ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮಾಯಾವತಿಯದ್ದು ಕಣ್ಣೊರೆಸುವ 'ಕ್ರಿಮಿ'ನಲ್ ತಂತ್ರ: ಕಾಂಗ್ರೆಸ್ (Mayawati | Uttar Pradesh | BSP | Congress)
Bookmark and Share Feedback Print
 
ಬಹುಜನ ಸಮಾಜ ಪಕ್ಷದ 500 ಕ್ರಿಮಿನಲ್ ಹಿನ್ನೆಲೆಯುಳ್ಳವರನ್ನು ವಜಾ ಮಾಡಿದ್ದೇನೆ ಎಂದಿರುವ ಉತ್ತರ ಪ್ರದೇಶ ಮಾಯಾವತಿಯವರ ಹೇಳಿಕೆಯನ್ನು ಕಣ್ಣೊರೆಸುವ ತಂತ್ರ ಎಂದು ಕಾಂಗ್ರೆಸ್ ಟೀಕಿಸಿದ್ದು, ಮೊದಲು ತನ್ನ ಸರಕಾರದಲ್ಲಿರುವ ಕ್ರಿಮಿನಲ್ ಸಚಿವರುಗಳನ್ನು ತೆಗೆದು ಹಾಕುವಂತೆ ಸವಾಲು ಹಾಕಿದೆ.

ತಾನು ಪಕ್ಷದಲ್ಲಿದ್ದ ಕ್ರಿಮಿನಲ್ ಹಿನ್ನೆಲೆಯುಳ್ಳವರನ್ನು ವಜಾಗೊಳಿಸಿದ್ದೇನೆ ಎಂದು ಮಾಯಾವತಿ ಆಗಾಗ ಹೇಳುತ್ತಾ ಬಂದಿದ್ದರೂ, ವಾಸ್ತವದಲ್ಲಿ ಅವರ ಪಕ್ಷವು ಉಚ್ಛಾಟನೆ ಮಾಡಿದವರ ಪಟ್ಟಿಯನ್ನು ಇನ್ನೂ ಬಿಡುಗಡೆಗೊಳಿಸಿಲ್ಲ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ತಿಳಿಸಿದ್ದಾರೆ.

ಮೊದಲು ಅವರು ಯಾರು? ಪಕ್ಷದ ಯಾವ ಹುದ್ದೆಯಲ್ಲಿದ್ದರು? ಅವರ ಹೆಸರುಗಳೇನು ಎಂಬುದನ್ನು ಬಹಿರಂಗಪಡಿಸಲಿ ಎಂದು ಆಗ್ರಹಿಸಿರುವ ಸಿಂಗ್, ಮಾಯಾವತಿಯವರದ್ದು ಕಣ್ಣೊರೆಸುವ ತಂತ್ರವೇ ಹೊರತು ಬೇರೇನಲ್ಲ. ಅವರ ಸರಕಾರದಲ್ಲೇ ಹಲವು ಸಚಿವರುಗಳು ಕ್ರಿಮಿನಲ್ ಹಿನ್ನೆಲೆಯುಳ್ಳವರು. ಅವರನ್ನು ವಜಾಗೊಳಿಸಲಿ ಎಂದು ಅವರು ಮಾಯಾವತಿಯವರಿಗೆ ಸವಾಲು ಹಾಕಿದರು.

ಅದೇ ಹೊತ್ತಿಗೆ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಚಾಲನೆ ನೀಡಿದ್ದ 'ಚೇತನ ಯಾತ್ರೆ'ಗಳು ಭಾರೀ ಯಶಸ್ಸು ಕಂಡಿವೆ ಎಂದು ಸಿಂಗ್ ತಿಳಿಸಿದ್ದಾರೆ.

ಮಾಯಾವತಿಯವರ ಸರಕಾರವು ರಾಜ್ಯದ ಬೊಕ್ಕಸವನ್ನು ಖಾಲಿ ಮಾಡಿದ್ದು, ಈ ಸಂಬಂಧ ವಿವರಣೆ ನೀಡುವಂತೆ ನಾವು ಬೇಡಿಕೆ ಸಲ್ಲಿಸಲಿದ್ದೇವೆ ಎಂದೂ ಅವರು ಹೇಳಿದ್ದಾರೆ.

ಕ್ರಿಮಿನಲ್ ಶಕ್ತಿಗಳ ಸಹಕಾರದೊಂದಿಗೆ ಯಾವತ್ತೂ ಅಧಿಕಾರಕ್ಕೆ ಬರುವ ಕನಸು ಕಾಣುವ ಸಮಾಜವಾದಿ ಪಕ್ಷ ಮತ್ತು ಇತರ ವಿರೋಧ ಪಕ್ಷಗಳು (ಕಾಂಗ್ರೆಸ್ ಮತ್ತು ಬಿಜೆಪಿ) ತಮ್ಮ ಪಿತೂರಿಯ ಅಂಗವಾಗಿ ಕ್ರಿಮಿನಲ್ ಶಕ್ತಿಗಳನ್ನು ವಿಧಾನಸಭಾ ಚುನಾವಣೆಗೂ ಮೊದಲು ಬಿಎಸ್‌ಪಿಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದರು. ಅವರನ್ನು ಪಕ್ಷದಿಂದ ಹೊರ ದಬ್ಬಲಾಗಿದೆ ಎಂದು ಮಾಯಾವತಿ ಕೆಲ ದಿನಗಳ ಹಿಂದೆ ಹೇಳಿಕೆ ನೀಡಿದ್ದರು.
ಸಂಬಂಧಿತ ಮಾಹಿತಿ ಹುಡುಕಿ