ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಇನ್ನು ಕೇಂದ್ರವು ರಾಜ್ಯಪಾಲರನ್ನು ಬೇಕಾಬಿಟ್ಟಿ ಬದಲಿಸುವಂತಿಲ್ಲ! (Governor | Supreme Court | UPA | Congress)
Bookmark and Share Feedback Print
 
ಕೇಂದ್ರದಲ್ಲಿ ನೂತನ ಸರಕಾರವೊಂದು ಅಸ್ತಿತ್ವಕ್ಕೆ ಬಂದ ಕೂಡಲೇ ಈ ಹಿಂದಿನ ಸರಕಾರವು ರಾಜ್ಯಗಳಿಗೆ ನೇಮಿಸಿದ್ದ ರಾಜ್ಯಪಾಲರುಗಳನ್ನು ಬದಲಾಯಿಸುವ ಸರಕಾರಗಳ ಚಾಳಿಗೆ ಸರ್ವೋಚ್ಚ ನ್ಯಾಯಾಲಯವು ಬ್ರೇಕ್ ಹಾಕಿದೆ. ಇನ್ನು ಮುಂದೆ ಹಾಗೆ ನಡೆದುಕೊಳ್ಳಬೇಕಾದರೆ ಕೇಂದ್ರ ಸರಕಾರವು ಸಮರ್ಥ ಕಾರಣಗಳನ್ನು ನೀಡಬೇಕು, ಇಲ್ಲದೇ ಇದ್ದರೆ ನ್ಯಾಯಾಲಯವು ಮಧ್ಯಪ್ರವೇಶಿಸುವ ಅವಕಾಶ ಹೊಂದಿದೆ ಎಂದು ಸುಪ್ರೀಂ ತಿಳಿಸಿದೆ.

ಈ ಹಿಂದೆ ಕೇಂದ್ರದಲ್ಲಿ ಹೊಸ ಸರಕಾರವೊಂದು ಅಧಿಕಾರಕ್ಕೆ ಬಂದ ಕೂಡಲೇ ಅದಕ್ಕೂ ಹಿಂದಿನ ಸರಕಾರ ನೇಮಿಸಿದ್ದ ರಾಜ್ಯಪಾಲರುಗಳನ್ನು ಬದಲಾವಣೆ ಮಾಡುವಂತೆ ರಾಷ್ಟ್ರಪತಿಯವರಿಗೆ ಶಿಫಾರಸು ಮಾಡುವ ಮೂಲಕ ಸರಕಾರಗಳು ಸ್ವೇಚ್ಛಾಚಾರದ ವರ್ತನೆಗಳನ್ನು ತೋರುತ್ತಿದ್ದವು.

ಈ ಪ್ರಕರಣದ ಅಂತಿಮ ತೀರ್ಪು ನೀಡಿರುವ ಮುಖ್ಯ ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್ ನೇತೃತ್ವದ ಐದು ನ್ಯಾಯಾಧೀಶರ ಸಂವಿಧಾನಿಕ ಪೀಠವು, ದುರ್ನಡತೆ ಅಥವಾ ಅವ್ಯವಹಾರದಂತಹ ಸಮರ್ಥ ಕಾರಣಗಳನ್ನು ನೀಡದ ಹೊರತು ರಾಜ್ಯಪಾಲರುಗಳನ್ನು ಬದಲಾವಣೆ ಮಾಡುವಂತಿಲ್ಲ ಎಂದಿದೆ.

ರಾಜ್ಯಪಾಲರನ್ನು ನೇಮಿಸುವುದು ಮತ್ತು ಅವರು ರಾಜಭವನದಲ್ಲಿ ಉಳಿದುಕೊಳ್ಳುವುದು ರಾಷ್ಟ್ರಪತಿಯವರ ಅಪೇಕ್ಷೆ. ಅದರ ಹೊರತಾಗಿ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷದ ಅಥವಾ ಸರಕಾರದ ಜತೆ ಹೊಂದಿಕೊಳ್ಳುತ್ತಿಲ್ಲ ಎಂಬ ಕಾರಣಕ್ಕೆ ರಾಜ್ಯಪಾಲರುಗಳನ್ನು ಬದಲಾಯಿಸಲಾಗದು ಎಂದು ಅಪೆಕ್ಸ್ ಕೋರ್ಟ್ ತಿಳಿಸಿದೆ.

ರಾಜ್ಯಪಾಲರ ದೃಷ್ಟಿಕೋನವು ರಾಷ್ಟ್ರೀಯ ನೀತಿಯ ಜತೆ ಸಂಘರ್ಷ ಹುಟ್ಟಿಸುತ್ತಿದೆ ಎಂದಾದಲ್ಲಿ ಅವರ ಐದು ವರ್ಷಗಳ ಅಧಿಕಾರವಧಿಯನ್ನು ಮೊಟಕುಗೊಳಿಸಲು ಅಧಿಕಾರವಿದೆ ಎಂದು ಕೇಂದ್ರ ಸರಕಾರವು ವಾದಿಸಿತ್ತು.

ಎನ್‌ಡಿಎ ಸರಕಾರದಿಂದ ನೇಮಕಗೊಂಡಿದ್ದ ಉತ್ತರ ಪ್ರದೇಶ, ಗುಜರಾತ್, ಹರ್ಯಾಣ ಮತ್ತು ಒರಿಸ್ಸಾ ರಾಜ್ಯಗಳ ರಾಜ್ಯಪಾಲರುಗಳನ್ನು 2004ರಲ್ಲಿ ಯುಪಿಎ ಸರಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಕೂಡಲೇ ಬದಲಾಯಿಸಿದ ಕ್ರಮವನ್ನು ಆಗಿನ ಬಿಜೆಪಿ ಸಂಸದ ಬಿ.ಪಿ. ಸಿಂಘಾಲ್ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಮೂಲಕ ಪ್ರಶ್ನಿಸಿದ್ದರು.
ಸಂಬಂಧಿತ ಮಾಹಿತಿ ಹುಡುಕಿ