ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅಜ್ಮೀರ್ ಸ್ಫೋಟದಲ್ಲಿ ಕೈವಾಡವಿಲ್ಲ, ಇದು ಪಿತೂರಿ: ಆರೆಸ್ಸೆಸ್ (RSS | Ajmer blast | India | BJP)
Bookmark and Share Feedback Print
 
ಅಜ್ಮೀರ್ ಸ್ಫೋಟಕ್ಕೂ ತನಗೂ ಯಾವುದೇ ಸಂಬಂಧವಿಲ್ಲ, ಇದರ ಹಿಂದೆ ರಾಜಕೀಯ ಪಿತೂರಿಗಳು ನಡೆದಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ ಸ್ಪಷ್ಟಪಡಿಸಿದೆ. ಅದೇ ಹೊತ್ತಿಗೆ ಆರೋಪಿಯೊಬ್ಬನ ಜತೆಗಿನ ಎಲ್ಲಾ ಸಂಬಂಧಗಳನ್ನು ತಾನು ಕಡಿದುಕೊಂಡಿರುವುದಾಗಿ ಯಾರನ್ನೂ ಹೆಸರಿಸದೆ ಸಂಘಟನೆ ತಿಳಿಸಿದೆ.

ಆರೆಸ್ಸೆಸ್ ಪ್ರಧಾನ ಕಾರ್ಯದರ್ಶಿ ಸುರೇಶ್ ಸೋನಿ ಬಿಡುಗಡೆ ಮಾಡಿರುವ ಈ ಹೇಳಿಕೆಯಲ್ಲಿ ತಮಗೂ ಸ್ಫೋಟಕ್ಕೂ ಯಾವುದೇ ಸಂಬಂಧವಿಲ್ಲ ಎಂಬುದನ್ನು ಬಿಟ್ಟರೆ ಪ್ರಕರಣದ ಬಗ್ಗೆ ಹೆಚ್ಚಿನ ಯಾವುದೇ ಮಾಹಿತಿಗಳನ್ನು ನೀಡಲಾಗಿಲ್ಲ.
PR

2007ರ ಅಕ್ಟೋಬರ್ 12ರಂದು ಮೂರು ಮಂದಿಯ ಸಾವಿಗೆ ಕಾರಣವಾಗಿದ್ದ ಅಜ್ಮೀರ್ ಸ್ಫೋಟದಲ್ಲಿ ಸಂಘ ಪರಿವಾರದ ಕೈವಾಡವಿದೆ ಎಂಬ ಮಾಧ್ಯಮ ವರದಿಗಳನ್ನು ಅವರು ಸಂಪೂರ್ಣವಾಗಿ ತಳ್ಳಿ ಹಾಕಿದ್ದಾರೆ.

ಅದೇ ಹೊತ್ತಿಗೆ ಇದಕ್ಕೆ ಸಂಬಂಧಪಟ್ಟ ಆರೋಪಿತ ವ್ಯಕ್ತಿಯೊಬ್ಬನನ್ನು ಸಂಘ ಪರಿವಾರದ ಪ್ರಾದೇಶಿಕ ಕಚೇರಿಯಲ್ಲಿ ಹೊಂದಿದ್ದ ಜವಾಬ್ದಾರಿಗಳಿಂದ ತಕ್ಷಣದಿಂದಲೇ ಮುಕ್ತಗೊಳಿಸಲಾಗಿದೆ ಎಂದು ಹೇಳಿಕೆ ತಿಳಿಸಿದೆ. ಆದರೆ ಆ ವ್ಯಕ್ತಿ ಯಾರೆಂದು ಹೆಸರಿಸಿಲ್ಲ.

ಅಜ್ಮೀರ್ ಸ್ಫೋಟ ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆ ನಡೆಯಲಿದೆ ಎಂಬ ಭರವಸೆಯನ್ನು ನಾವು ಹೊಂದಿದ್ದು, ಈ ಸಂಬಂಧ ಆರೋಪಿತ ವ್ಯಕ್ತಿ ನಮ್ಮ ಪ್ರಾದೇಶಿಕ ಕಚೇರಿಯಲ್ಲಿ ಹೊಂದಿದ್ದ ಜವಾಬ್ದಾರಿಯಿಂದ ಈಗಿನಿಂದಲೇ ಬಿಡುಗಡೆ ಮಾಡಲಾಗಿದೆ ಎಂದು ಸೋನಿ ತಿಳಿಸಿದ್ದಾರೆ.

ಸ್ಫೋಟಗಳಿಗೆ ನಮ್ಮ ಸಂಬಂಧವನ್ನು ಕಲ್ಪಿಸಿ ಮಾಡಲಾಗುತ್ತಿರುವ ಮಾಧ್ಯಮ ವರದಿಗಳನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಸಂಘ ಪರಿವಾರವು ಇಂತಹ ಯಾವುದೇ ಕೃತ್ಯಗಳಲ್ಲಿ ಪಾಲ್ಗೊಂಡಿಲ್ಲ ಮತ್ತು ಅಂತವರನ್ನು ಬೆಂಬಲಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಅತ್ತ ರಾಜಸ್ತಾನದ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇಯವರು ಕೂಡ ಆರೆಸ್ಸೆಸ್ ಮೇಲಿನ ಆರೋಪಗಳನ್ನು ನಿರಾಕರಿಸಿದ್ದು, ಇದು ರಾಜಕೀಯ ಪ್ರೇರಿತವಾಗಿದೆ ಎಂದಿದ್ದಾರೆ.

ಈ ಆರೋಪಗಳು ಸಂಪೂರ್ಣವಾಗಿ ರಾಜಕೀಯ ಪ್ರೇರಿತವಾಗಿವೆ. ಸ್ಫೋಟ ನಡೆದಿದ್ದ ಸಂದರ್ಭದಲ್ಲಿ ತಕ್ಷಣವೇ ನಾನು ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಸಹಕರಿಸಿದ್ದೆ. ಆಗ ನಮ್ಮದೇ ಸರಕಾರ ಅಧಿಕಾರದಲ್ಲಿತ್ತು. ಕೇಂದ್ರದಲ್ಲಿ ಕಾಂಗ್ರೆಸ್ ಇತ್ತು. ಆಗ ಮಾಡದ ಆರೋಪ ಈಗ 17 ತಿಂಗಳುಗಳ ನಂತರ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿರುವಾಗ ಯಾಕೆ ಬಂದಿದೆ ಎಂದು ರಾಜೆ ಪ್ರಶ್ನಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ