ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ರಿಕ್ಷಾ ಚಾಲಕ, ಮತ್ತಿಬ್ಬರು ಗೆಳೆಯರಿಂದ ಚಿತ್ರನಟಿ ಅತ್ಯಾಚಾರ (Auto driver | Rape | Film actress | Haryana)
Bookmark and Share Feedback Print
 
ಚಿತ್ರೀಕರಣ ಸ್ಥಳದಿಂದ ರಾತ್ರಿ ಹೊತ್ತು ರಿಕ್ಷಾದಲ್ಲಿ ತೆರಳಿದ್ದ ವಿವಾಹಿತ ನಟಿಯೊಬ್ಬಳನ್ನು ಆಟೋ ಚಾಲಕ ಮತ್ತು ಆತನ ಇಬ್ಬರು ಗೆಳೆಯರು ಸೇರಿ ಸಾಮೂಹಿಕ ಅತ್ಯಾಚಾರ ನಡೆಸಿದ್ದು, ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.

ದೆಹಲಿ ನಿವಾಸಿಯಾಗಿರುವ 25ರ ಹರೆಯದ ಮಾಡೆಲ್ ಕಂ ಚಿತ್ರನಟಿ ಹರ್ಯಾಣದ ಫರೀದಾಬಾದ್ ಜಿಲ್ಲೆಗೆ ಸಿನಿಮಾವೊಂದರ ಚಿತ್ರೀಕರಣಕ್ಕಾಗಿ ತೆರಳಿದ್ದಳು. ಈ ಸಂದರ್ಭದಲ್ಲಿ ರಾತ್ರಿ ಬಸ್ ಹಿಡಿಯಲೆಂದು ಆಟೋ ಮೂಲಕ ತೆರಳುತ್ತಿದ್ದಾಗ ಆಕೆಯನ್ನು ಅಪಹರಿಸಿ ಅತ್ಯಾಚಾರ ನಡೆಸಲಾಗಿದೆ.

ಅತ್ಯಾಚಾರಿಗಳನ್ನು ಝಾಕೀರ್, ಸತೀಶ್ ಮತ್ತು ಶಂಭು ಎಂದು ಗುರುತಿಸಲಾಗಿದೆ. ಇವರಲ್ಲಿ ಝಾಕೀರ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಇವರೆಲ್ಲರೂ ಬಲ್ಲಾಬ್‌ಘರ್‌ನ ಸುಭಾಷ್ ಕಾಲೊನಿ ನಿವಾಸಿಗಳೆಂದು ಪೊಲೀಸರು ತಿಳಿಸಿದ್ದಾರೆ.

ಅಪಾಯಕಾರಿ ಸಾಹಸಕ್ಕಿಳಿದಿದ್ದಳು...
ಮೂರು ದಿನ ನಡೆಯಬೇಕಾಗಿದ್ದ ಸಿನಿಮಾ ಶೂಟಿಂಗನ್ನು ಒಂದೇ ದಿನದಲ್ಲಿ ಮುಗಿಸಲಾಗಿತ್ತು. ಚಿತ್ರೀಕರಣ ತಂಡದ ಇತರರು ಅಂದು ಅಲ್ಲೇ ಉಳಿದುಕೊಳ್ಳಲು ನಿರ್ಧರಿಸಿದ್ದರೂ, ಅತ್ಯಾಚಾರಕ್ಕೊಳಗಾದ ನಟಿ ರಾತ್ರಿ 10 ಗಂಟೆಗೆ ಪಲ್ವಾಲ್ ಬಸ್ ನಿಲ್ದಾಣಕ್ಕೆ ತೆರಳಲು ನಿರ್ಧರಿಸಿದ್ದಳು.

ಈ ಸಂದರ್ಭದಲ್ಲಿ ಬಸ್ ಸಿಗದ ಕಾರಣ ಬಡಾರ್ಪುರ್ ಗಡಿಯವರೆಗೆ ಬಿಡುತ್ತೇನೆ ಎಂದು ಚಾಲಕನೊಬ್ಬ ಭರವಸೆ ನೀಡಿದ ಹಿನ್ನೆಲೆಯಲ್ಲಿ ಆಕೆ ರಿಕ್ಷಾವೊಂದನ್ನು ಬಾಡಿಗೆ ಪಡೆದಿದ್ದಳು. ಸ್ಪಲ್ಪ ಹೊತ್ತಿನಲ್ಲಿ ತನಗೆ ಅರ್ಜೆಂಟ್ ಫೋನ್ ಮಾಡಲಿದೆ ಎಂದ ಚಾಲಕ ಆಕೆಯ ಕೈಯಿಂದ ಮೊಬೈಲ್ ಪಡೆದುಕೊಂಡಿದ್ದ. ಈ ಹೊತ್ತಿನಲ್ಲಿ ಆತ ತನ್ನ ಇಬ್ಬರು ಗೆಳೆಯರನ್ನು ಎಲ್ಸಾನ್ ಚೌಕ್‌ಗೆ ಬರುವಂತೆ ಆಹ್ವಾನ ನೀಡಿದ್ದಲ್ಲದೆ, ಅಲ್ಲಿ ಅವರನ್ನೂ ರಿಕ್ಷಾಕ್ಕೆ ಹತ್ತಿಸಿಕೊಂಡಿದ್ದ.

ಸ್ವಲ್ಪ ಹೊತ್ತಿನಲ್ಲೇ ರಿಕ್ಷಾ ಹೆದ್ದಾರಿಯನ್ನು ಬಿಟ್ಟು ಒಳ ಮಾರ್ಗವನ್ನು ಹಿಡಿದಿತ್ತು. ಈ ಸಂದರ್ಭದಲ್ಲಿ ಬಲಿಪಶು ಪ್ರಶ್ನಿಸಿದಾಗ, ಬದಾರ್ಪುರ್ ಶೀಘ್ರವಾಗಿ ತಲುಪಲು ಅಡ್ಡದಾರಿಯಿದೆ ಎಂದು ರಿಕ್ಷಾ ಚಾಲಕ ಸಮಾಜಾಯಿಷಿ ನೀಡಿದ್ದ. ಅಷ್ಟರಲ್ಲಿ ನಿರ್ಜನ ಪ್ರದೇಶವೊಂದರಲ್ಲಿ ರಿಕ್ಷಾವನ್ನು ನಿಲ್ಲಿಸಿ ಚಿತ್ರನಟಿಯನ್ನು ನಿರಂತರವಾಗಿ ಮೂವರೂ ಹಲವು ಬಾರಿ ಅತ್ಯಾಚಾರ ನಡೆಸಿ ನಂತರ ಅಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.

ನಟಿಯನ್ನು ಚಿತ್ರೀಕರಣ ಸ್ಥಳಕ್ಕೆ ಬೆಳಿಗ್ಗೆ ಬಿಟ್ಟು ಬಂದಿದ್ದ ಗಂಡ ರಾತ್ರಿ ಕರೆ ಮಾಡುವಾಗ ನಾಟ್ ರೀಚೆಬಲ್ ಆಗಿತ್ತು. ಬಳಿಕ ಆತ ಹುಡುಕಾಟ ಆರಂಭಿಸಿದ್ದ. ಸ್ವಲ್ಪ ಹೊತ್ತಿನ ಬಳಿಕ ಆಕೆಯೇ ಗಂಡನನ್ನು ಸಂಪರ್ಕಿಸಿ ವಿವರಣೆ ನೀಡಿದ್ದಳು.

ಇದೀಗ ಅತ್ಯಾಚಾರಕ್ಕೊಳಗಾಗಿರುವ ನಟಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಗಿದೆ. ಅದರಲ್ಲಿ ಅತ್ಯಾಚಾರ ನಡೆದಿರುವುದು ಸಾಬೀತಾಗಿದೆ. ಮೂವರ ವಿರುದ್ಧವೂ ಅಪಹರಣ ಮತ್ತು ಅತ್ಯಾಚಾರ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ