ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಯುಪಿಎ ಸರಕಾರ ಮುಸ್ಲಿಂ ವಿರೋಧಿ: ಲಾಲೂ, ಮುಲಾಯಂ (Lok Sabha | Muslim quota | Lalu Prasad | UPA govt)
Bookmark and Share Feedback Print
 
ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವು ಮುಸ್ಲಿಂ ವಿರೋಧಿ ಎಂದು ಟೀಕಾ ಪ್ರಹಾರ ನಡೆಸಿರುವ ರಾಷ್ಟ್ರೀಯ ಜನತಾದಳದ ಲಾಲೂ ಪ್ರಸಾದ್ ಯಾದವ್ ಮತ್ತು ಸಮಾಜವಾದಿ ಪಕ್ಷದ ಮುಲಾಯಂ ಸಿಂಗ್ ಯಾದವ್ ಲೋಕಸಭೆಯಲ್ಲಿ ಗದ್ದಲ ಎಬ್ಬಿಸಿದ್ದು, ಸಭಾತ್ಯಾಗ ನಡೆಸಿದ್ದಾರೆ.

ಮುಸ್ಲಿಮರಿಗೆ ಸರಕಾರಿ ಉದ್ಯೋಗದಲ್ಲಿ ಗರಿಷ್ಠ ಆದ್ಯತೆ ನೀಡಬೇಕು ಎಂದು ಲೋಕಸಭೆಯಲ್ಲಿ ಇಂದು ಪ್ರಶ್ನೋತ್ತರ ವೇಳೆಯಲ್ಲಿ ಪ್ರಸ್ತಾಪಿಸಿದ ಲಾಲೂ, ಸರಕಾರವು ಈ ಸಂಬಂಧ ಕ್ರಮ ಕೈಗೊಳ್ಳುವ ಇರಾದೆ ಹೊಂದಿದೆಯೇ ಎಂದು ಪ್ರಶ್ನಿಸಿದರು.

ಅಲ್ಪಸಂಖ್ಯಾತರ ಅಭಿವೃದ್ಧಿ ಕುರಿತ ಸಾಚಾರ್ ಮತ್ತು ರಂಗನಾಥ್ ಮಿಶ್ರಾ ಆಯೋಗಗಳ ವರದಿಗಳ ಜಾರಿಗೆ ಸರಕಾರ ಬದ್ಧವಾಗಿದೆಯೇ?
ಯುಪಿಎ ಸರಕಾರವು ಮಹಿಳಾ ಮೀಸಲಾತಿಗೆ ಮುಂದಾಗಿರುವಂತೆ, ಮುಸ್ಲಿಮರಿಗೂ ಮೀಸಲಾತಿ ಒದಗಿಸಲು ಸಂವಿಧಾನಕ್ಕೆ ತಿದ್ದುಪಡಿ ತರಲು ಸರಕಾರ ಸಿದ್ಧವೇ ಎನ್ನುವುದು ಲಾಲೂ ಮತ್ತು ಮುಲಾಯಂ ಸಿಂಗ್ ಪ್ರಶ್ನೆಯಾಗಿತ್ತು.

ಲಾಲೂ ಪ್ರಶ್ನೆಗೆ ಉತ್ತರಿಸಲು ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವ ಸಲ್ಮಾನ್ ಖುರ್ಷಿದ್ ಉತ್ತರಿಸಲು ನಿರಾಕರಿಸಿದ್ದಾರೆ. ಅವರು ತನ್ನ ಪ್ರಶ್ನೆಯನ್ನು ಪಟ್ಟಿ ಮಾಡಿರದ ಕಾರಣ ತಾನು ಉತ್ತರಿಸಲು ಸಿದ್ಧನಿಲ್ಲ ಎಂದು ಅವರು ತಿಳಿಸಿದರು.

ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ ಲಾಲೂ, ಈ ಸರಕಾರವು ಮುಸ್ಲಿಂ ವಿರೋಧಿ ಎಂದು ಜರೆದರು. ಅಲ್ಲದೆ ಸಚಿವರು ಸರಿಯಾದ ಉತ್ತರ ನೀಡುವಂತೆ ಬೇಡಿಕೆ ಮುಂದಿಟ್ಟರು.

ಈ ಸಂಬಂಧ ಒಂದು ಮನವಿಯನ್ನು ನೀಡಿದಲ್ಲಿ, ಅದನ್ನು ಸದನದಲ್ಲಿ ಚರ್ಚೆ ನಡೆಸಬಹುದಾಗಿದೆ ಎಂದು ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಸ್ಪೀಕರ್ ಮೀರಾ ಕುಮಾರ್ ತಿಳಿಸಿದರು.

ಅದೇ ಹೊತ್ತಿಗೆ ಮತ್ತೊಂದು ಪ್ರಶ್ನೆಗೆ ಖುರ್ಷೀದ್ ನೀಡಿದ ಉತ್ತರವನ್ನೇ ಲಾಲೂ ಪ್ರಶ್ನಿಸಿದ್ದಾರೆ.

ಎರಡು ಕೋಟಿ ರೂಪಾಯಿಗಳ ಮೊತ್ತದ ಸಂಸದರ ನಿಧಿಯನ್ನು ಹಿಂದುಳಿದ ಮುಸ್ಲಿಂ ಪ್ರಬಲರಾಗಿರುವ ಪ್ರದೇಶದಲ್ಲಿ ಶಾಲೆ ಮತ್ತು ಆಸ್ಪತ್ರೆಯಂತಹ ಮೂಲಭೂತ ವ್ಯವಸ್ಥೆಗಳಿಗಾಗಿನ ಕಟ್ಟಡಗಳನ್ನು ನಿರ್ಮಿಸಲು ಬಳಸಿಕೊಳ್ಳಬೇಕು ಎಂದು ಖುರ್ಷೀದ್ ಹೇಳಿದ್ದರು.

ಸಂಸದರ ನಿಧಿಯನ್ನು ಹೇಗೆ ಬಳಸಬೇಕೆಂದು ಸಂಸದರಿಗೆ ತಿಳಿದಿದೆ. ಈ ವಿಚಾರದಲ್ಲಿ ನಿಮ್ಮ ಸಲಹೆ ನಮಗೆ ಅಗತ್ಯವಿಲ್ಲ ಎಂದು ಲಾಲೂ ಸಚಿವರಿಗೆ ತಿರುಗೇಟು ನೀಡಿದರು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಲಾಲೂ ಪ್ರಸಾದ್ ಯಾದವ್, ಯುಪಿಎ