ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ದಲಿತ ವಿರೋಧಿ ಹೇಳಿಕೆ; ಮೋದಿ ವಿರುದ್ಧ ಕಾಂಗ್ರೆಸ್ ಪ್ರಹಾರ (Narendra Modi | Anti Dalit remark | Congress | BJP)
Bookmark and Share Feedback Print
 
ಇತ್ತೀಚೆಗಷ್ಟೇ ಕಾರ್ಯಕ್ರಮವೊಂದರಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಮತ್ತು ದಲಿತರಿಗೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿರುವ ಕಾಂಗ್ರೆಸ್, ಬಿಜೆಪಿ ನಾಯಕನ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.

ಏಪ್ರಿಲ್ 26ರಂದು ನಡೆದಿದ್ದ 'ಸಾಮಾಜಿಕ್ ಸಾಮ್ರಾಸ್ಟಾ' ಎಂಬ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮೋದಿಯವರು ದಲಿತರನ್ನು ಮಾನಸಿಕ ಅಸ್ವಸ್ಥರಿಗೆ ಹೋಲಿಸಿದ್ದಾರೆಂದು ಕಾಂಗ್ರೆಸ್ ಆರೋಪಿಸಿದೆ.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ 'ವೆಬ್‌ದುನಿಯಾ'ವನ್ನು ಫಾಲೋ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಈ ಸಭೆಯಲ್ಲಿ ಮಾತನಾಡುತ್ತಿದ್ದ ಮುಖ್ಯಮಂತ್ರಿ ಮೋದಿ, 'ಮಾನಸಿಕವಾಗಿ ದುರ್ಬಲವಾಗಿರುವ ಮಕ್ಕಳ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಜನ ನೀಡುವ ವಿಶೇಷ ಉಪಚಾರವನ್ನು ದಲಿತರಿಗೂ ನೀಡಬೇಕು. ಅವರಂತೆ ದಲಿತರಿಗೂ ವಿಶೇಷ ಉಪಚಾರ ಮಾಡಬೇಕು' ಎಂದಿದ್ದರು.

ಅಲ್ಲದೆ ಜನ ತಮ್ಮ ಅಸ್ಪಶ್ಯತೆ ಎಂಬ ಮನೋಭಾವವನ್ನು ಕೂಡ ಬದಲಾವಣೆ ಮಾಡಿಕೊಳ್ಳಬೇಕು. ಸಾಕಷ್ಟು ಧರ್ಮಗುರುಗಳು ಅಸ್ಪ್ರಶ್ಯತೆಯನ್ನು ತೊಡೆದು ಹಾಕಲು ನಡೆಸಿದ ಪ್ರಯತ್ನಗಳ ಹೊರತಾಗಿಯೂ ದೇಶದಲ್ಲಿ ಆಸ್ಪ್ರಶ್ಯತೆ ಇನ್ನೂ ಉಳಿದುಕೊಂಡಿದೆ. ಇದನ್ನು ಇಲ್ಲವಾಗಿಸಬೇಕು ಎಂದು ಕರೆ ನೀಡಿದ್ದರು.

ಇದನ್ನು ಕಾಂಗ್ರೆಸ್‌ನ ರಾಜ್ಯಸಭಾ ಸದಸ್ಯ ಪ್ರವೀಣ್ ರಾಷ್ಟ್ರಪಾಲ್ ಅವರು ರಾಜ್ಯಸಭೆಯಲ್ಲಿ ಶುಕ್ರವಾರ ಪ್ರಸ್ತಾಪಿಸಲು ಮುಂದಾಗಿದ್ದರು. ಆದರೆ ಸಭಾಧ್ಯಕ್ಷರು ಇದಕ್ಕೆ ಅವಕಾಶ ನೀಡದೆ ಇದ್ದುದರಿಂದ ಎರಡೆರಡು ಬಾರಿ ಕಲಾಪ ಮುಂದಕ್ಕೆ ಹೋಗಿತ್ತು.

ನಂತರ ಸಂಸತ್ ಹೊರಗಡೆ ಮಾತನಾಡಿದ ರಾಷ್ಟ್ರಪಾಲ್, 'ದಲಿತರೆಡೆಗೆ ಮೋದಿ ಹೊಂದಿರುವ ದೃಷ್ಟಿಕೋನ ಈಗ ಬಯಲಾಗಿದೆ. ದಲಿತರ ಮತಕ್ಕಾಗಿ ಮಾತ್ರ ಅವರು ಅಂಬೇಡ್ಕರ್ ಪ್ರತಿಮೆಗೆ ಹೂಹಾರ ಹಾಕುತ್ತಾರೆ ಹೊರತು ಆ ಸಮುದಾಯದವರತ್ತ ಕಿಂಚಿತ್ತೂ ಗೌರವದಿಂದಲ್ಲ. ಅವರು ಭಾರತದ ಸಂವಿಧಾನ ಮತ್ತು ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದ್ದಾರೆ' ಎಂದು ಆರೋಪಿಸಿದ್ದಾರೆ.

ಮೋದಿ ಎಂದರೆ ಏನೆಂದು ಇಡೀ ಜಗತ್ತಿಗೇ ಗೊತ್ತು. ಅಂಬೇಡ್ಕರ್ ಕ್ರಾಂತಿಕಾರಿಯಲ್ಲ ಎಂದು ಅವರು ಪುಸ್ತಕ ಬಿಡುಗಡೆ ಸಮಾರಂಭವೊಂದರಲ್ಲಿ, ಎಂದು ಹೇಳಿದ್ದರು. ಅಲ್ಲದೆ ದಲಿತರನ್ನು ಮಾನಸಿಕ ಸ್ಥಿಮಿತವಿಲ್ಲದ ಮಕ್ಕಳಿಗೆ ಹೋಲಿಸಿದ್ದಾರೆ ಎಂದರು.
ಸಂಬಂಧಿತ ಮಾಹಿತಿ ಹುಡುಕಿ