವೀಕ್ಷಿಸಬೇಕೆನ್ನುವುದು ನನ್ನ ಆಸೆಯಾಗಿತ್ತು. ಆದರೆ ಇಂದು ಹೆಚ್ಚು ಹೊತ್ತು ಕಲಾಪ ನಡೆಯಲಿಲ್ಲ ಎಂದಿದ್ದಾರೆ.

ನಂತರ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಯವರನ್ನು ಭೇಟಿ ಮಾಡಿದ ಅವರು, ರಾಜ್ಯಸಭೆಗೆ ತನ್ನನ್ನು ನಾಮಕರಣಗೊಳಿಸಿರುವುದಕ್ಕೆ ಕೃತಜ್ಞತೆ ಸಲ್ಲಿಸಿದರು. ನಾಟಕ ಹಾಗೂ ಸಂಗೀತ ಕ್ಷೇತ್ರಕ್ಕೆ ಜಯಶ್ರೀ ನೀಡಿರುವ ಕೊಡುಗೆ ಕುರಿತು ಸೋನಿಯಾ ಇದೇ ಸಂದರ್ಭದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದರು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಜಯಶ್ರೀ, ಕರ್ನಾಟಕ, ರಾಜ್ಯಸಭೆ