ತಿರುವನಂತಪುರಂ, ಗುರುವಾರ, 29 ಏಪ್ರಿಲ್ 2010( 08:53 IST )
ಆಡಳಿತ ಪಕ್ಷ ಎಲ್ಡಿಎಫ್ ಜತೆ ಕಳೆದ ಹಲವು ಸಮಯದಿಂದ ಗುರುತಿಸಿಕೊಂಡಿರುವ ಕೇರಳ ಕಾಂಗ್ರೆಸ್ (ಜೋಸೆಫ್) ಇದೀಗ ಕೆ.ಎಂ. ಮಣಿ ನೇತೃತ್ವದ ಕೇರಳ ಕಾಂಗ್ರೆಸ್ ಗುಂಪಿನ ಜತೆ ಗುರುತಿಸಿಕೊಳ್ಳಲು ಮುಂದಾಗಿದ್ದು, ಮಹತ್ವದ ಬದಲಾವಣೆಗಳು ನಡೆಯುವ ಮುನ್ಸೂಚನೆಗಳು ಲಭಿಸಿವೆ. ಕೆಸಿಜೆ ಮುಖ್ಯಸ್ಥ ಹಾಗೂ ಸಚಿವ ಪಿ.ಜೆ. ಜೋಸೆಫ್ ಇದೇ ಸಂಬಂಧ ಸಂಪುಟ ಸಭೆಯಿಂದಲೂ ದೂರ ಉಳಿದಿದ್ದಾರೆ.