ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನಳಿನಿ ಮೊಬೈಲ್ ದಾಖಲೆಗಳ ತನಿಖೆ ನಡೆಯುತ್ತಿದೆ: ತಮಿಳುನಾಡು (Nalini | Rajiv Gandhi assassination case | Tamil Nadu | Vellore Prison)
Bookmark and Share Feedback Print
 
ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ನಳಿನಿ ಶ್ರೀಹರನ್ ತನ್ನ ಪುತ್ರಿ ಸೇರಿದಂತೆ ವಿದೇಶಗಳಲ್ಲಿರುವ ಇತರರಿಗೆ ವೆಲ್ಲೋರ್ ಜೈಲಿನಿಂದ ಮೊಬೈಲ್ ಮೂಲಕ ಮಾಡಿರುವ ಎಲ್ಲಾ ಕರೆಗಳ ದಾಖಲೆಗಳ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ತಮಿಳುನಾಡು ಸರಕಾರ ಸ್ಪಷ್ಟಪಡಿಸಿದೆ.

ರಾಜ್ಯ ಪೊಲೀಸ್ ವಿಭಾಗದ 'ಕ್ಯೂ' ಬ್ರಾಂಚ್ ಮೊಬೈಲ್ ಫೋನ್‌ನಿಂದ ಮಾಡಲಾದ ಮತ್ತು ಸ್ವೀಕರಿಸಲಾದ ಕರೆಗಳ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದೆ ಎಂದು ವಿಧಾನಸಭೆಗೆ ಕಾನೂನು ಸಚಿವ ದೊರೈ ಮುರುಗನ್ ತಿಳಿಸಿದ್ದಾರೆ.

ಈ ಸಂಬಂಧ ನಾವು ಸ್ವೀಕರಿಸುವ ಎಲ್ಲಾ ಮಾಹಿತಿಗಳನ್ನೂ ನಾವು ನಿಮ್ಮ ಜತೆ ಹಂಚಿಕೊಳ್ಳುತ್ತೇವೆ ಎಂದು ಕಾಂಗ್ರೆಸ್ ಸದಸ್ಯ ಡಿ. ಸುದರ್ಶನಂ ಎತ್ತಿದ ಪ್ರಶ್ನೆಯೊಂದಕ್ಕೆ ಸಚಿವರು ಉತ್ತರಿಸಿದರು.

ಸಾಕಷ್ಟು ತಪಾಸಣೆ ಮತ್ತು ಪರಿಶೀಲನೆಯ ಕೊರತೆಯಿಂದಾಗಿ ನಳಿನಿ ಜೈಲಿನೊಳಗೆ ಇದ್ದುಕೊಂಡೇ ಮೊಬೈಲ್ ಬಳಸಲು ಸಾಧ್ಯವಾಯಿತು ಎಂದು ಆರೋಪಿಸಿದ ಸುದರ್ಶನಂ, ಮಾಜಿ ಪ್ರಧಾನಿಯೊಬ್ಬರ ಹತ್ಯೆಗೆ ಸಂಬಂಧಿಸಿದಂತೆ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಆಕೆಯ ಈಗಿನ ನಡೆ ಆತಂಕ ಮೂಡಿಸಿದೆ ಎಂದಿದ್ದಾರೆ.

ಆಕೆ ತನ್ನ ಮೊಬೈಲಿನಿಂದ ಮಾಡಿರುವ ಕರೆಗಳು ಮತ್ತು ಸ್ವೀಕರಿಸಿರುವ ಕರೆಗಳ ದಾಖಲೆಗಳ ಕುರಿತು ಪರಿಶೀಲನೆ ನಡೆಸಲು ಕೇಂದ್ರ ಸರಕಾರದ ಸಹಕಾರ ಪಡೆದುಕೊಳ್ಳುವುದು ಉತ್ತಮ ಎಂದೂ ಅವರು ಇದೇ ಸಂದರ್ಭದಲ್ಲಿ ಸಲಹೆ ನೀಡಿದ್ದಾರೆ.

ಕಾರಾಗೃಹದಲ್ಲಿನ ಮಾಮೂಲಿ ತಪಾಸಣೆ ಸಂದರ್ಭದಲ್ಲಿ ನಳಿನಿಯ ಬಟ್ಟೆಯಿದ್ದ ಬ್ಯಾಗಿನಲ್ಲಿ ಮೊಬೈಲ್ ಪತ್ತೆಯಾಗಿತ್ತು. ತಕ್ಷಣವೇ ಅದನ್ನು ಅಧಿಕಾರಿಗಳಿಂದ ಕಸಿದುಕೊಂಡಿದ್ದ ನಳಿನಿ, ಶೌಚಾಲಯದ ಬೇಸಿನ್‌ಗೆ ಎಸೆದಿದ್ದಳು. ಅಲ್ಲಿಂದ ಅಧಿಕಾರಿಗಳು ಮೊಬೈಲನ್ನು ವಶಕ್ಕೆ ಪಡೆದುಕೊಂಡಿದ್ದರು.
ಸಂಬಂಧಿತ ಮಾಹಿತಿ ಹುಡುಕಿ