ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಭಯೋತ್ಪಾದಕರ ಧ್ವನಿ ಮಾದರಿ ಸಂಗ್ರಹ ಅಗತ್ಯ: ಮೋದಿ (Narendra Modi | Gujarat | criminals | terrorists)
Bookmark and Share Feedback Print
 
ವಿಶ್ವದಾದ್ಯಂತ ಹರಡಿರುವ ಗಡಿಯಾಚೆಗಿನ ಭಯೋತ್ಪಾದನೆಯನ್ನು ಮಟ್ಟ ಹಾಕಲು ಭಯೋತ್ಪಾದಕರು ಮತ್ತು ಕ್ರಿಮಿನಲ್‌ಗಳ ಧ್ವನಿ ಮಾದರಿಗಳನ್ನು ಒಂದೆಡೆ ಕ್ರೋಢೀಕರಿಸಬೇಕಾದ ಅಗತ್ಯವಿದೆ ಎಂದು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ.

ಪ್ರಸಕ್ತ ಜಗತ್ತು ಎದುರಿಸುತ್ತಿರುವ ಬಹುದೊಡ್ಡ ಸಮಸ್ಯೆ ಭಯೋತ್ಪಾದನೆ. ಗಡಿಯಾಚೆಗಿನ ಭಯೋತ್ಪಾದನೆಯ ಬೆದರಿಕೆಯಿಂದ ಹಲವು ದೇಶಗಳು ನಲುಗುತ್ತಿವೆ ಎಂದು ಗುಜರಾತ್ ವಿಧಿ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ಸಾರ್ಕ್ ರಾಷ್ಟ್ರಗಳಿಗಾಗಿ ಇಂಟರ್ಪೋಲ್ ಆಯೋಜಿಸಿದ್ದ ಡಿಎನ್‌ಎ, ಡಿವಿಐ ಮತ್ತು ಬೆರಳಚ್ಚು ಕುರಿತ ತನಿಖಾ ವಿಧಾನಗಳನ್ನು ಪರಿಚಯಿಸುತ್ತಾ ತಿಳಿಸಿದರು.

ಕ್ರಿಮಿನಲ್‌ಗಳು ಹೆಚ್ಚೆಚ್ಚು ಚಾಣಾಕ್ಷ ತಂತ್ರಗಳನ್ನು ಅನುಸರಿಸುತ್ತಿರುವುದರಿಂದ ಭದ್ರತಾ ಮತ್ತು ತನಿಖಾ ದಳಗಳು ಕ್ಲಿಷ್ಟಕರ ಅಪರಾಧಗಳನ್ನು ಪತ್ತೆ ಹಚ್ಚಲು ಸುಧಾರಿತ ತಂತ್ರಜ್ಞಾನಗಳನ್ನು ಬಳಸಬೇಕಾಗುತ್ತದೆ. ತನಿಖೆಯ ಹಳೆಯ ತಂತ್ರಗಳು ಮಕ್ಕಳ ಅಪರಾಧಗಳಿಗೆ ಮಾತ್ರ ಉಪಯೋಗಕ್ಕೆ ಬರಬಹುದು. ಆದರೆ ಭಾರೀ ಮುಂದುವರಿದಿರುವ ಕ್ರಿಮಿನಲ್‌ಗಳ ತಂತ್ರಗಳಿಗೆ ಅದು ಸಾಟಿಯಾಗದು ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ.

ಅದೇ ಹೊತ್ತಿಗೆ ದೇಶದಲ್ಲಿ ಡಿಎನ್‌ಎ ಪದ್ಧತಿಯನ್ನು ಅನುಸರಿಸುವಂತೆ ಮೋದಿ ಸಲಹೆ ನೀಡಿದ್ದಾರೆ. ಪ್ರಗತಿ ಹೊಂದಿದ ಎಲ್ಲಾ ದೇಶಗಳು ಈ ತಂತ್ರಜ್ಞಾನವನ್ನು ಬಳಸುತ್ತಿವೆ. ಆದರೆ ಭಾರತ ಇನ್ನೂ ಡಿಎನ್‌ಎ ಪದ್ಧತಿಯನ್ನು ಅಪರಾಧಿಗಳ ಪತ್ತೆಗಾಗಿ ಬಳಸುತ್ತಿಲ್ಲ. ಇದನ್ನು ದೇಶದಲ್ಲಿ ಬಳಕೆಗೆ ತರಬೇಕು ಎಂದರು.

ನಾಲ್ಕು ದಿನಗಳ ಕಾಲ ನಡೆಯಲಿರುವ ಈ ಸಮಾವೇಶ ಏಷಿಯಾದಲ್ಲಿ ನಡೆಯುತ್ತಿರುವುದು ಇದೇ ಮೊದಲು. ಇದರಲ್ಲಿ ಅಫಘಾನಿಸ್ತಾನ, ಬಾಂಗ್ಲಾದೇಶ, ಭೂತಾನ್, ಮಾಲ್ದೀವ್ಸ್, ನೇಪಾಳ, ಪಾಕಿಸ್ತಾನ ಮತ್ತು ಶ್ರೀಲಂಕಾಗಳ ತಜ್ಞರು ಭಾಗವಹಿಸುತ್ತಿದ್ದಾರೆ. ಅವರು ಡಿಎನ್‌ಎ ಪ್ರೊಫೈಲಿಂಗ್, ಮುಂದುವರಿದ ಬೆರಳಚ್ಚು ತಂತ್ರಜ್ಞಾನ, ಬಲಿಪಶುವಿನ ಗುರುತು ಪತ್ತೆ ಮುಂತಾದ ಹತ್ತು ಹಲವು ವಿಚಾರಗಳ ಕುರಿತು ಅನುಭವ ಮತ್ತು ತಂತ್ರಜ್ಞಾನಗಳನ್ನು ಇಲ್ಲಿ ಹಂಚಿಕೊಳ್ಳಲಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ