ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮತಾಂತರಿ ಮಕ್ಕಳಿಗೆ ಡಬ್ಬಲ್ ಪ್ರೈಜ್; ಇದು ಕರುಣಾ ಸ್ಟೈಲ್ (converted Christians | Tamil Nadu | M Karunanidhi | India)
Bookmark and Share Feedback Print
 
ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಮಕ್ಕಳು ಮತ್ತು ಪರಿಶಿಷ್ಟ ಜಾತಿಗಳಿಂದ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿರುವ ಮಕ್ಕಳಿಗೆ 10 ಮತ್ತು 12ನೇ ತರಗತಿಗಳಲ್ಲಿ ಗರಿಷ್ಠ ಅಂಕಗಳನ್ನು ಪಡೆದಿರುವುದಕ್ಕೆ ನೀಡಲಾಗುವ ನಗದು ಬಹುಮಾನ ಮೊತ್ತವನ್ನು ಡಿಎಂಕೆ ಮುಖ್ಯಸ್ಥ ಎಂ. ಕರುಣಾನಿಧಿ ನೇತೃತ್ವದ ತಮಿಳುನಾಡು ಸರಕಾರ ಹೆಚ್ಚಳ ಮಾಡಿದೆ.

10ನೇ ತರಗತಿಯಲ್ಲಿ ಮೊದಲ ರ‌್ಯಾಂಕ್ ಪಡೆದ ವಿದ್ಯಾರ್ಥಿಗೆ 25,000 ರೂಪಾಯಿ, ಎರಡನೇ ರ‌್ಯಾಂಕ್ ಪಡೆದವರಿಗೆ 20,000 ರೂಪಾಯಿ ಹಾಗೂ ಮೂರನೇ ರ‌್ಯಾಂಕ್ ಪಡೆದವರಿಗೆ 15,000 ರೂಪಾಯಿ; 12ನೇ ತರಗತಿಯಲ್ಲಿ ಅಗ್ರ ಸ್ಥಾನ ಪಡೆಯುವವರಿಗೆ 50,000 ರೂಪಾಯಿ, ಎರಡನೇ ರ‌್ಯಾಂಕ್‌ನವರಿಗೆ 30,000 ಹಾಗೂ ಮೂರನೇ ಸ್ಥಾನಿಗೆ 20,000 ರೂಪಾಯಿ ನಗದು ಬಹುಮಾನವನ್ನು ನೀಡಲಾಗುತ್ತದೆ ಎಂದು ಸರಕಾರ ಪ್ರಕಟಿಸಿದೆ.

ಈ ಹಿಂದೆ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಮಕ್ಕಳು ಮತ್ತು ಪರಿಶಿಷ್ಟ ಜಾತಿಗಳಿಂದ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿರುವ ಮಕ್ಕಳು ಗರಿಷ್ಠ ಅಂಕಗಳನ್ನು ಪಡೆದ ಸಾಧನೆ ಮಾಡಿದಲ್ಲಿ ಅವರಿಗೆ 10ನೇ ತರಗತಿಯಲ್ಲಿ 10,000 ಹಾಗೂ 12ನೇ ತರಗತಿಯಲ್ಲಿ 25,000 ರೂಪಾಯಿ ನಗದು ಬಹುಮಾನಗಳನ್ನು ನೀಡಲಾಗುತ್ತಿತ್ತು.

ಇತ್ತೀಚೆಗಷ್ಟೇ ಇದನ್ನು ಆದಿ ದ್ರಾವಿಡ ಕಲ್ಯಾಣ ಸಚಿವೆ ಎ. ತಮಿಳರಸಿ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.

ಹಿಂದೂ ಧರ್ಮದಿಂದ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳುವವರಿಗೆ ಮೊದಲಿನಿಂದಲೂ ಸರಕಾರ ಪ್ರೋತ್ಸಾಹ ನೀಡುತ್ತಾ ಬಂದಿದ್ದು, ಇದು ಖಂಡನೀಯ ಎಂದು ಇಲ್ಲಿನ ಹಿಂದೂ ಸಂಘಟನೆಗಳು ಪ್ರತಿಕ್ರಿಯಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ