ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅಮೆರಿಕಾ ದಾಸನಾಗಲು ಹೊರಟಿದೆಯೇ ಕೇಂದ್ರ ಸರಕಾರ? (Lok Sabha | civil nuclear liability bill | USA | UPA govt)
Bookmark and Share Feedback Print
 
ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೂ ಕೇಂದ್ರ ಸರಕಾರವು ವಿವಾದಿತ ನಾಗರಿಕ ಪರಮಾಣು ಬಾಧ್ಯತಾ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಿದ್ದು, ಇದು ಅಸಂವಿಧಾನಿಕ ಎಂದಿರುವ ಬಿಜೆಪಿ ಲೋಕಸಭೆಯಿಂದ ಹೊರಗೆ ನಡೆದಿದೆ. ಇದರೊಂದಿಗೆ ಅಮೆರಿಕಾದ ಕಂಪನಿಗಳ ಹಿತ ರಕ್ಷಿಸಲು ಹೊರಟಿರುವ ಕೇಂದ್ರ ಸರಕಾರದ ವಿರುದ್ಧ ತೀವ್ರ ಟೀಕೆಗಳು ವ್ಯಕ್ತವಾಗುತ್ತಿವೆ.

ಇದು ಸಂವಿಧಾನದ ವಿಧಿಗಳಿಗೆ ಸಂಪೂರ್ಣ ವಿರುದ್ಧವಾಗಿದೆ. ಇದು ಅಕ್ರಮ ಮತ್ತು ಅಸಾಂವಿಧಾನಿಕ ಎಂದು ಬಿಜೆಪಿ ನಾಯಕ ಯಶವಂತ್ ಸಿನ್ಹಾ ಸದನದಲ್ಲಿ ತಿಳಿಸಿದ್ದಾರೆ. ಸರಕಾರವು ಅಮೆರಿಕಾದ ಒತ್ತಡದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದೂ ಸಿನ್ಹಾ ಇದೇ ಸಂದರ್ಭದಲ್ಲಿ ದೂಷಿಸಿದ್ದಾರೆ.

ತೀವ್ರ ವಿರೋಧದ ಹಿನ್ನೆಲೆಯಲ್ಲಿ ಸರಕಾರವು ಬಜೆಟ್ ಅಧಿವೇಶನದ ಮೊದಲಾರ್ಧದಲ್ಲಿ ಮಸೂದೆಯನ್ನು ಮಂಡಿಸುವ ನಿರ್ಧಾರದಿಂದ ಹಿಂದಕ್ಕೆ ಸರಿದಿತ್ತು. ಈ ಹಿಂದೆ ಮಾರ್ಚ್ ತಿಂಗಳಿನಲ್ಲೇ ಮಸೂದೆಯನ್ನು ಮಂಡಿಸಲಾಗುತ್ತದೆ ಎಂಬ ನಿರ್ಧಾರವನ್ನು ಸರಕಾರ ಮುಂದಕ್ಕೆ ಹಾಕಿತ್ತು.

ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್, ರಾಷ್ಟ್ರೀಯ ಜನತಾದಳದ ನಾಯಕ ಲಾಲೂ ಪ್ರಸಾದ್ ಯಾದವ್ ಅವರು ವಿತ್ತ ಸಚಿವ ಪ್ರಣಬ್ ಮುಖರ್ಜಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪಿ.ಕೆ. ಭನ್ಸಾಲ್ ಅವರನ್ನು ಭೇಟಿ ಈ ಮಸೂದೆಯನ್ನು ಬೆಂಬೆಲಿಸುವ ಭರವಸೆ ಪಡೆದುಕೊಂಡ ಬಳಿಕ ಸರಕಾರವು ಲೋಕಸಭೆಯಲ್ಲಿ ಮಂಡಿಸಿದೆ.

ಅಮೆರಿಕಾ - ಭಾರತ ನಡುವಿನ 2008ರ 123 ನಾಗರಿಕ ಪರಮಾಣು ಸಹಕಾರ ಒಪ್ಪಂದವು ಕಾರ್ಯಾಚರಿಸಲು ಅಗತ್ಯವಿರುವ ಕೊನೆಯ ಹೆಜ್ಜೆ ಬಾಧ್ಯತಾ ಮಸೂದೆ ಅಂಗೀಕಾರ. ಈ ಮಸೂದೆ ಅಂಗೀಕಾರ ಪಡೆದುಕೊಂಡರೆ, ಒಪ್ಪಂದದ ಹಣಕಾಸು ಸಮಸ್ಯೆಗಳಿಗೆ ಅಮೆರಿಕಾದ ಕಂಪನಿಗಳು ಹೆಚ್ಚು ಹೊಣೆಯಾಗುವುದಿಲ್ಲ.

ಮಸೂದೆಯ ಪ್ರಕಾರ ಪ್ರತಿ ಪರಮಾಣು ಅವಘಡಕ್ಕೆ ಕಂಪೆನಿಯು ಕನಿಷ್ಠ 500 ಕೋಟಿ ರೂಪಾಯಿಗಳಿಂದ ಗರಿಷ್ಠ 2142 ಕೋಟಿ ರೂಪಾಯಿಗಳವರೆಗೆ ಮಾತ್ರ ಹೊಣೆಗಾರಿಕೆಯನ್ನು ಹೊರಬೇಕಾಗುತ್ತದೆ. ಅಂದರೆ ಭಾರತದಲ್ಲಿ ದೊಡ್ಡ ಅವಘಢವೇನಾದರೂ ನಡೆದಲ್ಲಿ ಅದಕ್ಕೆ ಅಮೆರಿಕಾದ ಕಂಪನಿಗಳು ಯಾವುದೇ ಹೆಚ್ಚಿನ ಹೊಣೆಗಾರಿಕೆ ಹೊಂದಿರುವುದಿಲ್ಲ.

ಇದು ಪರಮಾಣು ಸಲಕರಣೆ-ಪರಿಕರಗಳು, ಸಾಧನಗಳ ಪೂರೈಕೆದಾರರು ಮತ್ತು ಪರಮಾಣು ಸ್ಥಾವರ ನಿರ್ವಹಣೆಗಾರರಿಗೆ ಲಾಭ ತರುವ ಮಸೂದೆ. ಪರಮಾಣು ಸ್ಥಾವರದಲ್ಲಿ ಯಾವುದೇ ರೀತಿಯ ಅಪಘಾತಗಳು ಸಂಭವಿಸಿದರೆ, ಆಗ ಅದಕ್ಕೆ ಸಾಧನಗಳನ್ನು ಪೂರೈಸಿದ ಕಂಪನಿ ಮತ್ತು ನಿರ್ವಹಣೆಗಾರರ ಮೇಲಿನ ಹೊಣೆಗಾರಿಕೆಯನ್ನು ಈ ಮಸೂದೆಯು ಕಡಿಮೆ ಮಾಡುತ್ತದೆ ಎನ್ನುವುದು ವಿರೋಧ ಪಕ್ಷಗಳ ಆರೋಪ.

ಪರಮಾಣು ಸ್ಥಾವರದಲ್ಲಿ ಯಾವುದೇ ಅವಘಢ ಸಂಭವಿಸಿದರೂ ಅದರ ಭಾರತೀಯ ನಿರ್ವಹಣೆದಾರರು ಕೇವಲ 500 ಕೋಟಿ ರೂಪಾಯಿ ಪರಿಹಾರಕ್ಕೆ ಮಾತ್ರ ಹೊಣೆಗಾರರಾಗಿರುತ್ತಾರೆ. ಅದನ್ನು ಕೇಂದ್ರ ಸರಕಾರವು 100 ಕೋಟಿ ರೂಪಾಯಿಗಳಿಗೆ ಇಳಿಕೆ ಮಾಡುವ ಹಕ್ಕನ್ನೂ ಹೊಂದಿದೆ ಎಂದು ಹೇಳಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ