ವರದಕ್ಷಿಣೆ ಹಿಂಸೆ: ನ್ಯಾಯಕ್ಕಾಗಿ ತಲೆ ಬೋಳಿಸಿಕೊಂಡ ಯುವತಿ!
ರಾಜಕೋಟ್, ಶುಕ್ರವಾರ, 30 ಏಪ್ರಿಲ್ 2010( 09:47 IST )
ಗಂಡಿನ ಮನೆಯವರು ನೀಡುವ ವರದಕ್ಷಿಣ ಕಿರುಕುಳ ತಡೆಯಲಾರದೆ, ರೋಸಿಹೋಗಿ ಹೆಚ್ಚೆಂದರೆ ಪೊಲೀಸರಿಗೆ ದೂರು ನೀಡಬಹುದು, ಇಲ್ಲಾಂದ್ರೆ ಗಲಾಟೆ ಗಂಡನನ್ನು ಬಿಟ್ಟು ಹೋಗುವುದು ಹೀಗೆ...ಆದರೆ ಇಲ್ಲೊಬ್ಬಳು ಅವೆಲ್ಲಕ್ಕಿಂತ ಭಿನ್ನವಾಗಿ ವಿರೋಧ ವ್ಯಕ್ತಪಡಿಸಿ ಮಹಿಳಾ ಆಯೋಗದ ಗಮನ ಸೆಳೆದಿದ್ದಾಳೆ.
ವರದಕ್ಷಿಣೆ ಕಿರುಕುಳ ತಡೆಯಲಾರದೆ ಅದನ್ನು ಬಲವಾಗಿ ವಿರೋಧಿಸಿದ್ದ ರಾಜಕೋಟ್‌ನ ಪೂಜಾ ಚವಾಣ್ ಮೂರು ವರ್ಷಗಳ ಹಿಂದೆ ಅರೆಬೆತ್ತಲೆಯಾಗಿ ರಸ್ತೆಯಲ್ಲಿ ಅಡ್ಡಾಡಿ ಪ್ರತಿಭಟಿಸಿದ್ದಳು!. ಆದರೆ ತನಗೆ ಸರಿಯಾಗಿ ನ್ಯಾಯ ಸಿಗಲಿಲ್ಲ ಎಂದು ಇದೀಗ ತಲೆ ಬೋಳಿಸಿಕೊಂಡು ಸನ್ಯಾಸಿಯಾಗಿದ್ದಾಳಂತೆ!
ಗಂಡ ಪ್ರತಾಪ್ ಸಿನ್ನಾ ಚವಾಣ್ ಮತ್ತು ಅತ್ತೆ ವರದಕ್ಷಿಣೆ ತರುವಂತೆ ಒತ್ತಾಯಿಸಿ ಹಿಂಸೆ ನೀಡುತ್ತಿದ್ದಾರೆಂದು ಪೊಲೀಸರಿಗೆ ಪೂಜಾ ದೂರು ನೀಡಿದ್ದಳು. ಆದರೆ ಪೊಲೀಸರು ಈಕೆಯ ಅರೆಬೆತ್ತಲೆ ಪ್ರತಿಭಟನೆ ನಂತರ ಗಂಡನನ್ನು ಬಂಧಿಸಿ ಬಿಡುಗಡೆಗೊಳಿಸಿದ್ದರು. ಆದರೆ ಪೊಲೀಸರು ಆತನ ಮೇಲೆ ಯಾವುದೇ ಸೂಕ್ತ ಕ್ರಮ ಕೈಗೊಳ್ಳಲಿಲ್ಲವಾಗಿತ್ತು. ಇದರಿಂದ ಮತ್ತಷ್ಟು ರೋಸಿ ಹೋದ ಪೂಜಾ ಈಗ ತಲೆ ಬೋಳಿಸಿಕೊಂಡು ಸನ್ಯಾಸಿಯಾಗಿದ್ದಾಳೆ. ಒಟ್ಟಾರೆ ತಲೆಬೋಳಿಸಿಕೊಂಡ ಸುದ್ದಿ ಎಲ್ಲೆಡೆ ಪ್ರಚಾರ ಪಡೆದ ನಂತರ ಕೊನೆಗೂ ಮಹಿಳಾ ಆಯೋಗ ಪೂಜಾಗೆ ನ್ಯಾಯ ಕೊಡಿಸುವುದಾಗಿ ಮುಂದೆ ಬಂದಿದೆಯಂತೆ!