ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಲೈಂಗಿಕ ಹಲ್ಲೆ & ಅತ್ಯಾಚಾರ; ಕೇಂದ್ರಕ್ಕೆ ಸಲಹೆ ಬೇಕಂತೆ! (sexual assault | rape | Criminal Law | Ministry of Home Affairs)
Bookmark and Share Feedback Print
 
ಭಾರತೀಯ ದಂಡ ಸಂಹಿತೆಯಲ್ಲಿರುವ 'ಲೈಂಗಿಕ ಹಲ್ಲೆ' ಎಂಬ ಪದಕ್ಕೆ 'ಅತ್ಯಾಚಾರ' ಎಂಬ ಪದವನ್ನು ಬದಲಿಯಾಗಿ ಬಳಸುವ ಬಗ್ಗೆ ರಾಜ್ಯ ಸರಕಾರಗಳು ಮತ್ತು ಸಾರ್ವಜನಿಕರಿಂದ ಕೇಂದ್ರ ಸರಕಾರವು ಸಲಹೆಗಳನ್ನು ಆಹ್ವಾನಿಸಿದೆ.

ಅಪರಾಧ ಕಾನೂನು ಮಸೂದೆ 2010ರ ತಿದ್ದುಪಡಿ ವಿಧೇಯಕದಲ್ಲಿ 'sexual assault' ಎಂಬ ಪದಗಳ ಬದಲು 'rape' ಎಂಬ ಪದವನ್ನು ಬಳಸುವ ಕುರಿತು ನಿರ್ಧಾರ ಕೈಗೊಳ್ಳಲು ಕೇಂದ್ರ ಗೃಹ ಕಾರ್ಯದರ್ಶಿಯವರ ನೇತೃತ್ವದಲ್ಲಿ ಉನ್ನತಾಧಿಕಾರದ ಸಮಿತಿಯೊಂದನ್ನು ರಚಿಸಲಾಗಿದೆ.

ಮಾಹಿತಿಗಾಗಿ ಈ ಮಸೂದೆಯ ಕರಡು ಪ್ರತಿಯನ್ನು ಗೃಹ ಸಚಿವಾಲಯದ ವೆಬ್‌ಸೈಟಿನಲ್ಲಿ (www.mha.nic.in) ಪ್ರಕಟಿಸಲಾಗಿದೆ. ಸಾರ್ವಜನಿಕರು ತಮ್ಮ ಅಭಿಪ್ರಾಯಗಳನ್ನು 2010ರ ಮೇ 15ರ ಒಳಗೆ ತಿಳಿಸಬಹುದು ಎಂದು ಗೃಹ ಖಾತೆಯ ರಾಜ್ಯ ಸಚಿವ ಮುಲ್ಲಪಳ್ಳಿ ರಾಮಚಂದ್ರನ್ ರಾಜ್ಯಸಭೆಗೆ ಲಿಖಿತವಾಗಿ ತಿಳಿಸಿದ್ದಾರೆ.

ಈ ಸಂಬಂಧ ರಾಜ್ಯ ಸರಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆಡಳಿತಗಳಿಂದಲೂ ಅಭಿಪ್ರಾಯ ಮತ್ತು ಸಲಹೆಗಳನ್ನು ಆಹ್ವಾನಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಲೈಂಗಿಕ ಹಲ್ಲೆಯ ಬದಲು ಅತ್ಯಾಚಾರ ಎಂದೇ ಮಸೂದೆಯಲ್ಲಿ ನಮೂದಿಸಲ್ಪಟ್ಟರೆ, ಮುಂದಿನ ದಿನಗಳಲ್ಲಿ ನಡೆಯುವ ಲೈಂಗಿಕ ಕಿರುಕುಳ ಪ್ರಕರಣಗಳ ತಪ್ಪಿತಸ್ಥರು ಕಠಿಣ ಶಿಕ್ಷೆಯನ್ನು ಪಡೆಯಲಿದ್ದಾರೆ. ಕೇಂದ್ರ ಸರಕಾರದ ಈ ಪ್ರಸ್ತಾವನೆಗೆ ಸಾರ್ವಜನಿಕರು ಮತ್ತು ರಾಜ್ಯ ಸರಕಾರಗಳಿಂದ ಧನಾತ್ಮಕ ಪ್ರತಿಕ್ರಿಯೆ ಸಿಗಬಹುದೆಂದು ನಿರೀಕ್ಷಿಸಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ