ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನೀವು ನಿಜಕ್ಕೂ ಭಾರತೀಯರೋ?: ಲಾಲೂಗೆ ಅನಂತ್ ಪ್ರಶ್ನೆ (Anant Kumar | BJP | Lalu Prasad Yadav | RJD)
Bookmark and Share Feedback Print
 
ಬಾಂಗ್ಲಾದೇಶದ ನುಸುಳುಕೋರರ ಕುರಿತು ಲೋಕಸಭೆಯಲ್ಲಿ ಚರ್ಚೆ ನಡೆಸಲು ಬಿಜೆಪಿಯ ಅನಂತ್ ಕುಮಾರ್ ಮುಂದಾಗಿದ್ದರೆ, ಆರ್‌ಜೆಡಿಯ ಲಾಲೂ ಪ್ರಸಾದ್ ಯಾದವ್ ಹಿಂದುಳಿದ ವರ್ಗಗಳ ವಿಚಾರವನ್ನು ಪ್ರಸ್ತಾಪಿಸಿದ್ದರು. ಈ ಕುರಿತು ಇಬ್ಬರು ನಾಯಕರ ನಡುವೆ ನಡೆದ ವಾಗ್ವಾದವು ಸಂಸತ್ತಿನಲ್ಲಿ ಭಾರೀ ಕೋಲಾಹಲವನ್ನೇ ಸೃಷ್ಟಿಸಿತು.

ಬಾಂಗ್ಲಾದೇಶದಿಂದ ಅಕ್ರಮವಾಗಿ ವಲಸೆ ಬರುತ್ತಿರುವವರು ಭಾರತೀಯ ಪ್ರಜೆಗಳೆಂದು ನೋಂದಣಿ ಮಾಡಿಕೊಳ್ಳುತ್ತಿದ್ದಾರೆ, ಈ ಕುರಿತು ಚರ್ಚೆ ನಡೆಯಬೇಕು. ಇದು ಆಂತರಿಕ ಕ್ಷೋಭೆ ಮತ್ತು ವಿದೇಶಗಳ ಆಕ್ರಮಣಕ್ಕೆ ಸಂಬಂಧಿಸಿದ್ದು ಎಂದು 2011ರ ಜನಗಣತಿ ಕುರಿತು ಚರ್ಚೆ ಆರಂಭವಾದ ಹೊತ್ತಿನಲ್ಲಿ ಅನಂತ್ ಕುಮಾರ್ ಹೇಳಿದ್ದರು.

ಈ ಹೊತ್ತಿನಲ್ಲಿ ಕ್ಷುದ್ರರಾದ ಲಾಲೂ, ಬಿಜೆಪಿಯು ಪದೇಪದೇ ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳ ಕುರಿತು ತಗಾದೆ ತೆಗೆಯುತ್ತಾ, ಹಿಂದುಳಿದ ವರ್ಗಗಳ ಜನಗಣತಿ ವಿಚಾರದ ಕುರಿತು ನಿರ್ಲಕ್ಷ್ಯ ಮಾಡುತ್ತಿದೆ ಎಂದು ಅನಂತ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು.

ಇದನ್ನು ನಾನು ಕೂಡ ಬೆಂಬಲಿಸುತ್ತೇನೆ, ಆದರೆ ಮೊದಲು ರಾಷ್ಟ್ರೀಯ ಭದ್ರತೆಗೆ ಸಂಬಂಧಪಟ್ಟ ವಿಚಾರವನ್ನು ಚರ್ಚೆಗೆ ಕೈಗೆತ್ತಿಕೊಳ್ಳಬೇಕು ಎಂದು ಅನಂತ್ ಕುಮಾರ್ ಪಟ್ಟು ಹಿಡಿದರು.

ಬಿಜೆಪಿ ನಾಯಕ ಪದೇ ಪದೇ ತನ್ನ ಮಾತಿನಲ್ಲಿ 'ಅಕ್ರಮ ವಲಸಿಗರು' ಎನ್ನುತ್ತಿರುವುದನ್ನು ಆಕ್ಷೇಪಿಸಿದ ಲಾಲೂ, ಇದು ಕೇವಲ ಅವರ ಭಾಷಣದಲ್ಲಿ ಮಾತ್ರ ಇದೆ ಎನ್ನುತ್ತಿದ್ದಂತೆ ಕೆಂಡಾಮಂಡಲರಾದ ಅನಂತ್, 'ನೀವು ಭಾರತದಲ್ಲಿದ್ದೀರೋ ಅಥವಾ ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿದ್ದೀರೋ ಎಂಬುವುದನ್ನು ಸ್ಪಷ್ಟಪಡಿಸಬೇಕು' ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ತೀವ್ರ ಕಠಿಣ ಪದಗಳನ್ನು ಬಳಸಿದ ಅನಂತ್ ವಿರುದ್ಧ ಲಾಲೂ ಕೂಡ ಖಾರವಾಗಿಯೇ ಪ್ರತಿಕ್ರಿಯಿಸಿದರು. ಇವರಿಗೆ ಈ ಹೊತ್ತಿನಲ್ಲಿ ಸಮಾಜವಾದಿ ಪಕ್ಷ ಮತ್ತು ತೃಣಮೂಲಕ ಕಾಂಗ್ರೆಸ್ ಸದಸ್ಯರು ಕೂಡ ಬೆಂಬಲ ನೀಡಿದರಲ್ಲದೆ, ಅನಂತ್ ಕುಮಾರ್ ಕ್ಷಮೆ ಯಾಚಿಸಬೇಕೆಂದು ಆಗ್ರಹಿಸಿದರು.

ತೀವ್ರ ಗದ್ದಲ ಸೃಷ್ಟಿಯಾದ ಹಿನ್ನೆಲೆಯಲ್ಲಿ ಉಪ ಸ್ಪೀಕರ್ ಕರಿಯ ಮುಂಡ ಸದನವನ್ನು 3.30ಕ್ಕೆ ಮುಂದೂಡಿದರು.

ಬೇರೆ ದೇಶಗಳಲ್ಲಾದರೆ ಗಡಿ ಉಲ್ಲಂಘಿಸಿ ಅಕ್ರಮವಾಗಿ ಪ್ರವೇಶಿಸುವವರನ್ನು ಜೈಲಿಗೆ ಹಾಕಲಾಗುತ್ತದೆ. ಆದರೆ ಭಾರತದಲ್ಲಿ ಅವರಿಗೆ ಪೌರತ್ವವನ್ನು ನೀಡಿ, ಇತರ ಸೌಲಭ್ಯಗಳನ್ನು ನೀಡಲಾಗುತ್ತದೆ. ಮುಂದೊಂದು ದಿನ ಹಾಗೆ ಬಂದ ವ್ಯಕ್ತಿ ಲೋಕಸಭೆಗೆ ಆಯ್ಕೆಯಾಗಿ, ನಿಮ್ಮ ಪಕ್ಕದಲ್ಲೇ ಯುಪಿಎ ಸಚಿವರಾಗಿ ಕುಳಿತುಕೊಳ್ಳುತ್ತಾನೆ ಎಂದು ಸದನ ಮತ್ತೆ ಸೇರಿದ ಸಂದರ್ಭದಲ್ಲಿ ಅನಂತ್ ಕುಮಾರ್ ವಿಶ್ಲೇಷಿಸಿದರು.

ಬಳಿಕ ಎರಡೆರಡು ಬಾರಿ ಮುಂದೂಡಲ್ಪಟ್ಟ ಲೋಕಸಭಾ ಕಲಾಪವನ್ನು ಕೋಲಾಹಲದ ಹಿನ್ನೆಲೆಯಲ್ಲಿ ನಾಳೆಗೆ ಮುಂದೂಡಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ