ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 'ಬುರ್ಖಾ ನಿಷೇಧ ವಿರುದ್ಧ ಇಸ್ಲಾಂ ರಾಷ್ಟ್ರಗಳು ಧ್ವನಿಯೆತ್ತಬೇಕು' (veil ban | Islamic nations | Darul Uloom Deoband | Burkha)
Bookmark and Share Feedback Print
 
ಯೂರೋಪ್ ರಾಷ್ಟ್ರಗಳು ಬುರ್ಖಾ ಮೇಲೆ ಹೇರಿರುವ ನಿಷೇಧವನ್ನು ಇಸ್ಲಾಮಿಕ್ ರಾಷ್ಟ್ರಗಳು ತೀವ್ರವಾಗಿ ವಿರೋಧಿಸುವ ಮೂಲಕ ತೆರವುಗೊಳಿಸಲು ಸಹಕರಿಸಬೇಕು ಎಂದು ಅಂತಾರಾಷ್ಟ್ರೀಯ ಸಮುದಾಯವನ್ನು ಉತ್ತರ ಪ್ರದೇಶದ ಮುಸ್ಲಿಂ ಧರ್ಮಗುರುಗಳು ಒತ್ತಾಯಿಸಿದ್ದಾರೆ.

ಮುಸ್ಲಿಂ ಮಹಿಳೆಯರು ಬುರ್ಖಾ ಧರಿಸುವುದು ನಮ್ಮ ಧರ್ಮದ ಅವಿಭಾಜ್ಯ ಅಂಗ. ಇದೀಗ ಹೇರಲಾಗಿರುವ ನಿಷೇಧ ನಮ್ಮ ಧಾರ್ಮಿಕ ಸ್ವಾತಂತ್ರ್ಯವನ್ನು ಕಸಿದುಕೊಂಡಂತೆ. ಆದರೆ ಇದನ್ನು ಇಸ್ಲಾಮಿಕ್ ರಾಷ್ಟ್ರಗಳು ವಿರೋಧಿಸದೇ ಇರುವುದು ದುರದೃಷ್ಟಕರ ಎಂದು ದಾರುಲ್ ಉಲೂಂ ದಿಯೋಬಂದ್ ಡೆಪ್ಯೂಟಿ ವೈಸ್ ಚಾನ್ಸೆಲರ್ ಮೌಲಾನಾ ಅಬ್ದುಲ್ ಖಾಲಿಕ್ ಮದ್ರಾಸಿ ಹೇಳಿದ್ದಾರೆ.

ಯೂರೋಪಿಯನ್ ರಾಷ್ಟ್ರಗಳ ಬುರ್ಖಾ ನಿಷೇಧ ನಿರ್ಧಾರವನ್ನು ಇಸ್ಲಾಮಿಕ್ ರಾಷ್ಟ್ರಗಳು ತೀವ್ರವಾಗಿ ವಿರೋಧಿಸಬೇಕು ಮತ್ತು ಒತ್ತಡ ಹಾಕಬೇಕು ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.

ಆ ರಾಷ್ಟ್ರಗಳ ಕ್ರಮವು ಪ್ರಜಾಪ್ರಭುತ್ವ ವಿರೋಧಿ ಮತ್ತು ಜಾತ್ಯತೀತತೆಯ ವಿರುದ್ಧವಾಗಿದೆ. ಈ ದೇಶಗಳಲ್ಲಿ ಧಾರ್ಮಿಕ ಮುಸ್ಲಿಮರ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲು ಕೆಲವು ಇಸ್ಲಾಂ ವಿರೋಧಿಗಳು ಯತ್ನಿಸುತ್ತಿದ್ದಾರೆ ಎಂದು ಮದ್ರಾಸಿ ಇದೇ ಸಂದರ್ಭದಲ್ಲಿ ಆರೋಪಿಸಿದರು.

ದಿಯೋಬಂದ್ ಅಭಿಪ್ರಾಯವನ್ನು ಉತ್ತರ ಪ್ರದೇಶದ ಇಮಾಮ್ ಸಂಘಟನೆ ಕೂಡ ಬೆಂಬಲಿಸಿದೆ.

ಬುರ್ಖಾ ಮೇಲೆ ನಿಷೇಧ ಹೇರುವ ಮೂಲಕ ಕೆಲವು ಯೂರೋಪಿಯನ್ ದೇಶಗಳು ಧಾರ್ಮಿಕ ಹಕ್ಕುಗಳನ್ನು ಕಸಿದುಕೊಳ್ಳಲು ಯತ್ನಿಸುತ್ತಿವೆ ಎಂದು ಯುಪಿ ಸಂಘಟನೆಯ ಅಧ್ಯಕ್ಷರಾಗಿರುವ ಮುಫ್ತಿ ಝುಲ್ಫೀಕರ್ ಆಲಿ ಹೇಳಿದ್ದಾರೆ.

ಇದು ನಮ್ಮ ಧಾರ್ಮಿಕ ಸ್ವಾತಂತ್ರ್ಯಕ್ಕೆ ವಿರುದ್ಧವಾಗಿದ್ದು, ದಿಯೋಬಂದ್ ದೃಷ್ಟಿಕೋನವನ್ನು ನಾವು ಸಂಪೂರ್ಣವಾಗಿ ಬೆಂಬಲಿಸುತ್ತಿದ್ದೇವೆ ಎಂದು ಆಲಿ ತಿಳಿಸಿದ್ದಾರೆ.

ಫ್ರಾನ್ಸ್, ಡೆನ್ಮಾರ್ಕ್ ಮತ್ತು ಬೆಲ್ಜಿಯಂ ಸೇರಿದಂತೆ ಹಲವು ರಾಷ್ಟ್ರಗಳು ಸಾರ್ವಜನಿಕ ಸ್ಥಳಗಳಲ್ಲಿ ಬುರ್ಖಾ ಧರಿಸುವುದನ್ನು ವಿರೋಧಿಸುವ ನೂತನ ಕಾನೂನುಗಳನ್ನು ಜಾರಿಗೊಳಿಸುವ ಮೂಲಕ ಬುರ್ಖಾ ಮೇಲೆ ನಿಷೇಧ ಹೇರಿದ್ದವು.
ಸಂಬಂಧಿತ ಮಾಹಿತಿ ಹುಡುಕಿ