ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನನ್ನ ಪಕ್ಷಕ್ಕೆ ಅಮಿತಾಬ್, ಜಯಾ ಸೇರೋದಿಲ್ಲ: ಅಮರ್ ಸಿಂಗ್ (Amitabh Bachchan | Jaya Bachchan | Amar Singh | Lok Manch)
Bookmark and Share Feedback Print
 
2010ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಹೊತ್ತಿಗೆ ಅಸ್ತಿತ್ವ ಕಂಡುಕೊಳ್ಳಲಿರುವ ತನ್ನ ನೂತನ ಪಕ್ಷಕ್ಕೆ ಆಪ್ತ ಗೆಳೆಯ ಅಮಿತಾಬ್ ಬಚ್ಚನ್ ಮತ್ತು ಅವರ ಪತ್ನಿ ಜಯಾ ಬಚ್ಚನ್ ಸೇರ್ಪಡೆಯಾಗುವುದಿಲ್ಲ ಎಂದು ಸಮಾಜವಾದಿ ಪಕ್ಷದಿಂದ ಉಚ್ಛಾಟನೆಗೊಂಡಿರುವ ನಾಯಕ ಅಮರ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.

ಆದಷ್ಟು ಶೀಘ್ರದಲ್ಲಿ ಅಥವಾ ನಂತರವಾದರೂ ಈ 'ಲೋಕ ಮಂಚ್' ವೇದಿಕೆಯು ರಾಜಕೀಯ ಪಕ್ಷವಾಗಿ ಪರಿವರ್ತನೆಯಾಗಲಿದೆ. ಆದರೆ ಅಮಿತಾಬ್ ಅವರನ್ನು ರಾಜಕೀಯಕ್ಕೆ ಕರೆತರಲು ನನಗೆ ಯಾವುದೇ ಆಸಕ್ತಿಯಿಲ್ಲ ಎಂದು ಅವರು ಪತ್ರಕರ್ತರಿಗೆ ತಿಳಿಸಿದ್ದಾರೆ.

ಲೋಕ ಮಂಚ್ ಸೇರುವ ಕುರಿತು ಅಮಿತಾಬ್ ಅವರನ್ನು ಪ್ರಶ್ನಿಸಿದ್ದೀರಾ ಎಂಬ ಪ್ರಶ್ನೆಗೆ, ಅವರು ರಾಜಕೀಯದಲ್ಲಿ ಭಾಗಿಯಾದವರಲ್ಲ ಎಂದಷ್ಟೇ ಉತ್ತರಿಸಿದ್ದಾರೆ.

ಸಮಾಜವಾದಿ ಪಕ್ಷದಲ್ಲೇ ಉಳಿದುಕೊಂಡಿರುವ ಜಯಾ ಬಚ್ಚನ್ ಕುರಿತು ಮಾತಿಗಿಳಿದ ಸಿಂಗ್, ಆಕೆ ಈಗಾಗಲೇ ತನ್ನ ರಾಜಕೀಯ ನಿಲುವನ್ನು ಸ್ಪಷ್ಟಪಡಿಸಿದ್ದಾರೆ, ನಾನು ಅವರ ನಿರ್ಧಾರವನ್ನು ಗೌರವಿಸುತ್ತೇನೆ ಎಂದಿದ್ದಾರೆ.

ನಾವು ರಾಜಕೀಯದಿಂದ ದೂರು ಉಳಿಯುವವರಲ್ಲ. ಇದೇ ಸಂಬಂಧ ನಾನು ಜನವರಿಯಲ್ಲಿ ರಾಜಕೀಯೇತರ ಸಂಘಟನೆಯನ್ನು ಹುಟ್ಟು ಹಾಕಿದ್ದೆ. ಇದೇ ಮುಂದಿನ ದಿನಗಳಲ್ಲಿ ನನ್ನ ರಾಜಕೀಯ ಪಕ್ಷವಾಗಲಿದೆ ಎಂದು 54ರ ಹರೆಯದ ಸಿಂಗ್ ವಿವರಣೆ ನೀಡಿದರು.

ಅದಕ್ಕೂ ಮೊದಲು ಸಮಾಜವಾದಿ ಪಕ್ಷದ ವರಿಷ್ಠ ಮುಲಾಯಂ ಸಿಂಗ್ ಯಾದವ್ ವಿರುದ್ಧ ಸಿಂಗ್ ತೀವ್ರ ವಾಗ್ದಾಳಿ ನಡೆಸಿದ್ದರು.

ಅವರು ನನ್ನ ವಿರುದ್ಧ ಏನೂ ಹೇಳಿರಲಿಲ್ಲ. ಬದಲಿಗೆ ಕಾರ್ಯಕರ್ತರನ್ನು ನನ್ನ ವಿರುದ್ಧ ಛೂ ಬಿಟ್ಟರು. ಇದಕ್ಕೆ ಕಾರಣ ಅವರ ವೈಯಕ್ತಿಕ ಹಿತಾಸಕ್ತಿ ಎಂದು ಹರಿಹಾಯ್ದಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ