ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನಿಮ್ಮ ನಾಯಿಗೆ ರಕ್ತ ಬೇಕೇ? ಚೆನ್ನೈಯಲ್ಲಿದೆ ಬ್ಲಡ್ ಬ್ಯಾಂಕ್! (Dogs blood bank | blood transfusion | TNVASU | Tamil Nadu)
Bookmark and Share Feedback Print
 
ತೀರಾ ಅನಾರೋಗ್ಯಕ್ಕೊಳಗಾದ ಮನುಷ್ಯರಿಗೆ ರಕ್ತದ ಸಮಸ್ಯೆಗಳೆದುರಾದಾಗ ಅಲ್ಲಲ್ಲಿ ಸಿಗುವ ಬ್ಲಡ್ ಬ್ಯಾಂಕ್‌ಗಳಿಗೆ ದೌಡಾಯಿಸಿ ರಕ್ತ ಪಡೆದು ಪ್ರಾಣ ಉಳಿಸಲಾಗುತ್ತದೆ. ಇದೇ ಸಮಸ್ಯೆ ನಾಯಿಗಳಿಗೆ ಎದುರಾದರೆ? ಇನ್ನು ಅದಕ್ಕೂ ಚಿಂತೆ ಮಾಡಬೇಕಾಗಿಲ್ಲ. ಯಾಕೆಂದರೆ ಚೆನ್ನೈಯಲ್ಲಿ ಶ್ವಾನಗಳ ರಕ್ತನಿಧಿ ತೆರೆಯಲಾಗಿದೆ.

ಇನ್ನು ಅನಾರೋಗ್ಯಗೊಂಡ ನಾಯಿ ರಕ್ತದ ಕೊರತೆಯಿಂದ ಬಳಲಿ ಪ್ರಾಣ ಕಳೆದುಕೊಳ್ಳುವ ಸಂದರ್ಭಗಳನ್ನು ತಪ್ಪಿಸಬಹುದು. ಇದು ಭಾರತದಲ್ಲಿ ತೆರೆಯಲ್ಪಟ್ಟಿರುವ ಮೊತ್ತ ಮೊದಲ ಶ್ವಾನಗಳ ಬ್ಲಡ್ ಬ್ಯಾಂಕ್ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.
PTI

ನಮ್ಮ ಕ್ಯಾಂಪಸ್ಸಿನಲ್ಲಿ ನಾಯಿಗಳಿಗಾಗಿಯೇ ಮೀಸಲಾದ ದೇಶದ ಮೊದಲ ಹೈಟೆಕ್ ಶ್ವಾನ ರಕ್ತನಿಧಿಯನ್ನು ನಾವು ತೆರೆದಿದ್ದೇವೆ ಎಂದು ತಮಿಳುನಾಡು ಪಶುವೈದ್ಯಕೀಯ ಮತ್ತು ಪ್ರಾಣಿ ವಿಜ್ಞಾನ ವಿಶ್ವವಿದ್ಯಾಲಯದ (ಟಿಎನ್‌ವಿಎಎಸ್‌ಯು) ಉಪ ಕುಲಪತಿ ಪಿ. ತಂಗರಾಜು ತಿಳಿಸಿದ್ದಾರೆ.

ಯುನಿವರ್ಸಿಟಿಯಲ್ಲಿ ಈಗಾಗಲೇ 28 ರಕ್ತದಾನಿಗಳು ತಮ್ಮ ನಾಯಿಗಳ ಹೆಸರುಗಳನ್ನು ನೋಂದಾಯಿಸಿದ್ದಾರೆ. ಅದಕ್ಕಿಂತಲೂ ಸಂತೋಷದ ವಿಚಾರವೆಂದರೆ ಕಳೆದ ಒಂದು ವಾರದಲ್ಲಿ ರಕ್ತ ಬ್ಯಾಂಕ್‌ 10 ನಾಯಿಗಳಿಗೆ ರಕ್ತವನ್ನು ಇಲ್ಲಿಂದ ನೀಡಿರುವುದು.

ಸಾಮಾನ್ಯವಾಗಿ ನಾಯಿಗಳಿಗೆ ರಕ್ತದ ಅಗತ್ಯ ಕಂಡು ಬರುವುದು ಕೆಂಪು ರಕ್ತ ಕಣಗಳ ನಾಶವಾಗುವ 'ಇರ್ಲೀಸಿಯಾ' ಸಮಸ್ಯೆಗಳು ಕಾಣಿಸಿಕೊಂಡಾಗ. ಉಳಿದ ಸಂದರ್ಭಗಳಲ್ಲಿ ರಕ್ತದ ಅವಶ್ಯಕತೆ ಬೀಳುವುದಿಲ್ಲ ಎನ್ನುತ್ತಾರೆ ತಂಗರಾಜು.

ನಾಯಿಗಳಲ್ಲಿ ಒಟ್ಟು ಎಂಟು ಬಗೆಯ ರಕ್ತ ಸಮೂಹಗಳಿದ್ದು, ಅದರಲ್ಲಿ ಡಿಇಎ1.1 ನೆಗೆಟಿವ್ ರಕ್ತವು ಪ್ರಮುಖವಾಗಿದೆ. ಈ ರಕ್ತ ಗುಂಪನ್ನು ಯಾವುದೇ ನಾಯಿಗಳಿಗೆ ನೀಡಬಹುದಾಗಿರುವುದರಿಂದ ಈ ಗುಂಪಿಗೆ ಬೇಡಿಕೆಯೂ ಹೆಚ್ಚಿದೆ ಎನ್ನುತ್ತಾರವರು.

ಅಂದ ಹಾಗೆ ಶ್ವಾನಗಳಿಗೂ ಮನುಷ್ಯರಂತೆ ರಕ್ತದಾನ ಮಾಡಲು ಕೆಲವೊಂದು ಷರತ್ತುಗಳಿವೆ. ಒಂದರಿಂದ ಎಂಟು ವರ್ಷದ ನಡುವಿನ ನಾಯಿ ಮಾತ್ರ ರಕ್ತದಾನ ಮಾಡಬಹುದಾಗಿದ್ದು, ವರ್ಷದಲ್ಲಿ ಹೆಚ್ಚೆಂದರೆ ನಾಲ್ಕು ಸಲ ಮಾತ್ರ ಅವಕಾಶವಿದೆ.
ಸಂಬಂಧಿತ ಮಾಹಿತಿ ಹುಡುಕಿ