ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 2ಜಿ ಸ್ಪೆಕ್ಟ್ರಮ್ ಹಗರಣ: ರಾಜಾ ತಲೆದಂಡ ಸಾಧ್ಯತೆ? (Raja | 2g spectrum | Congress | DMK | UPA | Karunanidhi)
Bookmark and Share Feedback Print
 
ರಾಷ್ಟ್ರರಾಜಕಾರಣದಲ್ಲಿ ಹಗರಣ, ಆರೋಪ-ಪ್ರತ್ಯಾರೋಪ ತಲೆದಂಡ ಒಪ್ಪಿಸುವ ರಾಜಕಾರಣಿಗಳ ಸಾಲು ಮುಂದುವರಿದಿದ್ದು, ಇದೀಗ 2ಜಿ ಸ್ಪೆಕ್ಟ್ರಮ್ ಪ್ರಕರಣದಲ್ಲಿ ಕೇಂದ್ರದ ಐಟಿ ಸಚಿವ ಎ.ರಾಜಾ ತಲೆದಂಡವಾಗುವ ಸಾಧ್ಯತೆ ದಟ್ಟವಾಗಿದೆ.

ಐಪಿಎಲ್ ಹಗರಣದ ಆರೋಪದ ಮೇಲೆ ಈಗಾಗಲೇ ವಿದೇಶಾಂಗ ಖಾತೆ ರಾಜ್ಯ ಸಚಿವ ಶಶಿ ತರೂರ್ ಸಚಿವ ಸ್ಥಾನ ಕಳೆದುಕೊಂಡಿದ್ದಾರೆ. ಈಗ 2ಜಿ ಸ್ಪೆಕ್ಟ್ರಮ್‌ನಲ್ಲಿ ನಡೆದಿದೆ ಎನ್ನಲಾದ ಹಗರಣದಲ್ಲಿ ರಾಜ ತಮ್ಮ ಸ್ಥಾನ ಕಳೆದುಕೊಳ್ಳುವ ಇಕ್ಕಟ್ಟಿಗೆ ಸಿಲುಕಿರುವುದಾಗಿ ಮೂಲವೊಂದು ತಿಳಿಸಿದೆ.

ಈ ಹಗರಣದ ವಾಸನೆ ಹಿಡಿದ ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ ಅವರು ಸೋನಿಯಾಗಾಂಧಿ ಅವರನ್ನು ಭೇಟಿ ಮಾಡಲು ಭಾನುವಾರ ದೆಹಲಿಗೆ ತೆರಳಲಿದ್ದಾರೆ. ತಲೆದಂಡ ಒಪ್ಪಿಸಬೇಕಾದ ಸಚಿವ ಎ.ರಾಜಾ ಅವರನ್ನು ಡಿಎಂಕೆ ಪಕ್ಷ ರಕ್ಷಿಸುವುದೇ ಎಂಬುದನ್ನು ಕಾದು ನೋಡಬೇಕಾಗಿದೆ.

ಈಗ ರಾಜ ಅವರ ಮೇಲೆ 2 ಜಿ ಸ್ಪೆಕ್ಟ್ರಮ್ ಹಗರಣ ಮತ್ತು ತಮ್ಮ ಪರವಾಗಿ ಅನುಕೂಲವಾಗುವಂತೆ ಆದೇಶ ನೀಡಬೇಕಾಗಿ ಮದ್ರಾಸ್ ಹೈಕೋರ್ಟ್‌ನ ನ್ಯಾಯಾಧೀಶರಿಗೆ ದೂರವಾಣಿ ಮೂಲಕ ಕೋರಿಕೆ ಸಲ್ಲಿಸಿದ್ದ ಎರಡು ಪ್ರಮುಖ ಆರೋಪಗಳಿವೆ.
ಸಂಬಂಧಿತ ಮಾಹಿತಿ ಹುಡುಕಿ