ಪಾಕಿಸ್ತಾನ ಪರ ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ಮಾಧುರಿ ಗುಪ್ತಾ ನಿಕಟ ಸಂಬಂಧ ಹೊಂದಿದ್ದ ರಜೌರಿ ಜಿಲ್ಲೆಯ ವೈದ್ಯ ದಂಪತಿಯನ್ನು ಭಾರತೀಯ ತನಿಖಾಧಿಕಾರಿಗಳು ತೀವ್ರ ತನಿಖೆಗೊಳಪಡಿಸಿದ್ದಾರೆ. ಡಾ. ಖೇಮ್ ರಾಜ್ ಶರ್ಮಾ ಮತ್ತು ಅವರ ಪತ್ನಿ ಡಾ. ಚಂಪಾ ಶರ್ಮಾ ಅವರು ಗುಪ್ತಾ ಜತೆ ಇಮೇಲ್ ಮತ್ತು ದೂರವಾಣಿ ಮೂಲಕ ನಿರಂತರ ಸಂಪರ್ಕದಲ್ಲಿದ್ದರು.