ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬೆಲೆಯೇರಿಕೆ ವಿರುದ್ಧ 'ಭಾರತ ಬಂದ್'; ಕರ್ನಾಟಕದಲ್ಲಿ ಸಪ್ಪೆ (price rise | petroleum price rise | UPA govt | Bharat Bandh)
Bookmark and Share Feedback Print
 
ಪೆಟ್ರೋಲಿಯಂ ದರ ಹೆಚ್ಚಳ ಮತ್ತು ಅಗತ್ಯ ವಸ್ತುಗಳ ಬೆಲೆಯೇರಿಕೆ ನಿಯಂತ್ರಿಸಲು ವಿಫಲವಾಗಿರುವ ಕಾಂಗ್ರೆಸ್ ನೇತೃತ್ವದ ಕೇಂದ್ರ ಸರಕಾರದ ವಿರುದ್ಧ ಬಿಜೆಪಿಯೇತರ 13 ರಾಜಕೀಯ ಪಕ್ಷಗಳು ರಾಷ್ಟ್ರವ್ಯಾಪಿ 'ಭಾರತ ಬಂದ್' ನಡೆಸುತ್ತಿವೆ. ಬಂದ್‌ನಿಂದಾಗಿ ಕೆಲವು ರಾಜ್ಯಗಳಲ್ಲಿ ರೈಲು ಮತ್ತು ಸಾರಿಗೆ ಸೇವೆಗಳು ಸ್ಥಗಿತಗೊಂಡಿವೆ. ಕರ್ನಾಟಕದಲ್ಲೂ ಕೆಲವು ಕಡೆ ಪ್ರತಿಭಟನೆಗಳು ನಡೆದಿರುವ ಬಗ್ಗೆ ವರದಿಗಳು ಬಂದಿವೆ.

ಸಮಾಜವಾದಿ ಪಕ್ಷ, ಎಡಪಕ್ಷಗಳು, ತೆಲುಗು ದೇಶಂ, ರಾಷ್ಟ್ರೀಯ ಲೋಕದಳ, ರಾಷ್ಟ್ರೀಯ ಜನತಾದಳ, ಲೋಕ ಜನಶಕ್ತಿ ಸೇರಿದಂತೆ 13 ರಾಜಕೀಯ ಪಕ್ಷಗಳು ಬಂದ್‌ಗೆ ಕರೆ ಕೊಟ್ಟಿವೆ. ಆದರೆ ಪ್ರಮುಖ ವಿರೋಧ ಪಕ್ಷವಾಗಿರುವ ಬಿಜೆಪಿ ಇದರಿಂದ ದೂರ ಉಳಿದಿದೆ.

ಆಂಧ್ರಪ್ರದೇಶ, ಪಶ್ಚಿಮ ಬಂಗಾಲ, ಒರಿಸ್ಸಾ, ಬಿಹಾರ, ಉತ್ತರ ಪ್ರದೇಶ, ಅರುಣಾಚಲ ಪ್ರದೇಶ, ಕೇರಳ ಸೇರಿದಂತೆ ಹಲವು ರಾಜ್ಯಗಳಲ್ಲಿ ಬಂದ್ ಯಶಸ್ವಿಯಾಗಿದೆ. ಇಲ್ಲಿ ರಸ್ತೆ ಸಾರಿಗೆ, ವೈಮಾನಿಕ ಸೇವೆ ಮತ್ತು ರೈಲು ಸೇವೆಗಳಿಗೂ ಧಕ್ಕೆಯಾಗಿದೆ. ಕೆಲವು ಕಡೆ ಹಿಂಸಾಚಾರಗಳು ಕೂಡ ನಡೆದಿವೆ. ಹಲವು ನಾಯಕರನ್ನು ಬಂಧಿಸಲಾಗಿದೆ ಎಂದು ವರದಿಗಳು ಹೇಳಿವೆ.

ಕರ್ನಾಟಕದಲ್ಲಿ ಮಿಶ್ರ ಪ್ರತಿಕ್ರಿಯೆ...
ಬಳ್ಳಾರಿಯಲ್ಲಿ ಜೆಡಿಎಸ್ ಬೆಂಬಲದಿಂದ ನಡೆದ ಪ್ರತಿಭಟನೆಯಲ್ಲಿ ಹಲವು ಸಂಘಟನೆಗಳು ಪಾಲ್ಗೊಂಡಿದ್ದವು. ಅಂಗಡಿ ಮುಂಗಟ್ಟುಗಳನ್ನು ಬಲವಂತವಾಗಿ ಮುಚ್ಚಿಸಲಾಯಿತು. ಇಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಬಹುತೇಕ ಬಂದ್ ಯಶಸ್ವಿಯಾಗಿದೆ.

ಗುಲ್ಬರ್ಗಾದಲ್ಲಿ ಸಿಪಿಐ, ಸಿಪಿಎಂ ಮತ್ತು ಜೆಡಿಎಸ್‌ ಪಕ್ಷಗಳು ರೈಲು ರೋಕೋ ನಡೆಸಿದವು. ಮಂಗಳೂರಿನಲ್ಲಿ ಎಡಪಕ್ಷಗಳು ರಸ್ತೆ ತಡೆ ನಡೆಸಿವೆ. ದಾವಣಗೆರೆಯಲ್ಲಿ ವಿವಿಧ ಸಂಘಟನೆಗಳು ಒಗ್ಗೂಡಿ ಪ್ರತಿಭಟನೆ ನಡೆಸಿವೆ.

ಕೊಪ್ಪಳದಲ್ಲಿ ಬಂದ್‌ಗೆ ನೀರಸ ಪ್ರತಿಕ್ರಿಯೆ ಸಿಕ್ಕಿದೆ. ಇಲ್ಲಿ ಎಂದಿನಂತೆ ದೈನಂದಿನ ವಹಿವಾಟುಗಳು ನಡೆದಿವೆ. ಬಸ್ ಸಂಚಾರದಲ್ಲಿ ವ್ಯತ್ಯಯವಾಗಿದ್ದರೂ ಸಾರ್ವಜನಿಕ ಜೀವನದ ಮೇಲೆ ಹೆಚ್ಚಿನ ಪರಿಣಾಮ ಬೀರಿಲ್ಲ. ಸಿಪಿಐ ಕಾರ್ಯಕರ್ತರು ಅಂಗಡಿ ಮುಚ್ಚಿಸಲು ಯತ್ನಿಸಿದ ಕೆಲವು ಘಟನೆಗಳು ವರದಿಯಾಗಿವೆ.
ಸಂಬಂಧಿತ ಮಾಹಿತಿ ಹುಡುಕಿ