ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಉಗ್ರರ ಕೊಂದ ಪೊಲೀಸರನ್ನು 'ಕಾಂ' ಜೈಲಿಗೆ ಹಾಕುತ್ತಿದೆ: ಬಿಜೆಪಿ (CBI | BJP | Congress | Nitin Gadkari)
Bookmark and Share Feedback Print
 
ಭಯೋತ್ಪಾದಕರನ್ನು ಎನ್‌ಕೌಂಟರಿನಲ್ಲಿ ಮುಗಿಸಿದ ಪೊಲೀಸರನ್ನು ಕೇಂದ್ರ ಸರಕಾರವು ಪಿತೂರಿ ನಡೆಸಿ ಬಂಧಿಸುತ್ತಿದೆ; ಸಿಬಿಐ ಎಂದರೆ ಕೇಂದ್ರೀಯ ತನಿಖಾ ದಳವಲ್ಲ, ಕಾಂಗ್ರೆಸ್ ತನಿಖಾ ದಳ; ಹಣಕಾಸು ಮಸೂದೆ ವಿರುದ್ಧ ಬಿಜೆಪಿ ಮಂಡಿಸಿದ್ದ ಖಂಡನಾ ನಿರ್ಣಯದಲ್ಲಿ ಯುಪಿಎ ಸರಕಾರ ಗೆಲುವು ಸಾಧಿಸಲು ಕಾರಣ ಸಿಬಿಐ -- ಹೀಗೆಲ್ಲಾ ಆಡಳಿತ ಪಕ್ಷ ಮತ್ತು ಕೇಂದ್ರ ಸರಕಾರವನ್ನು ತೀವ್ರವಾಗಿ ಟೀಕಿಸಿರುವುದು ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ.

ರಾಜಧಾನಿಯಲ್ಲಿ ನಡೆದ ಸಿಬಿಐ ವಿಶ್ವಾಸಾರ್ಹತೆ ಕುರಿತ ವಿಚಾರಗೋಷ್ಠಿಯಲ್ಲಿ ಪಾಲ್ಗೊಂಡಿದ್ದ ಗಡ್ಕರಿ ಕೇಂದ್ರ ಸರಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

ಭಯೋತ್ಪಾದನಾ ದಾಳಿಗಳ ಸಂಬಂಧ ದೋಷಿಗಳೆಂದು ನ್ಯಾಯಾಲಯಗಳು ತೀರ್ಪು ನೀಡಿದರೂ ಅವರಿಗೆ ಶಿಕ್ಷೆ ನೀಡುವಲ್ಲಿ ಕಾಂಗ್ರೆಸ್ ನೇತೃತ್ವದ ಕೇಂದ್ರ ಸರಕಾರ ಮೃದು ನೀತಿ ಅನುಸರಿಸುತ್ತಿದೆ. ಅದರ ಬದಲು ಭಯೋತ್ಪಾದಕರನ್ನು ಮಟ್ಟ ಹಾಕುವಲ್ಲಿ ಶ್ರಮಿಸಿದ ಪೊಲೀಸರನ್ನೇ ಜೈಲಿಗೆ ತಳ್ಳುತ್ತಿದೆ ಎಂದು ಗುಜರಾತ್ ನಕಲಿ ಎನ್‌ಕೌಂಟರ್ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ಪೊಲೀಸ್ ಅಧಿಕಾರಿಗಳ ಪ್ರಕರಣವನ್ನು ಉಲ್ಲೇಖಿಸುತ್ತಾ ಟೀಕಿಸಿದರು.

ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಅವರನ್ನು ಉಲ್ಲೇಖಿಸುತ್ತಾ ಮತ್ತೊಂದು ಸುತ್ತಿನ ದಾಳಿ ನಡೆಸಿರುವ ಗಡ್ಕರಿ, ಆಡಳಿತ ಪಕ್ಷವು ಉತ್ತರ ಪ್ರದೇಶದ ಅಜಂಗಢಕ್ಕೆ ಭೇಟಿ ನೀಡುವ ಮೂಲಕ ಭಯೋತ್ಪಾದಕರನ್ನು ವೈಭವೀಕರಿಸುತ್ತಿದೆ ಎಂದರು. ಅಜಂಗಢವನ್ನು ಭಯೋತ್ಪಾದಕರ ಸ್ವರ್ಗ ಎಂದೇ ಹೇಳಲಾಗುತ್ತಿರುವುದೇ ಗಡ್ಕರಿ ಟೀಕೆಗೆ ಕಾರಣ.

ಅದೇ ಹೊತ್ತಿಗೆ ಗುಜರಾತ್‌ನಲ್ಲಿ ನಕಲಿ ಎನ್‌ಕೌಂಟರ್‌ಗಳು ನಡೆದಿರುವುದನ್ನು ಒಪ್ಪಿಕೊಂಡಿರುವ ಅವರು, ಈ ವಿಚಾರದಲ್ಲಿ ಸಿಬಿಐ ಮೂಲಕ ಕೇಂದ್ರ ಸರಕಾರವು ರಾಜ್ಯ ಸರಕಾರವನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿದೆ ಎಂದಿದ್ದಾರೆ.

ಉತ್ತರ ಪ್ರದೇಶ ಮತ್ತು ಆಂಧ್ರಪ್ರದೇಶಗಳಲ್ಲಿ ಇದಕ್ಕಿಂತಲೂ ಹೆಚ್ಚಿನ ನಕಲಿ ಎನ್‌ಕೌಂಟರುಗಳು ನಡೆದಿವೆ. ಅಲ್ಲಿ ಯಾಕೆ ಸಿಬಿಐ ತನಿಖೆ ನಡೆಸುತ್ತಿಲ್ಲ ಎಂದು ಪ್ರಶ್ನಿಸಿರುವ ಅವರು, ಸಿಬಿಐ ತನಿಖಾ ದಳವು ಎಐಸಿಸಿ ತೆಕ್ಕೆಗೆ ಸರಿಯುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಸಿಬಿಐಯಿಂದಾಗಿ ಯುಪಿಎ ಸರಕಾರ ಉಸಿರಾಡುತ್ತಿದೆ. ಸಿಬಿಐ ಅಂದರೆ ಈಗ ಕಾಂಗ್ರೆಸ್ ಪಕ್ಷದ ಕಚೇರಿಯಂತಾಗಿದೆ. ಇದೇ ಕಾರಣದಿಂದ ಇತ್ತೀಚೆಗೆ ಬಿಜೆಪಿ ಮತ್ತು ಎಡಪಕ್ಷಗಳು ಮಂಡಿಸಿದ್ದ ಖಂಡನಾ ನಿರ್ಣಯದಲ್ಲಿ ಸರಕಾರದ ಪರವಾಗಿ ಫಲಿತಾಂಶ ಬರುವಂತೆ ನೋಡಿಕೊಳ್ಳಲಾಗಿದೆ ಎಂದು ಆರೋಪಿಸಿದರು.

ಕಸಬ್‌ಗೆ ಹೇಗೆ ಗಲ್ಲು ಕೊಡ್ತಾರೆ?
ಮುಂಬೈ ದಾಳಿ ಸಂಬಂಧ ಮರಣ ದಂಡನೆ ಶಿಕ್ಷೆ ಪಡೆದುಕೊಂಡಿರುವ ಪಾಕಿಸ್ತಾನಿ ಭಯೋತ್ಪಾದಕ ಮೊಹಮ್ಮದ್ ಅಜ್ಮಲ್ ಅಮೀರ್ ಕಸಬ್‌ನನ್ನು ಕಾಂಗ್ರೆಸ್ ನೇತೃತ್ವದ ಸರಕಾರವು ಗಲ್ಲಿಗೇರಿಸುವ ಕುರಿತು ಯಾವುದೇ ಖಚಿತತೆಯಿಲ್ಲ ಎಂದು ಇದೇ ಸಂದರ್ಭದಲ್ಲಿ ಗಡ್ಕರಿ ಪುನರುಚ್ಛರಿಸಿದ್ದಾರೆ.

ಅವರು ಅಫ್ಜಲ್ ಗುರುವನ್ನೇ ಗಲ್ಲಿಗೆ ಹಾಕಿಲ್ಲ. ಇನ್ನು 55ನೇ ಸ್ಥಾನದಲ್ಲಿ ಶಿಕ್ಷೆಯ ಸಾಲಿನಲ್ಲಿರುವ ಕಸಬ್‌ನನ್ನು ಹೇಗೆ ಅವರು ಗಲ್ಲಿಗೇರಿಸುತ್ತಾರೆ? ಖಂಡಿತಾ ಸರಕಾರ ಆತನನ್ನು ನೇಣಿಗೆ ಹಾಕದು ಎಂದರು.
ಸಂಬಂಧಿತ ಮಾಹಿತಿ ಹುಡುಕಿ