ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಓ ಪಾಕಿಸ್ತಾನವೇ, ಸಾನಿಯಾ ಆಯ್ತು, ಪ್ಲೀಸ್ ರಾಖಿಯನ್ನೂ...! (Sania Mirza | Rakhi Sawant | Pakistan | FaceBook)
Bookmark and Share Feedback Print
 
IFM
'ಸಾನಿಯಾ ಮಿರ್ಜಾಳನ್ನು ಕೊಂಡು ಹೋಗಿರುವುದಕ್ಕೆ ಧನ್ಯವಾದಗಳು, ಈಗ ದಯವಿಟ್ಟು ರಾಖಿ ಸಾವಂತ್‌ಳನ್ನೂ ಕರೆದುಕೊಂಡು ಹೋಗಿ' ಹೀಗೆಂದು ಪಾಕಿಸ್ತಾನವನ್ನು ಉದ್ದೇಶಿಸಿ ಹೇಳುವ ಹಾಸ್ಯಮಯ ಎಸ್ಎಂಎಸ್ ಸಂದೇಶಗಳನ್ನು ಬಹುತೇಕ ಎಲ್ಲರೂ ಸ್ವೀಕರಿಸಿರುತ್ತೀರಿ. ಅಚ್ಚರಿಯ ವಿಚಾರವೆಂದರೆ ಇದೇ ವಿಚಾರವನ್ನಿಟ್ಟುಕೊಂಡು ಸಾಮಾಜಿಕ ಸಂಪರ್ಕ ತಾಣಗಳಲ್ಲಿ ಭಾರೀ ಚರ್ಚೆ ನಡೆಯುತ್ತಿರುವುದು!

ಹಲವರ ತೀವ್ರ ವಿರೋಧದ ನಡುವೆಯೇ ಬಂದ ಗಂಡಾಂತರಗಳನ್ನು ಮೆಟ್ಟಿ ನಿಂತ ಪಾಕಿಸ್ತಾನಿ ಕ್ರಿಕೆಟ್ ಆಟಗಾರ ಶೋಯಿಬ್ ಮಲಿಕ್ ಅವರು ಸಾನಿಯಾ ಮಿರ್ಜಾರನ್ನು ತನ್ನ ಎರಡನೇ ಪತ್ನಿಯಾಗಿ ಸ್ವೀಕರಿಸಿದ್ದರು. ಅದುವರೆಗೆ ಸಾನಿಯಾರನ್ನು ತೀವ್ರವಾಗಿ ಹಚ್ಚಿಕೊಂಡಿದ್ದ ಅಭಿಮಾನಿಗಳು, ಪಾಕಿಸ್ತಾನಿ ಆಟಗಾರನನ್ನು ಮದುವೆ ಮಾಡಿಕೊಂಡಷ್ಟಕ್ಕೆ ಮುನಿಸಿಕೊಂಡು ವರಸೆ ಬದಲಾಯಿಸಿದ್ದರು.

ಸಾನಿಯಾಗೆ 100 ಕೋಟಿ ಭಾರತೀಯರಲ್ಲಿ ಯಾರೊಬ್ಬ ವ್ಯಕ್ತಿಯೂ ಸೂಕ್ತವೆಂದು ಅನ್ನಿಸಲಿಲ್ಲವೇ ಎಂದೆಲ್ಲಾ ಇದಕ್ಕೆ ಇನ್ನಷ್ಟು ಉಪ್ಪು-ಖಾರ ಹಚ್ಚಿದ್ದು ಕೆಲವು ಸಂಘಟನೆಗಳು. ಆ ಬಳಿಕ ಹುಟ್ಟಿಕೊಂಡದ್ದು, Thank you Pakistan for taking Sania Mirza, Now Please take Rakhi Sawant also ಎಂಬ ಹೆಸರಿನ ಫೇಸ್‌ಬುಕ್ ಖಾತೆ.

ಸಾನಿಯಾ ಮತ್ತು ರಾಖಿ ಸಾವಂತ್ ಕುರಿತ ಈ ಖಾತೆಯಲ್ಲಿ ಸುಮಾರು 90ರಷ್ಟು ಪುಟಗಳಲ್ಲಿ ಅಭಿಮಾನಿಗಳು ಸಾವಿರಾರು ಕಾಮೆಂಟ್ ಮಾಡಿದ್ದಾರೆ. ಕೇವಲ ಎರಡೇ ವಾರಗಳಲ್ಲಿ 65,000 ಅಭಿಮಾನಿಗಳನ್ನು ಪಡೆದುಕೊಂಡ ಫೇಸ್‌ಬುಕ್‌ನ ಈ ಖಾತೆ, ಮೂರು ವಾರದಲ್ಲಿ ಲಕ್ಷ ದಾಟಿತ್ತು. ಪ್ರಸಕ್ತ ಇದು ಹೊಂದಿರುವ ಸದಸ್ಯರ ಸಂಖ್ಯೆ 108,685.

ರಾಖಿ ಸಾವಂತ್‌ಳನ್ನೂ ಪಾಕಿಸ್ತಾನ ಕರೆದುಕೊಂಡು ಹೋಗಬೇಕು ಎಂಬ 'ಚಳವಳಿ'ಗೆ ಬೆಂಬಲ ನೀಡುತ್ತಿರುವವರು, ಟೀಕಿಸುತ್ತಿರುವವರು, ಈ ಸಂಬಂಧ ಮಾಹಿತಿ ನೀಡುತ್ತಿರುವವರು, ಭಾವಚಿತ್ರಗಳನ್ನು ರವಾನಿಸುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಇದು ಬೆಳೆಯುತ್ತಲೇ ಇದೆ. ಹಲವು ಮಂದಿ ಸಾನಿಯಾ ಪಾಕ್ ಪ್ರಜೆಯನ್ನು ಮದುವೆಯಾಗಿರುವುದಕ್ಕೆ ಕೆಟ್ಟಾತಿಕೆಟ್ಟ ರೀತಿಯಲ್ಲಿ ಟೀಕಿಸಿದರೆ, ಬೆರಳೆಣಿಕೆಯ ಮಂದಿ ಸಮರ್ಥಿಸಿಕೊಳ್ಳುತ್ತಿರುವುದು ಕಂಡು ಬರುತ್ತಿದೆ.

ಇತ್ತೀಚೆಗಷ್ಟೇ 'ಎನ್‌ಡಿಟಿವಿ ಇಮ್ಯಾಜಿನ್' ಚಾನೆಲ್‌ನಲ್ಲಿ ನಡೆದ 'ರಾಖಿ ಕಾ ಸ್ವಯಂವರ್' ಕಾರ್ಯಕ್ರಮದಲ್ಲಿ ಇಲೇಶ್ ಪರಂಜನ್‌ವಾಲಾರನ್ನು ಮದುವೆ ಗಂಡಾಗಿ ಆಯ್ಕೆ ಮಾಡಿಕೊಂಡಿದ್ದ ರಾಖಿ ಸಾವಂತ್, ನಂತರದ ದಿನಗಳಲ್ಲಿ ಹಲವು ಕಾರಣಗಳನ್ನು ಮುಂದೊಡ್ಡಿ ಮದುವೆ ನಿರಾಕರಿಸಿದ್ದಳು. ಅದಕ್ಕೂ ಮೊದಲು ಮಿಖಾ ಸಿಂಗ್ ಜತೆಗಿನ ಕಿಸ್ಸಿಂಗ್ ಪ್ರಕರಣ ಸೇರಿದಂತೆ ಕೆಟ್ಟ ವಿಚಾರಗಳಲ್ಲೇ ಹೆಚ್ಚು ಸುದ್ದಿ ಮಾಡಿದ ಸಾವಂತ್ ಹಲವು ಸಿನಿಮಾಗಳಲ್ಲಿ ಐಟಂ ಗರ್ಲ್ ಆಗಿ ಕಾಣಿಸಿಕೊಳ್ಳುತ್ತಿದ್ದಾಳೆ.

ಆದರೆ ಇತ್ತ ಮತ್ತೊಂದು ಮಗ್ಗುಲಿಗೆ ಬಂದಾಗ, ನಿಜವಾಗಿ ಪ್ರಾಮುಖ್ಯತೆ ಕೊಡಬೇಕಾಗಿದ್ದ ಮತ್ತೊಂದು ಖಾತೆಯನ್ನು ನೋಡಿ. Throw away Shashi Tharoor and Lalit Modi ಎಂಬ ಹೆಸರಿನ ಈ ಖಾತೆಗೆ ಮೊದಲ ಎರಡು ವಾರಗಳಲ್ಲಿ ಸಿಕ್ಕ ಅಭಿಮಾನಿಗಳು ಕೇವಲ 30. ಅಂದರೆ ನೆಟ್ಟಿಗರು ಸಾರ್ವಜನಿಕ ವಿಚಾರಗಳ ಬಗ್ಗೆ ಎಷ್ಟೊಂದು ನಿರ್ಲಕ್ಷ್ಯ ಹೊಂದಿದ್ದಾರೆ ಎನ್ನುವುದು ಇಲ್ಲಿ ಕಂಡು ಬರುತ್ತಿದೆ.
ಸಂಬಂಧಿತ ಮಾಹಿತಿ ಹುಡುಕಿ