ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪಾತಕಿ ಕಸಬ್ ನೇಣಿಗೆ ಹಾಕಲು ಮಾಮು ಸಿಂಗ್ ಸಿದ್ಧ! (Meerut hangman | Mammu Singh | Pakistani terrorist | Ajmal Amir Kasab)
Bookmark and Share Feedback Print
 
ಅತ್ತ ಮೊಹಮ್ಮದ್ ಅಜ್ಮಲ್ ಅಮೀರ್ ಕಸಬ್‌ಗೆ ಮುಂಬೈ ವಿಶೇಷ ನ್ಯಾಯಾಲಯವು ಮರಣದಂಡನೆ ಶಿಕ್ಷೆ ಘೋಷಿಸುತ್ತಿದ್ದಂತೆ ಆತನನ್ನು ನೇಣಿಗೆ ಹಾಕುವವರು ಯಾರು ಎಂಬ ಪ್ರಶ್ನೆ ಉದ್ಭವಿಸಿರುವ ಬೆನ್ನಿಗೆ ಮೀರತ್ ಸೆಂಟ್ರಲ್ ಜೈಲಿನ ವಧಾಕಾರರೊಬ್ಬರು ನಾನು ಸಿದ್ಧ ಎಂದು ಹೇಳಿಕೊಂಡಿದ್ದು, ಕುಣಿಕೆ ಸಿದ್ಧಪಡಿಸಲು ಬಯಸುತ್ತಿರುವುದಾಗಿ ತಿಳಿಸಿದ್ದಾರೆ.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ 'ವೆಬ್‌ದುನಿಯಾ'ವನ್ನು ಫಾಲೋ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಮುಂಬೈ ಭಯೋತ್ಪಾದನಾ ದಾಳಿಯಲ್ಲಿ ನೂರಾರು ಮಂದಿಯನ್ನು ಹೊಸಕಿ ಹಾಕಿದ ಕ್ರಿಮಿಯನ್ನು ಗಲ್ಲಿಗೆ ಹಾಕಲು ನಾನು ಸಿದ್ಧ ಎಂದು ಹೇಳಿಕೊಂಡಿರುವ ಮಾಮು ಸಿಂಗ್ ಎಂಬವರು ಪ್ರಸಕ್ತ ಮೀರತ್ ಸೆಂಟ್ರಲ್ ಜೈಲಿನಲ್ಲಿ ಹ್ಯಾಂಗ್‌ಮನ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇಂದಿರಾ ಗಾಂಧಿ ಹಂತಕರನ್ನು ದಶಕಗಳ ಹಿಂದೆ ಗಲ್ಲಿಗೇರಿಸಿದ್ದು ಇದೇ ಮಾಮು ಸಿಂಗ್ ತಂದೆ.

ಕಸಬ್‌ಗಾಗಿ ನೇಣು ಹಗ್ಗ ಸಿದ್ಧಪಡಿಸಲು ಮತ್ತು ಆತ ಸಾಯುವುದನ್ನು ನೋಡಲು ನಾನು ಬಯಸುತ್ತಿದ್ದೇನೆ. ಕಸಬ್‌ನನ್ನು ನೇಣಿಗೇರಿಸಲು ನನಗೆ ಅಧಿಕೃತ ಅವಕಾಶ ಸಿಗಲಿ ಎಂದು ನಾನು ಪ್ರಾರ್ಥಿಸುತ್ತಿದ್ದೇನೆ ಎಂದು ಮಾಮು ಸಿಂಗ್ ತಿಳಿಸಿದ್ದಾರೆ.

ಕಸಬ್‌ಗೆ ಮರಣ ದಂಡನೆ ವಿಧಿಸಿರುವುದು ನನಗೆ ಸಂತೋಷ ತಂದಿದೆ. ಆದಷ್ಟು ಬೇಗ ಆತನನ್ನು ನಾನೇ ಸ್ವತಃ ಗಲ್ಲಿಗೆ ಹಾಕಲು ಬಯಸುತ್ತಿದ್ದೇನೆ. ಆತನ ಸಾವು ನಮ್ಮ ದೇಶದ ಮೇಲೆ ದಾಳಿ ನಡೆಸಲು ಯತ್ನಿಸುವ ವೈರಿಗಳು, ಅದರಲ್ಲೂ ಪಾಕಿಸ್ತಾನಿ ಭಯೋತ್ಪಾದಕರು ಕನಿಷ್ಠ ನೂರು ಬಾರಿ ಪುನರಾಲೋಚಿಸುವಂತೆ ಮಾಡಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ರಾಜಸ್ತಾನ ಸೇರಿದಂತೆ ಹಲವು ರಾಜ್ಯಗಳಲ್ಲಿ ಕಳೆದ ನಾಲ್ಕು ದಶಕಗಳಿಂದ ಈ 65ರ ಮಾಮು ಸಿಂಗ್ ನೇರ ಅಥವಾ ಪರೋಕ್ಷವಾಗಿ ಪಾತಕಿಗಳನ್ನು ಗಲ್ಲಿಗೆ ಹಾಕುವ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡು ಬಂದಿದ್ದಾರೆ.

ಗಲ್ಲಿಗೇರಿಸುವುದು ಒಂದು ಕಲೆ. ನೇಣಿಗೇರಿಸುವ ಪ್ರಕ್ರಿಯೆ ಸರಳವಾಗುವ ನಿಟ್ಟಿನಲ್ಲಿ ಹಗ್ಗ ತಯಾರಿಸಲು ಕೆಲವು ಹಂತಗಳ ತಯಾರಿ ಅಗತ್ಯವಿರುತ್ತದೆ. ಯಾವುದೇ ವ್ಯಕ್ತಿಯನ್ನು ಗಲ್ಲಿಗೆ ಹಾಕುವ ಮೊದಲು ನಾನು ಮಾರ್ಜಕ, ತುಪ್ಪ ಮತ್ತು ಇತರ ದ್ರವ್ಯಗಳನ್ನು ಹಗ್ಗಕ್ಕೆ ಲೇಪಿಸುತ್ತೇನೆ. ಇದರಿಂದ ನೇಣು ಪ್ರಕ್ರಿಯೆ ಸರಾಗವಾಗಿ ನಡೆಯುತ್ತದೆ. ಅದಕ್ಕಿಂತಲೂ ಹೆಚ್ಚಾಗಿ ನೇಣಿಗೆ ಹಾಕುವ ವ್ಯಕ್ತಿ ತನ್ನ ಗಲ್ಲಿಗೇರಿಸುವ ಸಂದರ್ಭದಲ್ಲಿ ತನ್ನ ದೃಢ ಮನೋಭಾವವನ್ನು ಹೊಂದಿರುವುದು ಅಗತ್ಯ ಎಂದು 1989ರಲ್ಲಿ ಇಂದಿರಾ ಗಾಂಧಿ ಹಂತಕರಾದ ಕೇಹಾರ್ ಸಿಂಗ್ ಮತ್ತು ಸತ್ವಂತ್ ಸಿಂಗ್‌ರನ್ನು ನೇಣಿಗೇರಿಸಿದ್ದ ಕಲ್ಲು ಸಿಂಗ್ ಪುತ್ರ ವಿವರಣೆ ನೀಡಿದ್ದಾರೆ.

ಇಷ್ಟರವರೆಗೆ ಮಾಮು ಸಿಂಗ್ ಹಲವು ರಾಜ್ಯಗಳಲ್ಲಿ 10 ಮಂದಿಯನ್ನು ನೇಣಿಗೇರಿಸಿದ್ದಾರೆ. ಅವರ ಪ್ರಕಾರ ತನ್ನ ಅನುಭವವನ್ನು ಪರಿಗಣಿಸಿ ಸರಕಾರವು ತನ್ನನ್ನೇ ಕಸಬ್ ನೇಣಿಗೆ ಹಾಕಲು ಕರೆಸುತ್ತದೆ. ಹಾಗೆ ಮಾಡಿದಲ್ಲಿ ನನಗೆ ಅತೀವ ಸಂತೋಷವಾಗುತ್ತದೆ ಎಂದು ಹೇಳಿಕೊಂಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ