ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕಸಬ್‌ಗೆ ಗಲ್ಲು ಶಿಕ್ಷೆ ವಿಧಿಸುವುದಕ್ಕೆ ಭಾರತದಲ್ಲೇ ವಿರೋಧ..!
(death penalty | Pakistan | Ajmal Amir Kasab | Moushumi Basu)
ಕಸಬ್‌ಗೆ ಗಲ್ಲು ಶಿಕ್ಷೆ ವಿಧಿಸುವುದಕ್ಕೆ ಭಾರತದಲ್ಲೇ ವಿರೋಧ..!
ನವದೆಹಲಿ, ಶುಕ್ರವಾರ, 7 ಮೇ 2010( 15:47 IST )
ಮುಂಬೈ ವಿಶೇಷ ನ್ಯಾಯಾಲಯವು ಪಾಕಿಸ್ತಾನಿ ಭಯೋತ್ಪಾದಕ ಮೊಹಮ್ಮದ್ ಅಜ್ಮಲ್ ಅಮೀರ್ ಕಸಬ್‌ಗೆ ಮರಣ ದಂಡನೆ ವಿಧಿಸಿರುವುದನ್ನು ಭಾರತದ ಶೇ.99.99ರಷ್ಟು ಮಂದಿ ಶ್ಲಾಘಿಸಿರಬಹುದು. ಆದರೆ ಉಳಿದಿರುವ ಮಾನವ ಹಕ್ಕುಗಳು ಮುಂತಾದ ಸಂಘಟನೆಗಳ ಕಾರ್ಯಕರ್ತರು, ಕಸಬ್‌ಗೆ ಗಲ್ಲು ಶಿಕ್ಷೆ ವಿಧಿಸುವುದರಿಂದ ಸಮಸ್ಯೆಗಳು ಪರಿಹಾರವಾಗುವುದಿಲ್ಲ ಎಂದು ಮರಣ ದಂಡನೆಯನ್ನು ತೀವ್ರವಾಗಿ ವಿರೋಧಿಸಿವೆ.
ನಮ್ಮ ತತ್ವಗಳಂತೆ ನಾವು ಮರಣ ದಂಡನೆ ಶಿಕ್ಷೆಯನ್ನು ವಿರೋಧಿಸುತ್ತಾ ಬಂದವರು. ಹಾಗಾಗಿ ಕಸಬ್ ಅಥವಾ ಕೋಳಿ (ನಿತಾರಿ ಹತ್ಯಾ ಪ್ರಕರಣದ ದೋಷಿ) ಯಾರಿಗೆ ಗಲ್ಲು ಶಿಕ್ಷೆ ನೀಡುವುದಿದ್ದರೂ ನಮ್ಮ ಅಭಿಪ್ರಾಯ ಬದಲಾಗದು ಎಂದು ಪ್ರಜಾಸತ್ತಾತ್ಮಕ ಹಕ್ಕುಗಳ ಒಕ್ಕೂಟ ಸಂಘಟನೆಯ ಕಾರ್ಯದರ್ಶಿ ಮೌಸಮಿ ಬಸು ತಿಳಿಸಿದ್ದಾರೆ.
PTI
ಯಾವುದೇ ದೇಶಕ್ಕೂ ವ್ಯಕ್ತಿಯೊಬ್ಬನ ಪ್ರಾಣವನ್ನು ತೆಗೆಯುವ ಹಕ್ಕಿಲ್ಲ. ಹಲವು ದೇಶಗಳು ಈಗಾಗಲೇ ಮರಣ ದಂಡನೆ ಶಿಕ್ಷೆಯನ್ನು ನಿಷೇಧಿಸಿವೆ. ಮರಣದಂಡನೆಗಳು ಯಾವುದೇ ಸಮಸ್ಯೆಗಳಿಗೆ ಪರಿಹಾರವನ್ನು ಸೂಚಿಸುವುದಿಲ್ಲ ಎಂದು ಮಾಧ್ಯಮಗಳಿಗೆ ಅವರು ತಿಳಿಸಿದ್ದಾರೆ.
ಇದೇ ರೀತಿ ಅಭಿಪ್ರಾಯಪಟ್ಟಿರುವುದು ನಾಗರಿಕ ಹಕ್ಕುಗಳ ಜನಪರ ಒಕ್ಕೂಟದ ಕವಿತಾ ಶ್ರೀವಾತ್ಸವ್. ಅವರೂ ಕಸಬ್ ಮರಣ ದಂಡನೆಯನ್ನು ವಿರೋಧಿಸಿದ್ದಾರೆ.
ಜೀವಾವಧಿ ಶಿಕ್ಷೆಯು ಕಠಿಣ ಶಿಕ್ಷೆಯಾಗಿದ್ದು, ಇದನ್ನು ಘೋರ ಅಪರಾಧಗಳನ್ನು ಮಾಡಿದವರಿಗೆ ಮಾತ್ರ ನೀಡಬೇಕು. ಕಸಬ್ ಪ್ರಕರಣದಲ್ಲೂ ಇದನ್ನೇ ನೀಡಬೇಕು. ಗಲ್ಲು ಶಿಕ್ಷೆಯನ್ನು ವಿರೋಧಿಸುವ ನಮ್ಮ ನಿಲುವಿಗೆ ನಾವು ಬದ್ಧರಾಗಿದ್ದೇವೆ. ಈಗಾಗಲೇ 130ಕ್ಕೂ ಹೆಚ್ಚು ದೇಶಗಳು ಈ ಶಿಕ್ಷೆಯನ್ನು ನಿಷೇಧಿಸಿವೆ. ಭಾರತದಲ್ಲಿ ಇದನ್ನು ಯಾಕೆ ಮಾಡಲಾಗುತ್ತಿಲ್ಲ ಎಂದು ಕವಿತಾ ಪ್ರಶ್ನಿಸುತ್ತಾರೆ.
ಭಾರತದಲ್ಲಿ ಕೊನೆಯ ಬಾರಿ ಗಲ್ಲು ಶಿಕ್ಷೆಯಾಗಿರುವುದು 2004ರ ಆಗಸ್ಟ್‌ನಲ್ಲಿ. 1990ರ ಮಾರ್ಚ್ ತಿಂಗಳಲ್ಲಿ ಕೊಲ್ಕತ್ತಾದ ಶಾಲಾ ಬಾಲಕಿಯನ್ನು ಅತ್ಯಾಚಾರವೆಸಗಿ ಕೊಲೆಗೈದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಧನಂಜಯ್ ಚಟರ್ಜಿ ಕ್ಷಮಾದಾನ ಅರ್ಜಿಯನ್ನು ಎ.ಪಿ.ಜೆ. ಅಬ್ದುಲ್ ಕಲಾಂ ತಳ್ಳಿ ಹಾಕಿದ್ದರು.