ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅಫ್ಜಲ್ ಗುರುವಿಗೆ ಪಾಳಿ ತಪ್ಪಿಸಿ ಗಲ್ಲು ಬೇಡ: ಒಮರ್ ಅಬ್ದುಲ್ಲಾ (Omar Abdullah | Afzal Guru | Indian parliament attack | Jammu and Kashmir)
Bookmark and Share Feedback Print
 
2001ರಲ್ಲಿ ನಡೆದ ಭಾರತೀಯ ಸಂಸತ್ ಮೇಲಿನ ದಾಳಿ ರೂವಾರಿ ಅಫ್ಜಲ್ ಗುರುವಿನ ಮರಣ ದಂಡನೆ ಕುರಿತು ಕಾನೂನು ತನ್ನದೇ ಹಾದಿಯಲ್ಲಿ ಸಾಗಬೇಕು ಎಂದು ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಹೇಳಿದ್ದು, ಯಾವುದೇ ಕಾರಣಕ್ಕೂ ಪಾಳಿ ತಪ್ಪಿಸಿ ಗಲ್ಲು ಶಿಕ್ಷೆ ಜಾರಿಗೊಳಿಸಬಾರದು ಎಂದು ಒತ್ತಾಯಿಸಿದ್ದಾರೆ.

ಕಾನೂನು ತನ್ನ ಪ್ರಕ್ರಿಯೆಯನ್ನು ಸರದಿಯಂತೆ ಮುಗಿಸಲು ಅವಕಾಶ ನೀಡಿ. ಅಫ್ಜಲ್ ಗುರು ತನ್ನ ಕ್ಷಮಾದಾನಕ್ಕಾಗಿ ರಾಷ್ಟ್ರಪತಿಯವರಿಗೆ ಮನವಿ ಸಲ್ಲಿಸಿದ್ದು, ಆತನ ಹೆಸರು 30ನೇ ಸ್ಥಾನದಲ್ಲಿದೆ. ಅದಕ್ಕೂ ಮೊದಲಿನ 29 ಮಂದಿಯ ಬಗ್ಗೆ ಮೊದಲು ಮಾತನಾಡೋಣ ಎಂದು ಜಮ್ಮುವಿನಿಂದ 13 ಕಿಲೋ ಮೀಟರ್ ದೂರದಲ್ಲಿರುವ ನಾಗ್ರೋಟಾ ಎಂಬಲ್ಲಿ ಮಾಜಿ ಸೈನಿಕರ ರ‌್ಯಾಲಿಯೊಂದನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅಬ್ದುಲ್ಲಾ ತಿಳಿಸಿದ್ದಾರೆ.

ಪ್ರತಿ ಬಾರಿಯೂ ಅಫ್ಜಲ್ ಹೆಸರನ್ನು ಪ್ರಸ್ತಾಪಿಸಿ, ಅದನ್ನು ಬೃಹತ್ ವಿಚಾರವನ್ನಾಗಿ ಮಾಡುವುದು ಯಾವ ಕಾರಣಕ್ಕಾಗಿ? ಉತ್ತರ ಸರಳವಾಗಿದೆ, ಯಾಕೆಂದರೆ ಆತನ ಹೆಸರು ಸಿಕ್ಕಾಪಟ್ಟೆ ಗ್ಲ್ಯಾಮರಸ್ ಆಗಿದೆ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.

ಕಾಶ್ಮೀರ ಕಣಿವೆಯ ಸೋಪೊರೆ ನಿವಾಸಿಯಾಗಿರುವ ಅಫ್ಜಲ್ ಗುರು 2001ರ ಡಿಸೆಂಬರ್ 31ರಂದು ಸಂಸತ್ತಿನ ಮೇಲೆ ನಡೆದಿದ್ದ ದಾಳಿ ಪಿತೂರಿಯಲ್ಲಿ ತಪ್ಪಿತಸ್ಥನೆಂದು ಸಾಬೀತಾಗಿದ್ದು, ಆತನಿಗೆ ನೀಡಲಾಗಿದ್ದ ಮರಣ ದಂಡನೆ ಶಿಕ್ಷೆಯನ್ನು 2006ರ ಅಕ್ಟೋಬರ್‌ನಲ್ಲಿ ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿತ್ತು.

ಅಫ್ಜಲ್ ಗುರುವನ್ನು ಗಲ್ಲಿಗೇರಿಸುವುದರಿಂದ ಜಮ್ಮು-ಕಾಶ್ಮೀರದ ಪರಿಸ್ಥಿತಿ ತೀರಾ ಹದಗೆಡಬಹುದು ಎಂದು ಕಾಶ್ಮೀರಿ ನಾಯಕರು ಭೀತಿ ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದ್ದು, ಮತ ಬ್ಯಾಂಕ್ ರಾಜಕಾರಣವೂ ಇದರ ಹಿಂದಿದೆ ಎಂದು ವಿರೋಧ ಪಕ್ಷಗಳು ಆರೋಪಿಸುತ್ತಿವೆ.

2008ರ ನವೆಂಬರ್ ತಿಂಗಳಲ್ಲಿ ಮುಂಬೈ ಮೇಲೆ ದಾಳಿ ನಡೆಸಿದ ಪ್ರಕರಣದಲ್ಲಿ ಪಾಕಿಸ್ತಾನಿ ಭಯೋತ್ಪಾದಕ ಅಜ್ಮಲ್ ಅಮೀರ್ ಕಸಬ್‌ಗೆ ವಿಶೇಷ ನ್ಯಾಯಾಲಯವು ಗಲ್ಲು ಶಿಕ್ಷೆ ವಿಧಿಸಿದ್ದು, ಈ ಹಿನ್ನೆಲೆಯಲ್ಲಿ ಗಲ್ಲು ಶಿಕ್ಷೆಯ ಸರದಿಯಲ್ಲಿರುವವರ ಬಗ್ಗೆ ವಿರೋಧ ಪಕ್ಷಗಳು ಪ್ರಶ್ನೆಗಳನ್ನು ಎತ್ತುತ್ತಿವೆ.
ಸಂಬಂಧಿತ ಮಾಹಿತಿ ಹುಡುಕಿ