ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸದಸ್ಯರ ಗೌಜಿ-ಗದ್ದಲಗಳಿಗೆ ಸಂಸತ್ತಿನ 115 ಗಂಟೆ ಆಪೋಶನ! (budget session | Parliament | Lok Sabha | Rajya Sabha)
Bookmark and Share Feedback Print
 
ಕೋಟ್ಯಂತರ ರೂಪಾಯಿಗಳನ್ನು ವೆಚ್ಚ ಮಾಡಿ ನಡೆಸಲಾಗುವ ಸಂಸತ್ ಕಲಾಪಗಳಲ್ಲಿ ರಾಜಕೀಯ ಪಕ್ಷಗಳ ಸಿದ್ಧಾಂತಗಳ ಹೆಸರಿನಲ್ಲಿ ಅಮೂಲ್ಯ ಸಮಯವನ್ನು ಪೋಲು ಮಾಡಲಾಗುತ್ತಿದೆ. ಇದು ನಿನ್ನೆ ತಾನೆ ಮುಕ್ತಾಯಗೊಂಡಿರುವ ಬಜೆಟ್ ಅಧಿವೇಶನದಲ್ಲೂ ಮುಂದುವರಿದಿದೆ.

ಸುಮಾರು ಎರಡೂವರೆ ತಿಂಗಳುಗಳ ಕಾಲ ನಡೆದ ಸುದೀರ್ಘ ಅಧಿವೇಶನದಲ್ಲಿ ನಾಗರಿಕ ಮಹಿಳಾ ಮೀಸಲಾತಿ ಮಸೂದೆ, ಪರಮಾಣು ಬಾಧ್ಯತಾ ಮಸೂದೆ ಮತ್ತು ಬೆಲೆಯೇರಿಕೆ ಮುಂತಾದ ವಿಚಾರಗಳ ಕೋಲಾಹಲಗಳಿಗೆ 70 ಗಂಟೆಗಳು ಲೋಕಸಭೆಯಲ್ಲಿ ಪೋಲಾದರೆ, ರಾಜ್ಯಸಭೆಯಲ್ಲಿ ಸುಮಾರು 45 ಗಂಟೆಗಳಷ್ಟು ಬಲಿಯಾಗಿದೆ.

ಈ ಅಧಿವೇಶನವನ್ನು ಒಟ್ಟಾರೆ ಗಮನಕ್ಕೆ ತೆಗೆದುಕೊಂಡಾಗ ಭಾರೀ ಸಮಯ ಕಲಾಪಕ್ಕೆ ಅಡ್ಡಿಯುಂಟಾದ ಕಾರಣದಿಂದ ಮುಂದೂಡಲ್ಪಟ್ಟಿರುವುದರ ಪರಿಣಾಮಗಳನ್ನು ನಿರ್ಲಕ್ಷಿಸುವಂತಿಲ್ಲ ಎಂದು ರಾಜ್ಯಸಭಾಧ್ಯಕ್ಷ ಹಮೀದ್ ಅನ್ಸಾರಿ ಅಭಿಪ್ರಾಯಪಟ್ಟಿದ್ದಾರೆ.

ಅಲ್ಲದೆ ಸಂಸತ್ತಿನ ಘನತೆಯನ್ನು ಸಾರ್ವಜನಿಕವಾಗಿ ಕೆಳಮಟ್ಟಕ್ಕಿಳಿಸುವ ಸದಸ್ಯರ ವರ್ತನೆಯ ಬಗ್ಗೆ ಅವರು ಇದೇ ಹೊತ್ತಿಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಲೋಕಸಭೆಯ ಸ್ಪೀಕರ್ ಮೀರಾ ಕುಮಾರ್ ಕಲಾಪ ಸಮರ್ಪಕವಾಗಿ ನಡೆಯದೇ ಇರುವುದಕ್ಕೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಹಲವು ದಿನಗಳ ಕಾಲ ಸದನದ ಕಲಾಪಗಳು ನಡೆಯದೇ ಇರುವುದು ತೀವ್ರ ಕಳವಳಕಾರಿ ವಿಚಾರ ಎಂದು ಅವರು ತಿಳಿಸಿದ್ದಾರೆ.

ಸಂಸದೀಯ ವ್ಯವಹಾರಗಳ ಸಚಿವ ಪಿ.ಕೆ. ಭನ್ಸಾಲ್ ಅವರಂತೂ ಆಡಳಿತ ಪಕ್ಷದ ಸದಸ್ಯರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಆಡಳಿತ ಪಕ್ಷದ ಸದಸ್ಯರು ವಿರೋಧ ಪಕ್ಷಗಳ ಸದಸ್ಯರಂತೆ ಸದನದಲ್ಲಿ ನಡೆದುಕೊಂಡಿದ್ದಾರೆ. ಇದು ಸಲ್ಲದು ಎಂದು ಅವರು ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ