ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅಧಿವೇಶನ ಸಂದರ್ಭದಲ್ಲಿ ಅಳಗಿರಿ ಮಾಲ್ಡೀವ್ಸ್‌ನಲ್ಲಿದ್ರಂತೆ..! (DMK | M.K. Alagiri | Maldives | Parliament)
Bookmark and Share Feedback Print
 
ಬಜೆಟ್ ಅಧಿವೇಶನ ಸಂದರ್ಭದಲ್ಲಿ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಎಂ.ಕೆ. ಅಳಗಿರಿ ಸಂಸತ್ತಿಗೆ ಸತತ ಗೈರು ಹಾಜರಾಗಿರುವ ಹಿಂದಿನ ಜರೂರತ್ತು ಇದೀಗ ಬಹಿರಂಗವಾಗಿದೆ. ಸಚಿವರು ಈ ಸಂದರ್ಭದಲ್ಲಿ ಮಾಲ್ಡೀವ್ಸ್‌ನಲ್ಲಿದ್ದರು ಎಂದು ಸ್ವತಃ ಸಚಿವಾಲಯವು ತಿಳಿಸಿದ್ದು, ಈ ಮಾಹಿತಿ ಪ್ರಧಾನ ಮಂತ್ರಿಯವರ ಕಚೇರಿಗಿತ್ತು ಎಂದು ಹೇಳಿರುವುದು ಅಚ್ಚರಿ ಹುಟ್ಟಿಸಿದೆ.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ 'ವೆಬ್‌ದುನಿಯಾ'ವನ್ನು ಫಾಲೋ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಏಪ್ರಿಲ್ 17ರಿಂದ ಆರಂಭವಾಗುವಂತೆ 10 ದಿನಗಳ ಮಾಲ್ಡೀವ್ಸ್ ಪ್ರವಾಸಕ್ಕಾಗಿ ಏಪ್ರಿಲ್ 12ರಂದು ಅಳಗಿರಿಯವರು ಪ್ರಧಾನ ಮಂತ್ರಿಯವರ ಕಚೇರಿಯಿಂದ ಅನುಮತಿ ಪಡೆದುಕೊಂಡಿದ್ದರು ಎಂದು ಮಾಹಿತಿ ಹಕ್ಕು ಕಾಯ್ದೆಯ ಮೂಲಕ ಕೇಳಿದ್ದ ಪ್ರಶ್ನೆಗೆ ಸಚಿವಾಲಯವು ಉತ್ತರಿಸಿದೆ.

ಹಿಂದಿ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಹಿಡಿತ ಹೊಂದಿಲ್ಲದ ಅಳಗಿರಿ ಇದೇ ಕಾರಣದಿಂದಾಗಿ ಮುಜುಗರಕ್ಕೊಳಗಾಗುತ್ತಿದ್ದು ಸಂಸತ್ತಿನಿಂದ ದೂರ ಉಳಿಯುತ್ತಿದ್ದಾರೆ ಎಂದು ಹೇಳಲಾಗಿತ್ತು. ಈ ಸಂಬಂಧ ವಿರೋಧ ಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ ನಂತರ ಲೋಕಸಭಾ ಸ್ಪೀಕರ್ ಮೀರಾ ಕುಮಾರ್ ಅವರು ಅಳಗಿರಿಯನ್ನು ಕಲಾಪಕ್ಕೆ ಹಾಜರಾಗುವಂತೆ ಸೂಚಿಸಿದ್ದರು. ತಮಿಳಿನಲ್ಲೇ ಮಾತನಾಡಿ, ನಿಮಗೆ ಬೇಕಾದಲ್ಲಿ ದುಭಾಷಿಯನ್ನು ಒದಗಿಸಲಾಗುತ್ತದೆ ಎಂದೂ ಅವರು ಹೇಳಿದ್ದರು.

ಆದರೆ ಅಳಗಿರಿ ಕಲಾಪಕ್ಕೆ ಹಾಜರಾಗದೇ ಇರಲು ಭಾಷಾ ಸಮಸ್ಯೆ ಮಾತ್ರ ಕಾರಣವಲ್ಲ ಎಂಬ ವಿಚಾರ ಬಹಿರಂಗವಾಗಿದ್ದು, ಅವರು ಮಾಲ್ಡೀವ್ಸ್‌ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು ಎಂದು ಆರ್‌ಟಿಐ ಮಾಹಿತಿ ತಿಳಿಸಿದೆ.

ಪ್ರಧಾನ ಮಂತ್ರಿ ಅಥವಾ ಸಚಿವ ಸಂಪುಟದ ಕಾರ್ಯದರ್ಶಿಯವರಿಗೆ ಸಂಸತ್ ಅಧಿವೇಶನ ಸಂದರ್ಭದಲ್ಲಿನ ಖಾಸಗಿ ಪ್ರವಾಸದ ಕುರಿತು ಮಾಹಿತಿ ನೀಡಿದ್ದರೇ ಎಂದು ಸುಭಾಷ್ ಅಗರವಾಲ್ ಪ್ರಶ್ನಿಸಿದ್ದರು.

ಈ ಸಂಬಂಧ ಪ್ರಧಾನ ಮಂತ್ರಿಯವರ ಕಚೇರಿಗೆ ಮಾಹಿತಿ ನೀಡಲಾಗಿತ್ತು ಎಂದು ಅಳಗಿರಿಯವರ ಸಚಿವಾಲಯವು ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ