ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಎಚ್ಚರ...ದೆಹಲಿಯಲ್ಲಿ ಮತ್ತೆ ಉಗ್ರರ ದಾಳಿ ಸಾಧ್ಯತೆ: ಅಮೆರಿಕ (US warns | terror attack | Delhi on alert | Greater Kailash)
ಎಚ್ಚರ...ದೆಹಲಿಯಲ್ಲಿ ಮತ್ತೆ ಉಗ್ರರ ದಾಳಿ ಸಾಧ್ಯತೆ: ಅಮೆರಿಕ
ನವದೆಹಲಿ, ಶನಿವಾರ, 1 ಮೇ 2010( 15:34 IST )
ಜಾಗ್ರತೆ ಎಚ್ಚರ ತಪ್ಪಬೇಡಿ...ಯಾವುದೇ ಸಂದರ್ಭದಲ್ಲಿಯೂ ದೆಹಲಿಯ ಮೇಲೆ ಭಯೋತ್ಪಾದನಾ ದಾಳಿ ನಡೆಯುವ ಸಾಧ್ಯತೆ ಇರುವುದಾಗಿ ಅಮೆರಿಕ ಶನಿವಾರ ಮತ್ತೊಂದು ಹೊಸ ಎಚ್ಚರಿಕೆಯನ್ನು ನೀಡಿದ್ದು, ಅದರಲ್ಲೂ ಮುಖ್ಯವಾಗಿ ನಗರದ ಮಾರ್ಕೆಟ್ ಸ್ಥಳವಾದಂತಹ ಕೋನ್ನಾಟ್, ಗ್ರೇಟರ್ ಕೈಲಾಶ್ ಮತ್ತು ಚಾಂದಿನಿ ಚೌಕ್ ಉಗ್ರರ ದಾಳಿಯ ಪಟ್ಟಿಯಲ್ಲಿರುವುದಾಗಿ ಮುನ್ನೆಚ್ಚರಿಕೆ ನೀಡಿದೆ.
ಈಗಾಗಲೇ ಭಯೋತ್ಪಾದಕರು ಭಾರತದ ಪ್ರಮುಖ ನಗರಗಳ ಮೇಲೆ ಸಂಭಾವ್ಯ ದಾಳಿ ನಡೆಸುವ ಕುರಿತು ಮುನ್ನೆಚ್ಚರಿಕೆ ನೀಡಿತ್ತು. ಇದೀಗ ಮತ್ತೆ ಹೊಸ ಎಚ್ಚರಿಕೆಯ ಸಂದೇಶ ರವಾನಿಸಿದ್ದು, ನವದೆಹಲಿ ಮೇಲೆ ಯಾವುದೇ ಕ್ಷಣದಲ್ಲೂ ಭಯೋತ್ಪಾದಕರು ದಾಳಿ ನಡೆಸುವ ಯೋಜನೆ ರೂಪಿಸಿರುವುದಾಗಿ ಹೇಳಿದೆ.
ಭಯೋತ್ಪಾದಕರು ಮುಖ್ಯವಾಗಿ ಅಮೆರಿಕ ಪ್ರಜೆಗಳು ಅಥವಾ ದೆಹಲಿಗೆ ಭೇಟಿ ನೀಡುವ ವಿದೇಶಿಗರನ್ನು ಮುಖ್ಯವಾಗಿ ಗುರಿಯಾಗಿರಿಸಿಕೊಂಡಿರುವುದಾಗಿ ಅಮೆರಿಕ ಎಚ್ಚರಿಸಿದೆ. ಮುಖ್ಯವಾಗಿ ಜನನಿಬಿಡ ಪ್ರದೇಶವಾದಂತಹ ಚಾಂದಿನಿ ಚೌಕ್, ಕೋನ್ನಾಟ್ ಸ್ಥಳ, ಗ್ರೇಟರ್ ಕೈಲಾಶ್, ಕರೋಲ್ ಬಾಗ್, ಮೆಹ್ರೂಲಿ ಮತ್ತು ಸರೋಜಿನಿ ನಗರಗಳನ್ನು ಭಯೋತ್ಪಾದಕರು ಸಂಘಟನೆಗಳು ಪ್ರಮುಖ ದಾಳಿ ನಡೆಸಲು ಉದ್ದೇಶಿಸಿರುವ ಪ್ರಮುಖ ಸ್ಥಳವಾಗಿದೆ.
ಆ ನಿಟ್ಟಿನಲ್ಲಿ ಈ ಪ್ರದೇಶಗಳಲ್ಲಿ ಅಮೆರಿಕದ ಪ್ರಜೆಗಳು ಇದ್ದಲ್ಲಿ ಜನನಿಬಿಡ ಪ್ರದೇಶಗಳಿಗೆ ಭೇಟಿ ನೀಡಬಾರದು ಎಂದು ಅಮೆರಿಕ ಸಲಹೆ ನೀಡಿದ್ದು, ಅಲ್ಲದೇ ಆ ಪ್ರದೇಶದಿಂದ ಕೂಡಲೇ ತೊರೆಯುವಂತೆ ಸಲಹೆ ನೀಡಿದೆ.
ಭಾರತದ ಮೇಲೆ ಸಂಭಾವ್ಯ ದಾಳಿ ನಡೆಯಲಿದೆ ಎಂಬ ಅಮೆರಿಕದ ಮುನ್ನೆಚ್ಚರಿಕೆಯನ್ನು ಆಸ್ಟ್ರೇಲಿಯಾ ಕೂಡ ಶನಿವಾರ ಖಚಿತಪಡಿಸಿದೆ. ಹಾಗಾಗಿ ದೆಹಲಿಯ ಪ್ರಮುಖ ಸ್ಥಳಗಳಲ್ಲಿ ಬಿಗಿ ಭದ್ರತೆ ಕೈಗೊಳ್ಳುವಂತೆ ಗೃಹ ಸಚಿವಾಲಯ ದೆಹಲಿ ಪೊಲೀಸ್ ಇಲಾಖೆಗೆ ಸೂಚಿಸಿದೆ. ಭಯೋತ್ಪಾದಕರ ದಾಳಿಯ ಮುನ್ನೆಚ್ಚರಿಕೆ ಅಂಗವಾಗಿ ಮಾಲ್ಸ್ ಮತ್ತು ಪ್ರಮುಖ ಮಾರ್ಕೆಟ್ ಪ್ರದೇಶಗಳಲ್ಲಿ ವಿಶೇಷ ಎಚ್ಚರಿಕೆಯನ್ನೂ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.