ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ದೆಹಲಿ ಭಯೋತ್ಪಾದನಾ ದಾಳಿ ಸಂಚು; ಲಷ್ಕರ್ ಸಹಚರ ಸೆರೆ (Delhi terror threat | Lashkar-e-Toiba | Pakistan | Umar Zargar)
Bookmark and Share Feedback Print
 
ಲಷ್ಕರ್ ಇ ತೋಯ್ಬಾ ಭಯೋತ್ಪಾದಕ ಸಂಘಟನೆ ಜತೆ ಸಂಬಂಧ ಹೊಂದಿರುವ ಬಂಧಿತ ಶ್ರೀನಗರದ ವ್ಯಕ್ತಿ, ದೆಹಲಿಯ ಪ್ರಮುಖ ಪ್ರದೇಶಗಳಲ್ಲಿ ದಾಳಿ ನಡೆಸಲು ಸಂಚು ರೂಪಿಸಿರುವುದನ್ನು ಒಪ್ಪಿಕೊಂಡಿದ್ದಾನೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ಶ್ರೀನಗರ ಹಳೆನಗರದ ಪ್ರದೇಶಗಳಲ್ಲಿ ಕಲ್ಲು ತೂರಾಟಗಾರರ ಪೋಷಕನಾಗಿರುವ ಮಹರಾಜ್ ಗಂಜ್ ಪ್ರದೇಶದ ಉಮರ್ ಜರ್ಗರ್ ಎಂಬಾತನನ್ನು ನಾವು ಶನಿವಾರ ಬಂಧಿಸಿದ್ದೇವೆ. ಆತ ಲಷ್ಕರ್ ಇ ತೋಯ್ಬಾ ಭಯೋತ್ಪಾದನಾ ಸಂಘಟನೆಯ ಕಾರ್ಯಕರ್ತ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ದೆಹಲಿಯಲ್ಲಿ ದಾಳಿಗಳನ್ನು ನಡೆಸಲು ಲಷ್ಕರ್ ಇ ತೋಯ್ಬಾ ಗುರುತಿಸಿದ್ದ ಪ್ರದೇಶಗಳಿಗೆ ಸ್ಫೋಟಕಗಳು ಮತ್ತು ಶಸ್ತ್ರಾಸ್ತ್ರಗಳನ್ನು ಸಾಗಿಸಲು ಉಮರ್ ನಿಗದಿಯಾಗಿದ್ದ. ಆದರೆ ನಾವು ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಅವರು ವಿವರಣೆ ನೀಡಿದ್ದಾರೆ.

ಉಮರ್ ಸ್ಫೋಟಕಗಳನ್ನು ಏಪ್ರಿಲ್ 27ರಂದು ದೆಹಲಿಗೆ ತರಬೇಕಿತ್ತು. ಆದರೆ ಆತನನ್ನು ಕಳೆದ ವಾರವೇ ಜಮ್ಮು-ಕಾಶ್ಮೀರ ಪೊಲೀಸರು ಬಂಧಿಸಿದ್ದರು.

ಬಂಧಿತ ಉಮರ್ ಲಷ್ಕರ್ ಇ ತೋಯ್ಬಾದ ಪಾಕಿಸ್ತಾನದ ನಾಯಕರುಗಳ ಜತೆ ಇಮೇಲ್ ಸಂಪರ್ಕಗಳನ್ನು ಹೊಂದಿದ್ದ. ಆತ ಶ್ರೀನಗರದಲ್ಲಿನ ಕಲ್ಲೆಸೆತ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಬಂಧಿತನಾಗಿದ್ದ. ವಿಚಾರಣೆ ಸಂದರ್ಭದಲ್ಲಿ ಈತನಿಗೆ ಭಯೋತ್ಪಾದಕ ಸಂಘಟನೆಗಳ ಜತೆ ಸಂಬಂಧವಿರುವುದು ಬೆಳಕಿಗೆ ಬಂದಿತ್ತು. ದೆಹಲಿಯಲ್ಲೂ ಕೆಲವು ಲಷ್ಕರ್ ಭಯೋತ್ಪಾದಕರಿದ್ದು, ಅವರ ಜತೆ ಈತ ಸಂಪರ್ಕದಲ್ಲಿದ್ದ. ಅವರು ಯಾರು ಎಂಬುದನ್ನು ಈಗ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಉಮರ್ ಮನೆ ಮೇಲೆ ದಾಳಿ ನಡೆಸಿರುವ ಪೊಲೀಸರು ಕೆಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಆತನಲ್ಲಿದ್ದ ಸ್ಯಾಟಲೈಟ್ ಫೋನನ್ನು ಕೂಡ ವಶಕ್ಕೆ ತೆಗೆದುಕೊಳ್ಳಲಾಗಿದೆ.

ದೆಹಲಿಯ ಮಾರುಕಟ್ಟೆ ಪ್ರದೇಶಗಳಲ್ಲಿ ಭಯೋತ್ಪಾದನಾ ದಾಳಿಗಳು ನಡೆಯುವ ಸಾಧ್ಯತೆಗಳಿರುವುದರಿಂದ ಆ ಪ್ರದೇಶಗಳಲ್ಲಿ ತನ್ನ ದೇಶದ ಪ್ರಜೆಗಳು ಸುತ್ತಾಡುವುದನ್ನು ತಪ್ಪಿಸಬೇಕು ಎಂದು ಅಮೆರಿಕಾ, ಬ್ರಿಟನ್, ಆಸ್ಟ್ರೇಲಿಯಾ ಮತ್ತು ಕೆನಡಾ ದೇಶಗಳು ಕಟ್ಟೆಚ್ಚರ ರವಾನಿಸಿದ್ದವು. ಇದಕ್ಕೂ ಮೊದಲು ದೇಶದ ಗುಪ್ತಚರ ವಿಭಾಗಗಳು ಉಗ್ರರ ದಾಳಿ ಸಾಧ್ಯತೆಯ ಕುರಿತು ಎಚ್ಚರಿಕೆ ನೀಡಿದ್ದವು.
ಸಂಬಂಧಿತ ಮಾಹಿತಿ ಹುಡುಕಿ