ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಜೂನ್‌ನಲ್ಲಿ ಶಶಿ ತರೂರ್-ಸುನಂದಾ ವಿವಾಹ ನಿಶ್ಚಿತಾರ್ಥ? (Shashi Tharoor | Sunanda Pushkar | Golden Palms Resort | Engagement)
Bookmark and Share Feedback Print
 
ವಿದೇಶಾಂಗ ಖಾತೆಯ ರಾಜ್ಯ ಸಚಿವ ಸ್ಥಾನಕ್ಕಿಂತ ಇಂಡಿಯನ್ ಪ್ರೀಮಿಯರ್ ಲೀಗ್ ಅವ್ಯವಹಾರದಲ್ಲೇ ಹೆಚ್ಚು ಸುದ್ದಿ ಮಾಡಿದ ಕೇರಳಿಗ ಶಶಿ ತರೂರ್ ಮತ್ತು ಅವರ ಪ್ರೇಯಸಿ ಎಂದು ಹೇಳಲಾಗುತ್ತಿರುವ ಸುನಂದಾ ಪುಷ್ಕರ್ ಜೂನ್ 27ರಂದು ಬೆಂಗಳೂರಿನಲ್ಲಿ ವಿವಾಹ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎಂದು ವರದಿಯೊಂದು ಹೇಳಿದೆ.

ಮೂಲಗಳ ಪ್ರಕಾರ ಬೆಂಗಳೂರಿನಲ್ಲಿರುವ ಸಂಜಯ್ ಖಾನ್ (ಹೃತಿಕ್ ರೋಷನ್ ಮಾವ) ಅವರ 'ಗೋಲ್ಡನ್ ಪಾಮ್ಸ್ ರೆಸಾರ್ಟ್ & ಸ್ಪಾ' ಐಷಾರಾಮಿ ಹೊಟೇಲ್‌ನಲ್ಲಿ ನಿಶ್ಚಿತಾರ್ಥ ನಡೆಯಲಿದೆ.
PTI

ತನ್ನ ನಿಶ್ಚಿತಾರ್ಥದ ಬಗ್ಗೆ ಮುಂಬೈ ಮತ್ತು ದುಬೈಗಳಲ್ಲಿನ ತಮ್ಮ ಆಪ್ತರ ಜತೆ ಸುನಂದಾ ಮಾತುಕತೆ ನಡೆಸುತ್ತಿದ್ದಾರೆ. ತೀರಾ ಸಂಭ್ರಮದಲ್ಲಿರುವ ಸುನಂದಾ ತನ್ನ ಶುಭಸುದ್ದಿಯನ್ನು ಗೆಳೆಯರು ಮತ್ತು ಕುಟುಂಬದೊಂದಿಗೆ ಹಂಚಿಕೊಳ್ಳಲು ಬಯಸುತ್ತಿದ್ದಾರೆ ಎಂದು ವರದಿಗಳು ಹೇಳಿವೆ.

ಸಂಜಯ್ ಖಾನ್ ಕಾಂಗ್ರೆಸ್ ವಲಯದಲ್ಲಿ ಮೊದಲಿನಿಂದಲೂ ಗುರುತಿಸಿಕೊಂಡಿದ್ದು, ಇತ್ತೀಚೆಗಷ್ಟೇ ಪಾರ್ಟಿಯೊಂದರಲ್ಲಿ ತರೂರ್ ಅವರನ್ನು ಭೇಟಿಯಾಗಿದ್ದರು. ಬಳಿಕ ಆಪ್ತರಾಗಿದ್ದು, ಸಂಜಯ್ ಪತ್ನಿ ಜರೀನ್ ಅವರು ಶಶಿ ಮತ್ತು ಸುನಂದಾ ಅವರನ್ನು ತಮ್ಮ ಹೊಟೇಲಿನಲ್ಲಿ ಬಂದು ತಂಗುವಂತೆ ಆಹ್ವಾನಿಸಿದ್ದರು.

ಮೂಲಗಳ ಪ್ರಕಾರ ಖಾನ್ ದಂಪತಿಯ ಆಹ್ವಾನದಂತೆ ತರೂರ್ ಜೋಡಿ ಏಪ್ರಿಲ್ ಮೊದಲ ವಾರದಲ್ಲಿ ಗೋಲ್ಡನ್ ಪಾಮ್ಸ್‌ನಲ್ಲಿ ಉಳಿದುಕೊಂಡಿದ್ದರು. ಈ ಸಂದರ್ಭದಲ್ಲಿ ರೆಸಾರ್ಟ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಜೋಡಿ, ತಮ್ಮ ನಿಶ್ಚಿತಾರ್ಥವನ್ನು ಅಲ್ಲೇ ನಡೆಸುವ ನಿರ್ಧಾರಕ್ಕೆ ಬಂದಿದ್ದಾರೆ.

ಜೂನ್‌ನಲ್ಲಿ ನಿಶ್ಚಿತಾರ್ಥ ನಡೆದರೆ, ಆರು ತಿಂಗಳೊಳಗೆ ಮದುವೆ ನಡೆಯಲಿದೆ. ಅಂದ ಹಾಗೆ ಶಶಿ ತರೂರ್ ಮತ್ತು ಸುನಂದಾ ಪುಷ್ಕರ್ ಇಬ್ಬರಿಗೂ ಇದು ಮೂರನೇ ಮದುವೆ. ಉಭಯತ್ರಯರೂ ಈ ಹಿಂದೆ ಎರಡೆರಡು ಮದುವೆಯಾಗಿ ಸಂಗಾತಿಯನ್ನು ಬಿಟ್ಟಿದ್ದಾರೆ.

ಕೇರಳ, ಕ್ರಿಕೆಟ್ ಅಥವಾ ರೆಂಡೆಜ್ವಾಸ್ ಸ್ಪೋರ್ಟ್ಸ್ ಕ್ಲಬ್ ಅಥವಾ ಐಪಿಎಲ್ ಕೊಚ್ಚಿ ತಂಡದ ಜತೆ ಯಾವುದೇ ರೀತಿಯ ಸಂಬಂಧ ಹೊಂದಿಲ್ಲದ ಕಾಶ್ಮೀರ ಮೂಲದ ದುಬೈ ನಿವಾಸಿ ಸುನಂದಾ ಪುಷ್ಕರ್ ಅವರಿಗೆ ಕೊಚ್ಚಿ ತಂಡದ ಸ್ವೀಟ್ ಈಕ್ವಿಟಿಯನ್ನು ನೀಡಲಾಗಿತ್ತು. ಅದು ಸುಮಾರು 70 ಕೋಟಿ ರೂಪಾಯಿ ಮೊತ್ತದ್ದು. ಇದಕ್ಕೆ ಕಾರಣ ಅವರ ಆಪ್ತ ಗೆಳೆಯ ಶಶಿ ತರೂರ್ ಎಂದು ಆರೋಪಿಸಲಾಗಿತ್ತು. ಆರೋಪಗಳ ಹಿನ್ನೆಲೆಯಲ್ಲಿ ತರೂರ್ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಸಂಬಂಧಿತ ಮಾಹಿತಿ ಹುಡುಕಿ